ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌... ಡಿಸೆಂಬರ್‌ 12ರಂದು ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ರಾಜ್ಯ ಸರ್ಕಾರ: ಕಾರಣವೇನು?

Mon, 09 Dec 2024-4:52 pm,

ಡಿಸೆಂಬರ್ ಈ ವರ್ಷದ ಕೊನೆಯ ತಿಂಗಳು. ಉತ್ತರ ಭಾರತದ ಹಲವೆಡೆ ಚಳಿ ತೀವ್ರವಾಗುತ್ತಿರುವ ಕಾರಣದಿಂದ ಕೆಲವು ಶಾಲೆಗಳು ಆನ್‌ಲೈನ್‌ ತರಗತಿಗಳನ್ನು ನಡೆಸಲು ನಿರ್ಧಾರ ಮಾಡಿವೆ. ಈ ಎಲ್ಲದರ ನಡುವೆ, ಡಿಸೆಂಬರ್ 12 ರಂದು ಈ ರಾಜ್ಯದ ಬ್ಯಾಂಕ್, ಸರ್ಕಾರಿ ಕಚೇರಿಗಳು ಮತ್ತು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇದಕ್ಕೆ ಕಾರಣ ಏನೆಂಬುದನ್ನು ಮುಂದೆ ತಿಳಿಯೋಣ.

ಪ್ರತಿ ತಿಂಗಳು ನಿಗದಿತ ಬ್ಯಾಂಕ್ ರಜೆಗಳಿವೆ. ಇವು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಅಂತೆಯೇ ಆರ್‌ಬಿಐ ಪ್ರತಿ ತಿಂಗಳು ರಜೆಯ ಪಟ್ಟಿಯನ್ನು ಮುಂಚಿತವಾಗಿ ನೀಡುತ್ತದೆ. ಡಿಸೆಂಬರ್‌ನಲ್ಲಿ 15 ದಿನಗಳ ಕಾಲ ಬ್ಯಾಂಕ್‌ ಬಂದ್‌ ಆಗಿರುತ್ತವೆ. ಈಗಾಗಲೇ ಡಿಸೆಂಬರ್ ತಿಂಗಳಲ್ಲಿ 9 ದಿನಗಳು ಪೂರ್ಣಗೊಂಡಿದ್ದು, ಉಳಿದ 22 ದಿನಗಳಲ್ಲಿ ಬ್ಯಾಂಕ್‌ಗಳಿಗೆ 12 ದಿನ ರಜೆ ಇರುತ್ತದೆ. ಇದು ವಾರದ ರಜಾದಿನಗಳನ್ನು ಸಹ ಒಳಗೊಂಡಿದೆ.

 

ಮತ್ತೊಂದೆಡೆ 12ನೇ ಡಿಸೆಂಬರ್ ಅಂದರೆ ಗುರುವಾರದಂದು ಈ ರಾಜ್ಯದಲ್ಲಿ ಸಂಪೂರ್ಣ ರಜೆ ಘೋಷಣೆ ಮಾಡಲಾಗಿದೆ. ಅಂದು ಯಾವುದೇ ಶಾಲಾ ಕಾಲೇಜುಗಳು, ಸರ್ಕಾರಿ  ಕಚೇರಿಗಳು ಮತ್ತು ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ.

 

ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದ ಬ್ಯಾಂಕ್ ರಜಾದಿನಗಳ ಪಟ್ಟಿಯು ರಾಷ್ಟ್ರೀಯ ಮತ್ತು ಪ್ರಾದೇಶಿಕ ರಜಾದಿನಗಳನ್ನು ಒಳಗೊಂಡಿದೆ. ರಾಷ್ಟ್ರೀಯ ರಜಾದಿನಗಳು ಇಡೀ ದೇಶಕ್ಕೆ ರಜಾದಿನಗಳಾಗಿವೆ. ಪ್ರಾದೇಶಿಕತೆಯು ರಾಜ್ಯವನ್ನು ಅವಲಂಬಿಸಿರುತ್ತದೆ. ಡಿಸೆಂಬರ್ 12ರಂದು ಮೇಘಾಲಯದಲ್ಲಿ ಪಿಎ ಸಂಗ್ಮಾ ಅವರ ಜನ್ಮದಿನವನ್ನು ಆಚರಿಸುವ ಸಲುವಾಗಿ ರಜಾದಿನವಾಗಿ ಘೋಷಣೆ ಮಾಡಲಾಗಿದೆ.

 

ಪಿಎ ಟೋಗನ್ ನೆಂಗ್ಮಿಂಜ ಸಂಗ್ಮಾ ಅವರು ಮೇಘಾಲಯದ ಗಾರೋ ಬುಡಕಟ್ಟಿನ ಸ್ವಾತಂತ್ರ್ಯ ಹೋರಾಟಗಾರರಾಗಿದ್ದಾರೆ. 1872 ರ ಡಿಸೆಂಬರ್ 12 ರಂದು ನಿಧನರಾಗಿದ್ದಾರೆ. ಪಿಎ ಟೋಗನ್ ನೆಂಗ್ಮಿಂಜ ಸಂಗ್ಮಾ ಅವರು ಈಶಾನ್ಯ ಭಾರತದ ಮೇಲಿನ ಬ್ರಿಟಿಷ್ ಆಳ್ವಿಕೆಯ ವಿರುದ್ಧದ ಹೋರಾಟದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆ ದಿನದಂದು ರಜೆ ಘೋಷಣೆ ಮಾಡಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link