ನಟಿ ದೀಪಿಕಾ ಪಡುಕೋಣೆ ಸೀಮಂತ ಶಾಸ್ತ್ರದ ಫೋಟೋಗಳು ವೈರಲ್
ನಟಿ ದೀಪಿಕಾ ಪಡುಕೋಣೆ ಮಗುವನ್ನು ಸ್ವಾಗತಿಸಲು ಇನ್ನೆರಡು ತಿಂಗಳು ಮಾತ್ರ ಬಾಕಿ ಉಳಿದಿದೆ. ಸೆಪ್ಟೆಂಬರ್‌ನಲ್ಲಿ ದೀಪಿಕಾ ತಾಯಿಯಾಗಲಿದ್ದಾರೆ.
ರಣವೀರ್ ಸಿಂಗ್ ಮತ್ತು ದೀಪಿಕಾ ಶೀಘ್ರದಲ್ಲೇ ತಮ್ಮ ಮಗುವನ್ನು ಬರಮಾಡಿಕೊಳ್ಳಲಿದ್ದಾರೆ. ಕೆಲವು ಜೋತಿಷಿಗಳು ಇವರಿಗೆ ಗಂಡು ಮಗು ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಗರ್ಭಿಣಿಯಾಗಿರುವ ವಿಷಯ ತಿಳಿದ ಬಳಿಕ ತಾವು ಸಹಿ ಹಾಕಿದ ಎಲ್ಲಾ ಚಿತ್ರಗಳ ಶೂಟಿಂಗ್‌ನ್ನು ದೀಪಿಕಾ ಕಂಪ್ಲೀಟ್ ಮಾಡಿದ್ದಾರೆ.
ಎಂಟನೆಯ ತಿಂಗಳಿನ ಹೊಸ್ತಿಲಿನಲ್ಲಿರುವ ದೀಪಿಕಾ ಅವರಿಗೆ ಸಂಪ್ರದಾಯಿಕವಾಗಿ ಸೀಮಂತ ಮಾಡಲಾಗಿದೆ.
ದೀಪಿಕಾ ಪಡುಕೋಣೆ ಅವರ ಸೀಮಂತ ಶಾಸ್ತ್ರದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.