Deepika Das: ಟರ್ಕಿಯಲ್ಲಿ ನಾಗಿಣಿ ಹನಿಮೂನ್: ಫೋಟೋ ನೋಡಿ ಕ್ಯೂಟ್ ಕಪಲ್‌ಯೆಂದ ಫ್ಯಾನ್ಸ್!
ಕನ್ನಡದ ನಟಿ ದೀಪಿಕಾ ದಾಸ್ ಹಾಗೂ ದೀಪಕ್ ಜೋಡಿ ಟ್ರಾವೆಲ್ ಫ್ರೀಕ್ ಆಗಿದ್ದು, ತಮ್ಮ ಹನಿಮೂನ್ ಎಂಜಾಯ್ ಮಾಡಲು ಟರ್ಕಿಗೆ ಹಾರಿದ್ದಾರೆ.
ನಟಿ ದೀಪಿಕಾ ಮದುವೆ ಬಳಿಕ ಒಂದಿಷ್ಟು ವಿವಿಧ ಉಡುಗೆಗಗಳಲ್ಲಿ, ಸುಂದರ ತಾಣಗಳಲ್ಲಿ ಫೋಟೋಗಳನ್ನು ತೆಗೆಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುತ್ತಾ ಆಕ್ಟೀವ್ ಆಗಿದ್ದಾರೆ.
ಕಿರುತೆರೆ ನಟಿ ದೀಪಿಕಾ ಸದ್ಯ ಟರ್ಕಿಯಲ್ಲಿ ಪತಿ ದೀಪಕ್ ಜೊತೆ ಅಲ್ಲಿ ಸುಂದರ ತಾಣಗಳಿಗೆ ಭೇಟಿ ನೀಡುತ್ತಾ ಅಲ್ಲಿಯ ಫೋಟೋಗಳನ್ನು ಫ್ಯಾನ್ಸ್ ಜೊತೆಗೆ ಶೇರ್ ಮಾಡಿಕೊಳ್ಳುವುದರ ಮೂಲಕ ಖುಷಿ ಹಂಚಿಕೊಂಡಿದ್ದಾರೆ.
ಸೀರಿಯಲ್ ನಟಿ ದೀಪಿಕಾ ಕಳೆದ ತಿಂಗಳು ಇದ್ದಕ್ಕಿದ್ದ ಹಾಗೆ ಮದುವೆ ಫೋಟೋ ಹಂಚಿಕೊಂಡು ‘ಐ ಆಮ್ ಮ್ಯಾರೀಡ್’ ಎಂದು ಹೇಳಿದ್ದರು. ಇದನ್ನು ನೋಡಿದ ಅಭಿಮಾನಿಗಳಿಗೆ ದೀಪಿಕಾ ದಾಸ್‌ಗೆ ಮದುವೆ ಆಯ್ತಾ ಅಂತ ಶಾಕ್ ಆಗಿತ್ತು.
ನಟಿ ದೀಪಿಕಾ ಹಾಗೂ ದೀಪಕ್ ತಮ್ಮ ಮದುವೆ ಗೋವಾದಲ್ಲಿ ಮಾಡಿಕೊಂಡಿದ್ದು, ತದನಂತರ ಬೆಂಗಳೂರಿನಲ್ಲಿ ಆತ್ಮೀಯರು, ಚಿತ್ರರಂಗ, ಕುಟುಂಬಸ್ಥರಿಗೋಸ್ಕರ ಆರತಕ್ಷತೆ ಆಯೋಜಿಸಿದ್ದರು.
ದೀಪಿಕಾ ದಾಸ್ ಅಗತ್ಯ ಇದ್ದಷ್ಟೇ ಮಾತಾಡುತ್ತಾರೆ ಹೊರತು ಹೆಚ್ಚು ಮಾತನಾಡುವವರಲ್ಲ. ಈಕೆ ಎಲ್ಲರ ಜೊತೆ ಬೆರೆಯೋದಿಲ್ಲ ಕಡಿಮೆಯೇ ಆಗಿದ್ದು, ಹೆಚ್ಚಾಗಿ ಸೀರಿಯಸ್ ಆಗಿ ಇರುತ್ತಾರೆ.