Deepika - Ranveer : ಅಂಬಾನಿ ಪುತ್ರನ ನಿಶ್ಚಿತಾರ್ಥದಲ್ಲಿ ಗಮನ ಸೆಳೆದ ದೀಪಿಕಾ - ರಣವೀರ್ ಔಟ್‌ಫಿಟ್
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇಬ್ಬರೂ ಅಂಬಾನಿ ಪುತ್ರನ ನಿಶ್ಚಿತಾರ್ಥದಲ್ಲಿ ರಾಜ - ರಾಣಿಯಂತೆ ಕಾಣುತ್ತಿದ್ದರು. ಕಪ್ಪು ಶೆರ್ವಾನಿಯಲ್ಲಿ ರಣವೀರ್, ಕೆಂಪು ಸೀರೆಯಲ್ಲಿ ದೀಪಿಕಾ ಎಲ್ಲರ ಗಮನಸೆಳೆದರು.
ದೀಪಿಕಾ ತುಂಬಾ ಸುಂದರವಾದ ಕೆಂಪು ಬಣ್ಣದ ಗೋಲ್ಡನ್ ವರ್ಕ್ ಇರುವ ಸೀರೆಯನ್ನು ಧರಿಸಿದ್ದರು, ಅದರೊಂದಿಗೆ ಅವಳು ನೆಕ್‌ಲೆಸ್ ಧರಿಸಿದ್ದರು. ಅದು ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತಿತ್ತು.
ರಣವೀರ್-ದೀಪಿಕಾ ಪರಸ್ಪರ ಕೈಹಿಡಿದುಕೊಂಡು ಪಾಪರಾಜಿಗಳಿಗೆ ಪೋಸ್ ನೀಡಿದರು.
ದೀಪಿಕಾ ರಣವೀರ್‌ಗಿಂತ ಸ್ವಲ್ಪ ಹೊತ್ತ ಮೊದಲು, ಶಾರುಖ್ ಖಾನ್ ಕುಟುಂಬ ಆಗಮಿಸಿತ್ತು. ಶಾರುಖ್ ಕ್ಯಾಮೆರಾ ಕಣ್ಣುಗಳಿಂದ ತಪ್ಪಿಸಿಕೊಂಡರು. ಆದರೆ ಅವರ ಪತ್ನಿ ಗೌರಿ ಖಾನ್ ಮಗ ಆರ್ಯನ್ ಖಾನ್ ಫೋಟೋಗೆ ಪೋಸ್ ಕೊಟ್ಟರು.
ಅದೇ ಸಮಯದಲ್ಲಿ ಅರ್ಜುನ್ ಕಪೂರ್ ಕೂಡ ತಂದೆ ಬೋನಿ ಕಪೂರ್ ಅವರೊಂದಿಗೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ, ಅರ್ಜುನ್ ಕಪೂರ್ ನೀಲಿ ಪಠಾನಿ ಕುರ್ತಾ ಮತ್ತು ಪೈಜಾಮಾ ಧರಿಸಿದ್ದರು.