ಅಪ್ಪು ಜೊತೆ ನಟಿಸಿ ʼಪರಮಾತ್ಮʼನ ಪ್ರೀತಿಯಲ್ಲಿ ಪರವಶಳಾಗಿದ್ದ ನಟಿ ದೀಪಾ ಸನ್ನಿಧಿ ಈಗ ಎಲ್ಲಿದ್ದಾರೆ? ಏನ್‌ ಮಾಡ್ತಿದ್ದಾರೆ ಗೊತ್ತಾ?

Mon, 12 Aug 2024-3:11 pm,

ಕನ್ನಡದಲ್ಲಿ ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಸಿನಿಮಾಗಳನ್ನು ನೀಡಿದ ನಟಿ ದೀಪಾ ಸನ್ನಿಧಿ. ಪುನೀತ್‌ ರಾಜ್‌ ಕುಮಾರ್‌ ಜೊತೆ ಪರಮಾತ್ಮ ಸಿನಿಮಾದಲ್ಲಿ ನಟಿಸಿದ್ದರೆ, ದರ್ಶನ್‌ ಅವರ ಜೊತೆ ಸಾರಥಿ ಸಿನಿಮಾದಲ್ಲಿ ಅಭಿನಯಿಸಿ ಸಿನಿರಸಿಕರ ಮನಗೆದ್ದಿದ್ದರು ದೀಪಾ.

 

ಆದರೆ ಕೆಲ ವರ್ಷಗಳಿಂದ ಚಂದನವನದಲ್ಲಿ ಕಾಣಿಸಿಕೊಳ್ಳದ ನಟಿ ದೀಪಾ, ಇದೀಗ ಪತ್ತೆಯೇ ಇಲ್ಲದಂತಾಗಿದೆ. ಈ ಕೊಡಗಿನ ಕುವರಿ ಈಗ ಏನ್‌ ಮಾಡ್ತಿದ್ದಾರೆ? ಎಲ್ಲಿದ್ದಾರೆ ಎಂಬುದು ಅನೇಕರಿಗೆ ತಿಳಿದಿಲ್ಲದ ಸಂಗತಿ.

 

ಕನ್ನಡ ಸಿನಿಮಾ ನಿರ್ದೇಶಕರು, ನಿರ್ಮಾಪಕರು ದೀಪಾ ಸನ್ನಿಧಿಯನ್ನೇ ಸಿನಿಮಾಗೆ ನಾಯಕಿಯನ್ನಾಗಿ ಮಾಡಿಕೊಳ್ಳಬೇಕೆಂದು ಕಾದುಕುಳಿತಿದ್ದೂ ಇದೆ. ಆದರೆ ಈಕೆಯು ಅತಿಯಾದ ಸಂಭಾವನೆಯ ಬೇಡಿಕೆ ಸಿನಿಮಾಗಳಿಂದಲೇ ದೂರ ಮಾಡುವಂತೆ ಮಾಡಿದೆ ಎಂಬುದು ಗಾಂಧಿನಗರದಲ್ಲಿನ ಮಾತು.

 

ಇನ್ನು ಕನ್ನಡದ ಬಳಿಕ ದೀಪಾ ಕಾಣಿಸಿಕೊಂಡಿದ್ದು ತಮಿಳು ಸಿನಿಮಾರಂಗದಲ್ಲಿ. ಆದರೆ ಆಕೆ ಅಲ್ಲಿಯೂ ಮಾಡಿದ್ದು ಕೇವಲ 2 ಸಿನಿಮಾ.

 

ಅದಾದ ಬಳಿಕ ಕ್ರಮೇಣ ಚಿತ್ರರಂಗದಿಂದಲೇ ದೂರ ಉಳಿದ ದೀಪಾ ಸನ್ನಿಧಿ ಈಗ ಎಲ್ಲಿದ್ದಾರೆ, ಏನ್ಮಾಡ್ತಿದ್ದಾರೆ ಎಂಬುದು ರಹಸ್ಯವಾಗಿಯೇ ಇದೆ. ಮುಂದೆ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸುತ್ತಾರಾ? ಅಥವಾ ದೂರವೇ ಉಳಿಯುತ್ತಾರಾ ಎಂಬುದು ತಿಳಿಯದ ಸಂಗತಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link