Deepika Das: ಹುಟ್ಟುಹಬ್ಬದಂದು ವಯಸ್ಸಿನ ಬಗ್ಗೆ ಗೂಗಲ್‌ಗೆ ಏನಂದ್ರೂ ರಿವೀಲ್‌ ಮಾಡಿದ ನಾಗಿಣಿ!

Fri, 23 Feb 2024-3:51 pm,

ಕನ್ನಡ ಕಿರುತೆರೆಯ ನಾಗಿಣಿ ಧಾರವಾಹಿ ಖ್ಯಾತಿಯ ದೀಪಿಕಾ ದಾಸ್‌ ಇಂದು ಹುಟ್ಟುಹಬ್ಬದ ಸಂಭ್ರಮಚಾರಣೆಯ ಖುಷಿಯಲ್ಲಿ ಇದ್ದಾರೆ. 

ನಟಿ ದೀಪಿಕಾ ದಾಸ್‌ ಸೋಷಿಯಲ್‌ ಮಿಡಿಯಾದಲ್ಲಿ ರೆಡೆ ರೋಸ್‌ ಪ್ರಿಂಟ್‌ ಇರುವ ವೈಟ್‌ ಫ್ರಾಕ್‌  ಧರಿಸಿರುವುದರ ಜೊತೆಗೆ ಕೈಯಲ್ಲಿ ಬೊಕ್ಕೆ ಹಾಗೂ ಕಪ್‌ ಕೇಕ್‌ ಹಿಡಿದು  ಪೋಸ್‌ ನೀಡಿರುವ ಫೋಟೋ ಹಂಚಿಕೊಂಡಿದ್ದಾರೆ.

ದೀಪಿಕಾ ದಾಸ್‌ ತಮ್ಮ ಪೋಸ್ಟ್‌ನಲ್ಲಿ ʼ ಹೇ ಗೂಗಲ್‌ ನನಗೆ 31 ಅಂತ ಹೇಳೋದು ನಿಲ್ಲಿಸು. ನನಗೆ ಈಗ ಅಧಿಕೃತವಾಗಿ 28 ವರ್ಷʼ ಅಂತ ಬರೆದುಕೊಂಡಿದ್ದಾರೆ.

 ನಟಿ ದೀಪಿಕಾ ಹಾಗೆಯೇ ತಮ್ಮ ಪೋಸ್ಟ್‌ನ ಕ್ಯಾಪ್ಶನ್‌ನಲ್ಲಿ ನನ್ನ ಜೀವನದಲ್ಲಿ ನಡೆದ ಪ್ರತಿಯೊಂದು ವಿಷಯಕ್ಕೂ ಧನ್ಯವಾದಗಳು. ನನಗೂ ಹಾರೈಸೋಣ ಎಂದು ತಮಗೆ ತಾವೇ ಹುಟ್ಟುಹಬ್ಬಕೆ ಶುಭಾಶಯಗಳನ್ನು ಕೋರಿಕೊಂಡಿದ್ದಾರೆ.

ದೀಪಿಕಾಳ ಈ ಪೋಸ್ಟ್‌ಗೆ ಸಾವಿರಾರು ಲೈಕ್ಸ್‌ ಹಾಗೂ ಕಮೆಂಟ್ಸ್‌ಗಳು ಬಂದಿದ್ದು, ತಮ್ಮ ಅಭಿಮಾನಿಗಳು ಜನ್ಮದಿನಕ್ಕೆ  ಶುಭಾಶಯಗಳನ್ನು ತಿಳಿಸಿದ್ದಾರೆ.

ನಟಿ ದೀಪಿಕಾ ಪೋಸ್ಟ್‌ಗೆ ಇನ್ನು ಕೆಲವರು ಶುಭ ಕೋರುವುದರ ಬದಲು ಗೂಗಲ್ ಏಕೆ ಹಾಗೆ ಹೇಳುತ್ತಿದೆ , ಇದು ಸ್ವಲ್ಪ ಉದಾರವಾಗಿರಬೇಕು, ನೀವು ಇನ್ನೂ 28 ಅಲ್ಲ 18 ರಂತೆ ಕಾಣುತ್ತೀರಾ  ಅಂತ ಹಾಸ್ಯವಾಡಿದ್ದಾರೆ. ಮತ್ತೊಬ್ಬರು ರಾಣಿಯ ಸೌಂದರ್ಯ ಹಾಗೆಯೇ ಇದೆ ಎಂದು ಕಮೆಂಟ್‌ಮಾಡಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link