ತಾಯಿಯಾದ ನಂತರ ಇನ್ಸ್ಟಾ ಬಯೋ ಬದಲಾಯಿಸಿದ ದೀಪಿಕಾ ಪಡುಕೋಣೆ! ನಟಿ ಈ ರೀತಿ ಬರೆಯಲು ಕಾರಣ ಏನು?

Mon, 16 Sep 2024-8:11 am,

ನಟಿ ದೀಪಿಕಾ ಪಡುಕೋಣೆ ತಾಯಿಯಾದ ನಂತರ ತಮ್ಮ ಇನ್‌ಸ್ಟಾಗ್ರಾಮ್ ಬಯೋವನ್ನು ಬದಲಾಯಿಸಿದ್ದಾರೆ. ಈ ಬಯೋ ಮೂಲಕ ಇದೀಗ ನಟಿ ತಮ್ಮ ಜೀವನದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಮೂರೇ ಮೂರು ಪದಗಳಲ್ಲಿ ಬಿಚ್ಚಿಟ್ಟಿದ್ದಾರೆ. 

ನಟಿ ದೀಪಿಕಾ ಪಡುಕೋಣೆ ಮನೆಗೆ ಪುಟ್ಟ ಅತಿಥಿಯ ಆಗಮನವಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ, ಅವರು ಗರ್ಭಿಣಿ ಎಂದು ಘೋಷಿಸಿದ್ದ ಈ ದೀಪಿಕಾ  ಸೆಪ್ಟೆಂಬರ್ 8 ರಂದು ಗಣೇಶೋತ್ಸವದ ವೇಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 

ಹೆರಿಗೆಗೆ ಎರಡು ದಿನಗಳ ಮೊದಲು ಅವರು ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಗಣಪತಿ ಬಪ್ಪನ ದರ್ಶನ ಪಡೆದಿದ್ದರು. ಮರುದಿನ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ನಟಿ ಮಗುವಿಗೆ ಜನ್ಮ ನೀಡಿದ್ದು, ನಟಿ ಒಂದು ವಾರದ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬರುತ್ತಿದ್ದಂತೆ ನಟಿ ತಮ್ಮ ಇನ್ಸ್ಟಾ ಬಯೋವನ್ನು ಅಪ್ಡೇಟ್‌ ಮಾಡಿದ್ದಾರೆ. ಸದ್ಯ ಇವರು ಬರೆದಿರುವ ಈ ಮೂರು ಪದಗಳು ನೆಟ್ಟಿಗರ ಗಮನ ಸೆಳೆದಿದೆ. 

ತಾಯಿಯಾದ ನಂತರ ದೀಪಿಕಾ ಅವರ ಜೀವನ ಹೇಗೆ ಸಾಗುತ್ತಿದೆ ಎಂಬುದನ್ನು ಪಠ್ಯವನ್ನು ಓದಿದ ನಂತರ ನೆಟ್ಟಿಗರು ನಟಿಯ ಜೀವನ ಹೇಗೆ ಸಾಗುತ್ತಿದೆ ಎಂಬುದನ್ನು ಅರಿತುಕೊಂಡಿದ್ದಾರೆ.

ದೀಪಿಕಾ ತಮ್ಮ ಬಯೋದಲ್ಲಿ  'ಫೀಡ್, ಬರ್ಪ್, ಸ್ಲೀಪ್, ರಿಪೀಟ್' ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಅರ್ಥ  ಹಾಲುಣಿಸಿ, ಮಗುವಿಗೆ  ಬರ್ಪ್  ಮಾಡಿಸಿ, ಮಲಗಿ, ಮತ್ತೆ ಅದನ್ನೆ ರಿಪೀಟ್‌ ಮಾಡುವುದು ಎಂದರ್ಥ.   

ತಾಯಿಯಾದ ನಂತರ, ದೀಪಿಕಾ ಅವರ ಜೀವನವನ್ನು ಅವರ ಮಗು ಹೇಗೆ ಆಕ್ರಮಿಸಿಕೊಂಡಿದೆ, ಎಂದು ಈ ಸಾಲುಗಳು ಹೇಳುತ್ತವೆ.

ಮಗುವಿನ ಜನನದ ನಂತರ ದೀಪಿಕಾ ಮತ್ತು ರಣವೀರ್ ಹೊಸ ಮನೆಗೆ ಹೋಗಲಿದ್ದಾರೆ, ಇದಕ್ಕಾಗಿ ದಂಪತಿ 100 ಕೋಟಿ ಬೆಲೆಬಾಳುವ ಐಶಾರಾಮಿ ಮನೆಯನ್ನು ಖರೀದಿಸಿರುವುದು ಗೊತ್ತೇ ಇದೆ.

2015ರಲ್ಲಿ ದೀಪಿಕಾ-ರಣವೀರ್ ರಹಸ್ಯವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಂತರ 2018 ರಲ್ಲಿ ಅವರು ಇಟಲಿಯಲ್ಲಿ ವಿವಾಹವಾದರು.

ದೀಪಿಕಾಗೆ ಮಗಳು ಹುಟ್ಟಿದ ಕೂಡಲೇ ರಣವೀರ್ ಅವರ ದೊಡ್ಡ ಆಸೆ ಈಡೇರಿದೆ. ರಣವೀರ್ ತಮ್ಮ ಹಳೆಯ ಸಂದರ್ಶನವೊಂದರಲ್ಲಿ ಈ ವಿಶೇಷ ಆಸೆಯನ್ನು ವ್ಯಕ್ತಪಡಿಸಿದ್ದರು. ರಣವೀರ್‌ಗೆ ಮಗಳು ಬೇಕು ಎಂದು ಹೇಳಿದ್ದರು, ಈ ಮೂಲಕ ರಣವೀರ್‌ ಅವರ ಬಹುಕಾಲದ ಆಸೆ ಇದೀಗ ಇಡೇರಿದಂತಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link