Deepak Chahar Wife: ಸೌಂದರ್ಯದಲ್ಲಿ ಬಾಲಿವುಡ್ ನಟಿಯರನ್ನೇ ಮೀರಿಸುವ ದೀಪಕ್ ಚಹಾರ್ ಪತ್ನಿ!

Sat, 04 Jun 2022-2:11 pm,

ಜಯಾ ಭಾರದ್ವಾಜ್ ಲೈಮ್ ಲೈಟ್‍ನಿಂದ ದೂರ ಉಳಿದಿದ್ದಾರೆ. ಇವರು ದೆಹಲಿಯ ಕಾರ್ಪೊರೇಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ದೀಪಕ್ ಚಹಾರ್ ಅವರ ಸಹೋದರಿ ಮಾಲ್ತಿ ಚಹಾರ್ ಅವರು ಜಯಾರನ್ನು ದೀಪಕ್ ಭೇಟಿಯಾಗುವಂತೆ ಮಾಡಿದ್ದರು. ಜಯಾ ಅವರ ಸಹೋದರ ಸಿದ್ಧಾರ್ಥ್ ಭಾರದ್ವಾಜ್ ಒಬ್ಬ ನಟ ಮತ್ತು ಟಿವಿ ಶೋ ಬಿಗ್ ಬಾಸ್ ಮತ್ತು ಸ್ಪ್ಲಿಟ್ಸ್ವಿಲ್ಲಾದಲ್ಲಿ ಕಾಣಿಸಿಕೊಂಡಿದ್ದಾರೆ.

ಐಪಿಎಲ್ 2021ರ ಸಂದರ್ಭದಲ್ಲಿ ದೀಪಕ್ ಚಹಾರ್ ಅವರು ಜಯಾ ಭಾರದ್ವಾಜ್‍ರಿಗೆ ಪ್ರಪೋಸ್ ಮಾಡಿದ್ದರು. ಆ ವೇಳೆ ಜಯಾ ಐಪಿಎಲ್ ಪಂದ್ಯ ವೀಕ್ಷಿಸಲು ಕ್ರೀಡಾಂಗಣದಲ್ಲಿ ಕುಳಿತಿದ್ದರು. ದೀಪಕ್ ಚಹಾರ್ ಎಲ್ಲರನ್ನು ಬೆರಗುಗೊಳಿಸುವ ಮೂಲಕ ಜಯಾರಿಗೆ ಕ್ರೀಡಾಂಗಣದಲ್ಲಿಯೇ ತಮ್ಮ ಲವ್ ಪ್ರಪೋಸಲ್ ನೀಡಿದ್ದರು.  

ದೀಪಕ್ ಚಹಾರ್ ಮತ್ತು ಜಯಾ ಭಾರದ್ವಾಜ್ ಜೂನ್ 7ರಂದು ಆಗ್ರಾದಲ್ಲಿ ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರಿಬ್ಬರ ಮದುವೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ದೀಪಕ್ ಚಹಾರ್ ಮತ್ತು ಜಯಾ ಭಾರದ್ವಾಜ್ ನಡುವಿನ ಸಂಬಂಧವು ದೀರ್ಘಕಾಲದವರೆಗೆ ಸುದ್ದಿಯಲ್ಲಿತ್ತು.   

ಜಯಾ ಭಾರದ್ವಾಜ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಆಗಾಗ ಹಂಚಿಕೊಳ್ಳುವ ಫೋಟೋಗಳನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ. ದೀಪಕ್ ಚಹಾರ್ ಬೆಂಬಲಿಸಲು ಅವರು ಕ್ರಿಕೆಟ್ ಪಂದ್ಯ ವೀಕ್ಷಿಸಲು ಮೈದಾನಕ್ಕೆ ತೆರಳುತ್ತಾರೆ.

ದೀಪಕ್ ಚಾಹರ್ ಕಿಲ್ಲರ್ ಬೌಲಿಂಗ್ ಮತ್ತು ಡ್ಯಾಶಿಂಗ್ ಬ್ಯಾಟಿಂಗ್‌ನಲ್ಲಿ ಪರಿಣಿತ ಆಟಗಾರ. ತಮ್ಮ ಆಲ್‍ರೌಂಡರ್‍ ಪ್ರದರ್ಶನದಿಂದ ಟೀಂ ಇಂಡಿಯಾಗೆ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link