ಅಪರೂಪದ ಜಾತಕದಲ್ಲಿ ದೀಪಿಕಾ ಪುತ್ರಿಯ ಜನನ.. ರಣವೀರ್‌ ಸಿಂಗ್‌ ಜೀವನ ಬದಲಿಸುವ ಯೋಗ, ಹೇಗಿದೆ ಗೊತ್ತಾ ದೀಪ್‌ವೀರ್‌ ಮಗಳ ಭವಿಷ್ಯ ?

Mon, 09 Sep 2024-4:41 pm,

ನಟಿ ದೀಪಿಕಾ ಪಡುಕೋಣೆ ಋಷಿ ಪಂಚಮಿಯಂದು ಅತ್ಯಂತ ಶುಭ ಮುಹೂರ್ತದಲ್ಲಿ ಮಗಳಿಗೆ ಜನ್ಮ ನೀಡಿದ್ದಾರೆ. 

ಕೆಲವು ತಿಂಗಳ ಹಿಂದೆ ದೀಪಿಕಾ ಪಡುಕೋಣೆ ಬೇಬಿ ಬಂಪ್‌ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. 

ದೀಪಿಕಾ ಪುತ್ರಿಯ ಜಾತಕ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ.   

08 ಸೆಪ್ಟೆಂಬರ್ 2024 ರಂದು ದೀಪಿಕಾ ಪುತ್ರಿ ಜನನವಾಗಿದೆ. ದೀಪಿಕಾ ರಣವೀರ್‌ ಮಗಳದ್ದು ಕನ್ಯಾ ರಾಶಿ.

ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರದ ಪ್ರಕಾರ, ಸೆಪ್ಟೆಂಬರ್‌ನಲ್ಲಿ ಜನಿಸಿದ ಮಕ್ಕಳು ಪ್ರಾಮಾಣಿಕ ವ್ಯಕ್ತಿತ್ವ ಮತ್ತು ಮುಕ್ತ ಮನಸ್ಸಿನವರಾಗಿರುತ್ತಾರೆ ಎಂದು ಹೇಳಲಾಗುತ್ತದೆ.

ಎಲ್ಲಕ್ಕಿಂತ ಮುಖ್ಯವಾದ ಸಂಗತಿಯೆಂದರೆ ಎಂತಹ ಪರಿಸ್ಥಿತಿ ಬಂದರೂ ಪ್ರಾಮಾಣಿಕತೆಗೆ ಅಂಟಿಕೊಳ್ಳುವ ಆತ್ಮವಿಶ್ವಾಸ ಈ ಮಕ್ಕಳಲ್ಲಿರುತ್ತದೆ. 

ಸೆಪ್ಟೆಂಬರ್‌ನಲ್ಲಿ ಜನಿಸಿದವರು ಯಾವುದೇ ಕೆಲಸವನ್ನು ಮುಂದೂಡುವುದಿಲ್ಲ. ಇವರು ಶ್ರಮಜೀವಿಗಳು.

ಈ ಮಗು ದೀಪಿಕಾ ಮತ್ತು ರಣವೀರ್‌ ಅವರಿಗೆ ಅದೃಷ್ಟ ತರಲಿದೆ ಎಂದು ಅನೇಕ ಜ್ಯೋತಿಷಿಗಳು ಊಹಿಸಿದ್ದಾರೆ. 

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮದುವೆ ಬಳಿಕ 6 ವರ್ಷಗಳ ನಂತರ ಮಗುವನ್ನು ಸ್ವಾಗತಿಸಿದ್ದಾರೆ.

(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link