ದೀಪಾವಳಿ 2023: ಲಕ್ಷ್ಮೀ ಪೂಜೆಯಲ್ಲಿ ಈ ಹೂವನ್ನು ತಪ್ಪಿಯೂ ಬಳಸಬಾರದು.. ದರಿದ್ರ ಸುತ್ತಿಕೊಳ್ಳುತ್ತೆ!

Sun, 12 Nov 2023-10:03 am,

ದೀಪಾವಳಿಯ ಲಕ್ಷ್ಮೀ ಪೂಜೆಯ ಸಮಯದಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಹಲವು ವಿಷಯಗಳಿವೆ. ದೀಪಾವಳಿಯಂದು ಲಕ್ಷ್ಮಿ ದೇವಿಗೆ ಯಾವ ಹೂವುಗಳನ್ನು ಅರ್ಪಿಸಬಾರದು ಎಂಬುದನ್ನು ಮೊದಲು ತಿಳಿಯಿರಿ.

ಎಕ್ಕದ ಹೂವು : ಪೂಜೆಯಲ್ಲಿ ಈ ಹೂವನ್ನು ಬಳಸುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ದೀಪಾವಳಿಯಂದು ಲಕ್ಷ್ಮಿ ದೇವಿಯ ಪೂಜೆಯ ಸಮಯದಲ್ಲಿ ಎಕ್ಕದ ಹೂವನ್ನು ಬಳಸಬೇಡಿ.    

ನೆಲದ ಮೇಲೆ ಬಿದ್ದ ಹೂವು : ಪೂಜೆಯ ಸಮಯದಲ್ಲಿ ನೆಲದ ಮೇಲೆ ಬಿದ್ದ ಹೂವುಗಳನ್ನು ಬಳಸಬೇಡಿ. ದೀಪಾವಳಿ ಪೂಜೆಯ ಸಮಯದಲ್ಲಿ ಒಣ ಹೂವುಗಳನ್ನು ಅರ್ಪಿಸಬೇಡಿ.   

ಪಾರಿಜಾತ : ದೀಪಾವಳಿಯ ದಿನದಂದು, ಲಕ್ಷ್ಮಿ ದೇವಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸಲಾಗುತ್ತದೆ. ಈ ದಿನ ದೀಪಾವಳಿ ಪೂಜೆಯ ಸಮಯದಲ್ಲಿ ಪಾರಿಜಾತ ಹೂವನ್ನು ಬಳಸುವುದರಿಂದ ಪೂಜೆಯಲ್ಲಿ ದೋಷಗಳು ಉಂಟಾಗಬಹುದು.  

ಉಮ್ಮತ್ತಿ ಹೂವು : ಲಕ್ಷ್ಮೀ ಪೂಜೆಯಲ್ಲಿ ಉಮ್ಮತ್ತಿ  ಹೂವನ್ನು ಅರ್ಪಿಸುವುದು ಅಶುಭವೆಂದು ಪರಿಗಣಿಸಲಾಗಿದೆ. ಆದ್ದರಿಂದ ದೀಪಾವಳಿಯಂದು ವಿಶೇಷವಾಗಿ ಲಕ್ಷ್ಮಿ ದೇವಿಯ ಪೂಜೆಯ ಸಮಯದಲ್ಲಿ ಈ ಹೂವನ್ನು ಬಳಸಬೇಡಿ.   

ಕಣಗಿಲೆ ಹೂವು : ದೀಪಾವಳಿಯ ದಿನದಂದು ತಪ್ಪಾಗಿಯೂ ಪೂಜೆಯ ಸಮಯದಲ್ಲಿ ಲಕ್ಷ್ಮಿ ದೇವಿಗೆ ಕಣಗಿಲೆ ಹೂವನ್ನು ಅರ್ಪಿಸಬೇಡಿ. ಈ ಹೂವನ್ನು ಯಾವುದೇ ಪೂಜೆಯಲ್ಲಿ ಬಳಸುವುದಿಲ್ಲ.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link