December Horoscope: ಡಿಸೆಂಬರ್‌ನಲ್ಲಿ ಐದು ಪ್ರಮುಖ ಗ್ರಹಗಳ ಸಂಚಾರದಲ್ಲಿ ಬದಲಾವಣೆಯಿಂದ ಬೆಳಗಲಿದೆ ಈ 5 ರಾಶಿಯವರ ಭಾಗ್ಯ
ವರ್ಷದ ಕೊನೆಯ ತಿಂಗಳು ಇಂದಿನಿಂದ ಆರಂಭವಾಗಿದೆ. ಇದರೊಂದಿಗೆ ಈ ತಿಂಗಳು ಐದು ಪ್ರಮುಖ ಗ್ರಹಗಳ ಸ್ಥಾನದಲ್ಲಿ ಬದಲಾವಣೆ ಕಂಡು ಬರಲಿದೆ.
ಡಿಸೆಂಬರ್‌ನಲ್ಲಿ ಗ್ರಹಗಳ ರಾಜ ಸೂರ್ಯ, ದೇವ ದೇವತೆಗಳ ಗುರು ಬೃಹಸ್ಪತಿ, ಗ್ರಹಗಳ ಕಮಾಂಡರ್ ಮಂಗಳ, ಗ್ರಹಗಳ ರಾಜಕುಮಾರ ಬುಧ ಮತ್ತು ಐಷಾರಾಮಿ ಜೀವನದ ಅಂಶನಾದ ಶುಕ್ರ ಗ್ರಹಗಳ ಸಂಚಾರದಲ್ಲಿ ಬದಲಾವಣೆ ಆಗಲಿದೆ.
ಇನ್ನೂ ಐದು ಪ್ರಮುಖ ಗ್ರಹಗಳ ಸಂಚಾರದಲ್ಲಿ ಬದಲಾವಣೆಯೊಂದಿಗೆ ಕೆಲವು ಶುಭ ಯೋಗಗಳು ಕೂಡ ನಿರ್ಮಾಣವಾಗಲಿದೆ.
ಬುಧ ಸಂಚಾರ: ಡಿಸೆಂಬರ್ 13ರಂದು ಗ್ರಹಗಳ ರಾಜಕುಮಾರ ಬುಧ ಧನು ರಾಶಿಯಲ್ಲಿ ತನ್ನ ಸಂಚಾರವನ್ನು ಆರಂಭಿಸಲಿದ್ದಾನೆ. ಬಳಿಕ ಡಿಸೆಂಬರ್ 28ರಂದು ಬುಧನು ಮತ್ತೆ ತನ್ನ ಹಿಮ್ಮುಖ ಸ್ಥಿತಿಯಲ್ಲಿ ವೃಶ್ಚಿಕ ರಾಶಿಗೆ ಬರುತ್ತಾನೆ.
ಸೂರ್ಯ ರಾಶಿ ಪರಿವರ್ತನೆ: 2023ರ ಡಿಸೆಂಬರ್ 16ರಂದು ಗ್ರಹಗಳ ರಾಜ ಸೂರ್ಯ ದೇವನು ತನ್ನ ರಾಶಿ ಬದಲಾಯಿಸಿ ಧನು ರಾಶಿಯನ್ನು ಪ್ರವೇಶಿಸಲಿದ್ದಾನೆ.
ಶುಕ್ರ ಸಂಚಾರ: 2023ರ ಡಿಸೆಂಬರ್ 25ರಂದು ಐಷಾರಾಮಿ ಜೀವನಕಾರಕನಾದ ಶುಕ್ರನು ವೃಶ್ಚಿಕ ರಾಶಿಯನ್ನು ಪ್ರವೇಶಿಸಲಿದ್ದಾನೆ.
ಮಂಗಳ ರಾಶಿ ಬದಲಾವಣೆ: ಜ್ಯೋತಿಷ್ಯ ಶಾಸ್ತ್ರದಲ್ಲಿ ಕಮಾಂಡರ್ ಗ್ರಹ ಎಂದು ಪರಿಗಣಿಸಲಾಗಿರುವ ಮಂಗಳನು ಡಿಸೆಂಬರ್ 27 ರಂದು ಧನು ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ.
ಗುರು ರಾಶಿ ಬದಲಾವಣೆ: ಈ ವರ್ಷಾಂತ್ಯದಲ್ಲಿ ಎಂದರೆ ಡಿಸೆಂಬರ್ 2023ರ ಕೊನೆಯ ದಿನ 31ನೇ ತಾರೀಕಿನಂದು ದೇವಗುರು ಬೃಹಸ್ಪತಿಯು ತನ್ನ ನೇರ ನಡೆಯನ್ನು ಆರಂಭಿಸಲಿದ್ದಾನೆ.
ಡಿಸೆಂಬರ್ ಶುಭ ಯೋಗಗಳು: ಡಿಸೆಂಬರ್ ತಿಂಗಳಿನಲ್ಲಿ ಸೂರ್ಯ ಮಂಗಳ ಹಾಗೂ ಬುಧನ ಸಂಚಾರದಿಂದ ಧನು ರಾಶಿಯಲ್ಲಿ ತ್ರಿಗ್ರಾಹಿ ಯೋಗ ರೂಪುಗೊಳ್ಳುತ್ತದೆ. ಇದಲ್ಲದೆ, ಧನು ರಾಶಿಯಲ್ಲಿ ಸೂರ್ಯ ಮತ್ತು ಬುಧನಿಂದ ಬುಧಾದಿತ್ಯ ಯೋಗ ಹಾಗೂ ಸೂರ್ಯ ಮತ್ತು ಮಂಗಳನ ಸಂಯೋಜನೆಯಿಂದಾಗಿ ಶುಭಕರ ಆದಿತ್ಯ ಮಂಗಳ ಯೋಗ ನಿರ್ಮಾಣಗೊಳ್ಳಲಿದೆ.
ಡಿಸೆಂಬರ್ ಯಾವ ರಾಶಿಯವರಿಗೆ ಶುಭ:
ಡಿಸೆಂಬರ್ ತಿಂಗಳಿನಲ್ಲಿ ಐದು ಗ್ರಹಗಳ ಸಂಚಾರದಲ್ಲಿ ಬದಲಾವಣೆ ಹಾಗೂ ಮೂರು ಶುಭ ಯೋಗಗಳ ನಿರ್ಮಾಣವು ವೃಷಭ ರಾಶಿ, ತುಲಾ ರಾಶಿ, ಧನು ರಾಶಿ, ಮಕರ ರಾಶಿ ಮತ್ತು ಕುಂಭ ರಾಶಿಯವರಿಗೆ ಅದೃಷ್ಟದ ಬಾಗಿಲುಗಳನ್ನು ತೆಗೆಯಲಿವೆ. ಈ ಸಮಯದಲ್ಲಿ ಈ 5 ರಾಶಿಯವರು ಉದ್ಯೋಗ-ವ್ಯವಹಾರದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ಪಡೆಯಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ಪ್ರಾಪ್ತಿಯಾಗಲಿದೆ. ಕೆಲಸದ ಸ್ಥಳದಲ್ಲಿ ಪ್ರಗತಿ ಕಂಡು ಬರಲಿದೆ ಎಂದು ಹೇಳಲಾಗುತ್ತಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.