ತೊಟ್ಟಿಲಲ್ಲಿ ಗಾಢ ನಿದ್ದೆಗೆ ಜಾರಿರುವ ಮಗು! ಮುದ್ದು ಮಗುವಿನ ಫೋಟೋ ಶೇರ್ ಮಾಡಿದ ದೀಪಿಕಾ !

Tue, 10 Sep 2024-6:25 pm,

ಬಾಲಿವುಡ್ ನ ಖ್ಯಾತ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮುದ್ದಾದ ಹೆಣ್ಣುಮಗುವನ್ನು ಬರ ಮಾಡಿಕೊಂಡಿದ್ದಾರೆ.   

ಸೆಪ್ಟೆಂಬರ್ 08, 2024 ರಂದು ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಇದಕ್ಕೂ ಮೊದಲೇ ದಿಪಿಕಾಗೆ ಯಾವ ಮಗು ಹುಟ್ಟುತ್ತದೆ ಎಂದು ಅನೇಕ ಜ್ಯೋತಿಷಿಗಳು ಭವಿಷ್ಯ ನುಡಿದಿದ್ದರು. ಇದರಲ್ಲಿ ಕೆಲವರು ಹೇಳಿದ್ದು ನಿಜವಾಗಿದೆ. 

ದೀಪಿಕಾ ಮಗುವಿಗೆ ಜನ್ಮ ನೀಡುತ್ತಿದ್ದ ಹಾಗೆ ಮಗುವಿನ AI ಫೋಟೋ ಕೂಡಾ ರಿಲೀಸ್ ಮಾಡಲಾಗಿದೆ. ಅಲ್ಲದೆ ಬೇರೆ ಬೇರೆ ಫೋಟೋ ಗಳು ವೈರಲ್ ಆಗುತ್ತಿವೆ.   

ಈ ಮಧ್ಯೆ ಇದೀಗ ದೀಪಿಕಾ ಪಡುಕೋಣೆ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಮಗುವಿನ ಫೋಟೋ ವೈರಲ್ ಭಾರೀ ಸದ್ದು ಮಾಡುತ್ತಿದೆ. 

ಅಂದ ಹಾಗೆ ಇದು ದೀಪಿಕಾ ಪುಟ್ಟ ಮಗುವಾಗಿದ್ದಾಗಿನ ಫೋಟೋ.2019ರಲ್ಲಿ ನಟಿ ಈ ಫೋಟೋವನ್ನು ಶೇರ್ ಮಾಡಿದ್ದರು.ಇದೀಗ ಈ ಫೋಟೋ ಮತ್ತೊಮ್ಮೆ ವೈರಲ್ ಆಗುತ್ತಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link