`ಮಗುವಾದ ನಂತರ, ನಾನು ಒಂಟಿಯಾಗಿದ್ದೇನೆ..`ಹೆರಿಗೆಯ ನಂತರ ಒಂಟಿಯಾದ್ರಾ ನಟಿ ದೀಪಿಕಾ ಪಡುಕೋಣೆ? ಹೀಗೊಂದು ಶಾಕಿಂಗ್‌ ಹೇಳಿಕೆ ಕೊಡಲು ಕಾರಣ ಏನು?

Tue, 01 Oct 2024-9:08 am,

Deepika Padukone: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸಪ್ಟೆಂಬರ್ 8 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಮಗುವಿನ ಆರೈಕೆಯಲ್ಲಿ ಬ್ಯೂಸಿಯಾಗಿದ್ದಾರೆ. ಸದ್ಯ ನಟನೆಯಿಂದ ದೂರ ಉಳಿದಿರುವ ದೀಪಿಕಾ ಪಡುಕೋಣೆ ಹಸು ಗೂಸಿನ ಕಡೆಗೆ ಗಮನ ಹರಿಸುತ್ತಿದ್ದಾರೆ.   

ನಟಿ ದೀಪಿಕಾ ಪಡುಕೋಣೆ ತಮ್ಮ 22 ದಿನದ ಕಂದಮ್ಮನನ್ನು ನೋಡಿಕೊಳ್ಳಲು, ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಮನೆಯಲ್ಲಿಯೇ ಇರುವ ದೀಪಿಕಾ ಸದ್ಯ ತಮ್ಮ ಪತಿ ರಣವೀರ್‌ ಸಿಂಗ್‌ ಅವರ ಮೇಲೆ ದೂರು ಹೇಳಿದ್ದಾರೆ.   

ಈ ಕುರಿತು ನಾಟಿ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದು, ಈ ಪೋಸ್ಟ್‌ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.   

ಇನ್ನೂ, ನಟಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ರಣವೀರ್‌ 5 ಗಂಟೆಗೆ ಮನೆಗೆ ಬರುತ್ತೇನೆ ಎಂದು ಹೊರಗಡೆ ಹೋದರೆ, ಅವರು ಯಾವ ರೀತಿ 5:01 ಕ್ಕೆ ಕಿಟಕಿ ಬಳಿ ನಿಂತು ತನ್ನ ಪತಿಗಾಗಿ ಕಾಯುತ್ತಾರೆ ಎಂಬುವುದನ್ನು ಈ ಪೋಸ್ಟ್‌ ತೋರಿಸುತ್ತಿದೆ.   

ಈ ಪೋಸ್ಟ್‌ ಸದ್ಯ ದೀಪಿಕಾ ಅವರ ಸ್ಥಿತಿ  ಹೇಗಿದೆ ಎಂಬುದನ್ನು ವಿವರಿಸುತ್ತಿದ್ದು, ನಟಿಯ ಪೋಸ್ಟ್‌ ನೋಡಿದ ಅಭಿಮಾನಿಗಳು ವಿವಿಧ ರೀತಿಯಾಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link