ದೀಪಿಕಾ ಪಡುಕೋಣೆ ಗರ್ಭಿಣಿ ಆಗಿಯೇ ಇಲ್ಲ.. ಪ್ರಗ್ನೆಂಟ್‌ ವಿಚಾರ ಸುಳ್ಳಾ?

Fri, 19 Apr 2024-3:58 pm,

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅಭಿಮಾನಿಗಳಿಗೆ ತಮ್ಮ ಮಗುವಿನ ಆಗಮನದ ಸುಳಿವು ನೀಡಿದ್ದರು. 2024 ರ ಸೆಪ್ಟೆಂಬರ್ ನಲ್ಲಿ ಪುಟಾಣಿ ಕಂದನ ಆಗಮನದ ನಿರೀಕ್ಷೆಯಿದೆ ಎಂದು ತಿಳಿಸಿದ್ದರು. 

ದೀಪಿಕಾ ಪಡುಕೋಣೆ ಗರ್ಭಿಣಿ ಆಗಿದ್ದಾರೆ ಎಂದು ಅವರ ಅಭಿಮಾನಿಗಳು ಸಖತ್ ಸಂಭ್ರಮಿಸಿದ್ದರು. ಮೂಲತಃ ಕರ್ನಾಟಕದವರಾದ ದೀಪಿಕಾ ಪಡುಕೋಣೆ ಬೆಂಗಳೂರಿನಲ್ಲಿ ತಮ್ಮ ಮಗುವಿಗೆ ಜನ್ಮ ನೀಡುತ್ತಾರೆ ಎಂದು ಹೇಳಲಾಗಿತ್ತು.

ಇಲ್ಲೊಂದು ಗಮನಿಸಬೇಕಾದ ಅಂಶವಿದೆ. ದೀಪಿಕಾ ಪಡುಕೋಣೆ ಗರ್ಭಿಣಿ ಎಂದು ಎಲ್ಲಿಯೂ ಅವರು ಹೇಳಿಕೊಂಡಿರಲಿಲ್ಲ. ದೀಪಿಕಾ ಬೇಬಿ ಬಂಪ್‌ ಕಾಣುವಂತಹ ಯಾವುದೇ ಫೋಟೋ ಕೂಡ ತೆಗೆದಿರಲಿಲ್ಲ. 

ಇದೀಗ ದೀಪಿಕಾ ಪಡುಕೋಣೆ ಗರ್ಭಿಣಿ ಅಲ್ಲವೇ ಅಲ್ಲ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇದಕ್ಕೆ ಒಂದಿಷ್ಟು ಕಾರಣಗಳೂ ಇವೆ. 

ಕೆಲ ದಿನಗಳ ಹಿಂದೆ ನಟಿ ದೀಪಿಕಾ ಪಡುಕೋಣೆ ಟ್ಯಾನ್‌ ಆಗಿರುವ ಫೋಟೋ ಶೇರ್‌ ಮಾಡಿದ್ದರು. ಇದನ್ನು ಗಮನಿಸಿದರೆ ಅವರು ಶೂಟಿಂಗ್‌ನಲ್ಲಿ ಬ್ಯುಸಿ ಆಗಿರುವ ವಿಚಾರ ತಿಳಿಯುತ್ತದೆ. 

ನಾಲ್ಕು ತಿಂಗಳ ಗರ್ಭಿಣಿ ದೀಪಿಕಾ ಪಡುಕೋಣೆ ಈ ರೀತಿ ಶೂಟಿಂಗ್‌ ನಲ್ಲಿ ತೊಡಗುವುದು ಕಷ್ಟ ಎನ್ನುತ್ತಿದ್ದಾರೆ ಕೆಲವು ನೆಟ್ಟಿಗರು. ಹಾಗೊಂದು ಶೂಟಿಂಗ್‌ ಮಾಡುತ್ತಿದ್ದಾರೆ ಎಂದಾದರೆ ಇದೀಗ ಶೂಟಿಂಗ್‌ ಸ್ಪಾಟ್‌ನ ಒಂದಷ್ಟು ಫೋಟೋ ವೈರಲ್‌ ಆಗಿವೆ. 

ಪೊಲೀಸ್‌ ಅಧಿಕಾರಿಯಾಗಿ ದೀಪಿಕಾ ಪಡುಕೋಣೆ ನಟಿಸುತ್ತಿರುವ ದೃಶ್ಯ ವೈರಲ್‌ ಆಗಿದ್ದು, ಎಲ್ಲಿಯೂ ಬೇಬಿ ಬಂಪ್‌ ಕಂಡೆ ಇಲ್ಲ. ಈ ಫೋಟೋಗಳಲ್ಲಿ ದೀಪಿಕಾ ಫುಲ್‌ ಫ್ಲ್ಯಾಟ್‌ ಟಮ್ಮಿ ಹೊಂದಿದ್ದಾರೆ.

ನಾಲ್ಕು ತಿಂಗಳು ಗರ್ಭಿಣಿ ಎಂದರೆ ಸಾಮಾನ್ಯವಾಗಿ ಸ್ವಲ್ಪವಾದರೂ ಹೊಟ್ಟೆ ಕಾಣಿಸುತ್ತದೆ. ಆದರೆ ದೀಪಿಕಾ ಪಡುಕೋಣೆ ಬೇಬಿ ಬಂಪ್‌ ಕಾಣಿಸುತ್ತಿಲ್ಲ. ಹೀಗಾಗಿ  ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯುತ್ತಿದ್ದಾರೆ ಎನ್ನಲಾಗ್ತಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link