ಬ್ಲ್ಯಾಕ್ ಗೌನ್ ನಲ್ಲಿ ಸಿಂಪಲ್ ಆಗಿ ಕಾಣಿಸಿಕೊಂಡ ದೀಪಿಕಾ, ಧರಿಸಿದ ಒಡವೆಯ ಬೆಲೆ ಬರೋಬ್ಬರಿ ಇಷ್ಟು ಕೋಟಿ..!

Thu, 20 Jun 2024-9:24 pm,

ನಟಿ ದೀಪಿಕಾ ಕಪ್ಪು ಬಣ್ಣದ ಗೌನ್, ಬ್ರಾಸ್ಲೈಟ್ ಇಷ್ಟರಲ್ಲೇ ಸಿಂಪಲ್ಲಾಗಿ ರೆಡಿಯಾಗಿದ್ದ ದೀಪಿಕಾ ಡಿಫ್ರೆಂಟ್ ಆಗಿ ಕಾಣುತ್ತಿದ್ದರು. ಆದರೆ ದೀಪಿಕಾ ಧರಿಸಿದ್ದ ಪಟ್ಟೆ ಮತ್ತು ಬ್ರೇಸ್ಲೆಟ್ ಬೆಲೆ ಕೇಳಿದ್ರೆ ಶಾಕ್ ಆಗೋದಂತು ಖಂಡಿತ..!

ಕಲ್ಕಿ 2898 AD ಪ್ರೀ-ರಿಲೀಸ್ ಈವೆಂಟ್‌ಗಾಗಿ ಕಪ್ಪು ಬಣ್ಣದ ಗೌನ್‌ನೊಂದಿಗೆ ರೆಡಿಯಾಗಿದ್ದ ದೀಪಿಕಾ ಪಡುಕೋಣೆಯ ಫೋಟೋಸ್ ಸಕತ್ ವೈರಲ್ ಆಗಿದ್ದು,  ಪ್ರಗ್ನೆನ್ಸಿ ಟೈಮ್ ನಲ್ಲಿ ಅವರ ಸೌಂದರ್ಯ ಹೆಚ್ಚಿದೆ ಎಂದು ನೆಟ್ಟಿಗರು ಮಾತಾಡಿಕೊಂಡಿದ್ದಾರೆ. ಫೋಟೋಸ್, ವೀಡಿಯೋಸ್ ವೈರಲ್ ಆಗುತ್ತ್ತಿದ್ದಂತೆ ಮಗು ಹೆಣ್ಣೋ ಗಂಡೋ, ಬೇಬಿ ಬಂಪ್ ಇವೆಲ್ಲದರ ಕುರಿತು ಮಾತನಾಡಿಕೊಳ್ಳುತ್ತಿದ್ದಾರೆ. 

ದೀಪಿಕಾ ಚಿತ್ರದ ಪ್ರಮೋಶನ್ ಕಾರ್ಯಕ್ರಮಕ್ಕಾಗಿ ಧರಿಸಿದ್ದು ಕಪ್ಪು ಬಣ್ಣದ ಗೌನ್, ಬ್ರೇಸ್‌ಲೆಟ್ ಮತ್ತು ಹೈ ಹೀಲ್ಸ್, ನೋಡಲು ಸಿಂಪಲ್ ಆಗಿ ಕಾಣಿಸಿದ್ದರು ಅದರ ಬೆಲೆ ಎಷ್ಟು ಗೊತ್ತಾ,  ಡ್ರೆಸ್‌ನ ಬೆಲೆ ಬರೋಬ್ಬರಿ ₹114,000

ದೀಪಿಕಾ ಕೈಲಿ ಹೊಳೆಯುತ್ತಿರುವುದು ಕಾರ್ಟಿಯರ್ ಬಳೆಗಳಾಗಿದ್ದು, ಈ ಚಿನ್ನ ಮಿಶ್ರಿತ ವಜ್ರದ ಆಭರಣದ ಬೆಲೆ 1.16 ಕೋಟಿ ರೂ. ಆಗಿದೆ!  ದೀಪಿಕಾ ಕೈಲಿ 3 ಬಳೆಗಳಿದ್ದು,  ಪ್ಯಾಂಥೆರೆ ಡಿ ಕಾರ್ಟಿಯರ್ ಬಳೆ  53, 50,000 ರೂ,. ಮಧ್ಯದ ಬಳೆ 43,20,000 ರೂ, ಮೂರನೇ ಬಳೆಯ ಬೆಲೆ  19,40,000 ರೂ. ಆಗಿದೆ. ಅಲ್ಲಿಗೆ ಈ ಬಳೆಗಳ ಒಟ್ಟು ಮೌಲ್ಯ 1.16 ಕೋಟಿ ರೂ ಆಗಿದೆ.

ದೀಪಿಕಾ ಧರಿಸಿರುವ ಉಂಗುರಗಳು ಮತ್ತು ಕಿವಿಯೋಲೆಗಳು ಕೂಡಾ ಕಾರ್ಟಿಯರ್‌ದ್ದೇ ಆಗಿದ್ದು, ಅವುಗಳ ಬೆಲೆ ಲಕ್ಷದಾಗಿದ್ದು,  ದೀಪಿಕಾಳ ಹೀಲ್ಸ್ ಬೆಲೆ 41500 ರೂ ಆಗಿದೆ. ದೀಪಿಕಾ ಪಡುಕೋಣೆ, ಪ್ರಭಾಸ್, ಅಮಿತಾಬ್ ಬಚ್ಚನ್ ಅಭಿನಯದ ಕಲ್ಕಿ 2898 ಎಡಿ ಚಿತ್ರದ ಟ್ರೇಲರ್ ಬಹು ನಿರೀಕ್ಷೆ ಹುಟ್ಟಿಸಿದ್ದು, ಚಿತ್ರವು ಜೂ.27ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link