ದೀಪಾವಳಿ ಹೊತ್ತಿನಲ್ಲಿ ಕೋಟ್ಯಾಧಿಪತಿಯಾಗುವ ಯೋಗ ! ಈ ರಾಶಿಯವರ ಜೀವನದಲ್ಲಿ ಸಂಪತ್ತಿನ ಸುರಿ ಮಳೆ
ದೀಪಾವಳಿಗೂ ಮುನ್ನ ಅದೃಷ್ಟ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವೆಂಬರ್ 04 ರಂದು, ನ್ಯಾಯದ ಅಧಿಪತಿ ಶನಿ ದೇವ ಕುಂಭ ರಾಶಿಯಲ್ಲಿ ನೇರ ನಡೆಗೆ ಮರಳುತ್ತಾನೆ. ಶನಿ ಮಹಾತ್ಮ ವಕ್ರ ನಡೆಯಿಂದ ಮತ್ತೆ ನೇರ ನಡೆಗೆ ಮರಳುವುದನ್ನು ವಿಶೇಷವೆಂದು ಪರಿಗಣಿಸಲಾಗುತ್ತದೆ.
ಶನಿಯಿಂದ ಕುಬೇರ ಯೋಗ: ಶನಿ ದೇವ ಮತ್ತೆ ನೇರ ನಡೆಗೆ ಮರಳುವುದರಿಂದ ಮೂರು ರಾಶಿಯವರಿಗೆ ಹೆಚ್ಚಿನ ಲಾಭವಾಗಲಿದೆ. ಕುಬೇರ ಯೋಗದ ಮೂಲಕ ಈ ರಾಶಿಯವರ ಅದೃಷ್ಟವೇ ಬದಲಾಗುವುದು.
ವೃಷಭ ರಾಶಿ : ಈ ಅವಧಿಯಲ್ಲಿ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಒದಗಿ ಬರುತ್ತದೆ. ಅನೇಕ ಸಮಸ್ಯೆಗಳು ಬಗೆಹರಿಯುತ್ತದೆ. ಇದರೊಂದಿಗೆ, ಉದ್ಯೋಗಾಕಾಂಕ್ಷಿಗಳು ಈ ಅವಧಿಯಲ್ಲಿ ಯಶಸ್ವಿಯಾಗಬಹುದು.
ಕರ್ಕ ರಾಶಿ : ಕರ್ಕಾಟಕ ರಾಶಿಯವರು ಶನಿಯ ಸಂಚಾರದಿಂದ ಉತ್ತಮ ಲಾಭವನ್ನು ಪಡೆಯುತ್ತಾರೆ. ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುತ್ತಾರೆ. ಹೊಸ ಮತ್ತು ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯುತ್ತಾರೆ. ಶನಿಯ ಸಂಚಾರದಿಂದಾಗಿ, ಕರ್ಕ ರಾಶಿಯವರು ಕುಟುಂಬ ಮತ್ತು ಸ್ನೇಹಿತರ ಸಂಪೂರ್ಣ ಬೆಂಬಲ ಪಡೆಯುತ್ತಾರೆ.
ಕನ್ಯಾ ರಾಶಿ : ಕನ್ಯಾ ರಾಶಿಯವರಿಗೆ ಈ ಸಮಯದಲ್ಲಿ ಉನ್ನತ ಅಧಿಕಾರಿಗಳ ಬೆಂಬಲ ಸಿಗುವುದು. ಇದರೊಂದಿಗೆ ಕ್ಷೇತ್ರದಲ್ಲಿ ಪ್ರಗತಿಗೆ ಹೊಸ ಅವಕಾಶಗಳು ದೊರೆಯಲಿವೆ. ಆರ್ಥಿಕವಾಗಿ ಬಹಳಷ್ಟು ಲಾಭವಾಗಲಿದೆ. ವ್ಯಾಪಾರ ಕ್ಷೇತ್ರದಲ್ಲಿ ಅನುಕೂಲಗಳನ್ನು ಪಡೆಯುತ್ತಾರೆ. ಉದ್ಯೋಗಾಕಾಂಕ್ಷಿಗಳಿಗೆ ಶನಿಯ ಸಂಚಾರವೂ ಅನುಕೂಲಕರವಾಗಿರುತ್ತದೆ.
ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದಕ್ಕೆ ಹೊಣೆಯಲ್ಲ.