ಎಷ್ಟೊಂದು ಮುದ್ದಾಗಿದ್ದಾಳೆ ದೀಪಿಕಾ ಪಡುಕೋಣೆ ಪುತ್ರಿ! ಕೊನೆಗೂ ಮಗಳ ಹೆಸರಿನ ಸಮೇತ ಫೋಟೋ ರಿವೀಲ್‌ ಮಾಡಿದ ದೀಪ್‌ವೀರ್‌!‌ ಪುಟಾಣಿ ‘ದೀಪ್ಸ್’ ಹೆಸರೇನು ಗೊತ್ತಾ?

Sat, 02 Nov 2024-9:03 am,

ಬಿ-ಟೌನ್‌ ಪವರ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಪೋಷಕರಾದರು. ಗಣೇಶ ಚತುರ್ಥಿಯ ಸಂದರ್ಭದಲ್ಲಿ ದಂಪತಿ ತಮ್ಮ ಮನೆಗೆ ಲಕ್ಷ್ಮಿಯನ್ನು ಸ್ವಾಗತಿಸಿದ್ದರು. ಇದೀಗ ಒಂದೂವರೆ ತಿಂಗಳ ನಂತರ, ತಮ್ಮ ಮಗಳ ಮೊದಲ ಫೋಟೋವನ್ನು ಹಂಚಿಕೊಂಡಿದ್ದಾರೆ.

 

ಸೆಪ್ಟೆಂಬರ್ 8 ರಂದು ದೀಪಿಕಾ ಪಡುಕೋಣೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ರಣವೀರ್ ಸಿಂಗ್ ತಮ್ಮ ಮಗಳ ಆಗಮನದ ಬಗ್ಗೆ ಅನೇಕ ಬಾರಿ ಸಂತೋಷವನ್ನು ವ್ಯಕ್ತಪಡಿಸಿದ್ದು ತಿಳಿದೇ ಇದೆ. ಆದರೆ ದೀಪಿಕಾ ಆಗಲಿ, ರಣವೀರ್‌ ಆಗಲಿ... ತಮ್ಮ ರಾಜಕುಮಾರಿಯ ಯಾವುದೇ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರಲಿಲ್ಲ.

 

ಇದೀಗ ಫೋಟೋ ಮಾತ್ರವಲ್ಲದೆ, ತಮ್ಮ ಮನೆಯ ಮಹಾಲಕ್ಷ್ಮೀಯ ಮುದ್ದಾದ ಹೆಸರನ್ನು ಸಹ ರಿವೀಲ್‌ ಮಾಡಿದ್ದಾರೆ.

 

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಮೊದಲ ದೀಪಾವಳಿಯನ್ನು ಮಗಳೊಂದಿಗೆ 31 ಅಕ್ಟೋಬರ್ 2024 ರಂದು ಆಚರಿಸಿದ್ದಾರೆ. ಇನ್ನು ಕಳೆದ ದಿನ ಅಂದರೆ ನವೆಂಬರ್ 1 ರಂದು, ನಟಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ರಾಜಕುಮಾರಿಯ ಮೊದಲ ಫೋಟೋವನ್ನು ಹಂಚಿಕೊಂಡಿದ್ದಾರೆ.

 

ಫೋಟೋದಲ್ಲಿ ಪುಟ್ಟ ರಾಜಕುಮಾರಿ ಕೂಡ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿರುವುದು ಕಾಣಬಹುದು. ಇನ್ನು ಮಗುವಿನ ಫೇಸ್‌ ರಿವೀಲ್‌ ಮಾಡಿಲ್ಲ. ಬದಲಾಗಿ ಸುಂದರವಾದ ಪುಟ್ಟಪುಟ್ಟ ಪಾದಗಳ ಚಿತ್ರವನ್ನು ಹಂಚಿಕೊಂಡಿದ್ದಾರೆ.

 

ಇನ್ನು ದೀಪಿಕಾ ಮತ್ತು ರಣವೀರ್ ಸಿಂಗ್ ತಮ್ಮ ಮಗಳಿಗೆ ತುಂಬಾ ಮುದ್ದಾಗಿ ಹೆಸರಿಟ್ಟಿದ್ದಾರೆ. ತಂದೆ-ತಾಯಿಯ ಹೆಸರನ್ನು ಜೋಡಿಸಿ ನಾಮಕರಣ ಮಾಡುವ ಟ್ರೆಂಡ್ ಬ್ರೇಕ್‌ ಮಾಡಿರುವ ಈ ಜೋಡಿ, ತಮ್ಮ ಮಗುವಿಗೆ ವಿಶಿಷ್ಟವಾದ ಹೆಸರನ್ನು ನೀಡಿದ್ದಾರೆ.

 

ʼದುವಾʼ ಎಂದು ತಮ್ಮ ಮಗುವಿಗೆ ಹೆಸರಿಟ್ಟಿದ್ದು, ಶೀರ್ಷಿಕೆಯಲ್ಲಿ ನಟಿ ಅದರ ಅರ್ಥವನ್ನೂ ವಿವರಿಸಿದ್ದಾರೆ. "ದುವಾ ಪಡುಕೋಣೆ ಸಿಂಗ್. ದುವಾ ಎಂದರೆ ಪ್ರಾರ್ಥನೆ. ಈಕೆ ನಮ್ಮಿಬ್ಬರ ಪ್ರಾರ್ಥನೆಯ ಫಲ. ಹೀಗಾಗಿ ಈ ಹೆಸರಿಟ್ಟಿದ್ದೇವೆ. ನಮ್ಮ ಹೃದಯಗಳು ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿವೆ. ದೀಪಿಕಾ ಮತ್ತು ರಣವೀರ್" ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link