ಶ್ರೀಮಂತ ಉದ್ಯಮಿ.. ಸ್ಟಾರ್‌ ಕ್ರಿಕೆಟರ್‌.. ರಣವೀರ್ ಜೊತೆ ಮದುವೆಗೂ ಮುನ್ನ ಈ 6 ಜನರೊಂದಿಗೆ ಡೇಟಿಂಗ್‌ ಮಾಡಿದ್ದರಂತೆ ದೀಪಿಕಾ ಪಡುಕೋಣೆ!

Fri, 15 Nov 2024-10:46 am,
Deepika Padukone

Deepika Padukone Affairs: ಬಾಲಿವುಡ್ ಸ್ಟಾರ್‌ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮದುವೆಯಾಗಿ 6 ವರ್ಷಗಳು ಕಳೆದಿವೆ.

Deepika Padukone

ದೀಪಿಕಾ ಪಡುಕೋಣೆ ಮಾಡೆಲಿಂಗ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅಂದಿನಿಂದ ಅವರ ಹೆಸರು ಅನೇಕ ಹುಡುಗರೊಂದಿಗೆ ಸೇರಿಕೊಂಡಿದೆ. ದೀಪಿಕಾ ಮಾಡೆಲಿಂಗ್ ದಿನಗಳಲ್ಲಿ ಪರಿಚಯವಾದ ಮೊದಲ ಗೆಳೆಯ ನಿಹಾರ್ ಪಾಂಡ್ಯ ಎಂದು ಹೇಳಲಾಗಿದೆ. ನಿಹಾರ್ ಪಾಂಡ್ಯ ಮತ್ತು ದೀಪಿಕಾ ಪಡುಕೋಣೆ ಮೊದಲು ಭೇಟಿಯಾದದ್ದು 2005 ರಲ್ಲಿ ಮುಂಬೈನ ನಟನಾ ಶಾಲೆಯಲ್ಲಿ.

Deepika Padukone

ಆ ಸಮಯದಲ್ಲಿ ಇಬ್ಬರೂ ಮಾಡೆಲಿಂಗ್ ಮಾಡುತ್ತಿದ್ದರು. ಮೊದಲು ಇಬ್ಬರ ನಡುವೆ ಉತ್ತಮ ಗೆಳೆತನವಿತ್ತು ನಂತರ ಅದು ಪ್ರೀತಿಗೆ ತಿರುಗಿತ್ತು. ಇದಾದ ನಂತರ ಇಬ್ಬರೂ 3 ವರ್ಷಗಳ ಕಾಲ ಸಂಬಂಧ ಹೊಂದಿದ್ದರು ಎನ್ನಲಾಗುತ್ತದೆ. ಬಳಿಕ ದೀಪಿಕಾ ನಿಹಾರ್ ಪಾಂಡ್ಯ ಜೊತೆ ಬ್ರೇಕಪ್‌ ಮಾಡಿಕೊಂಡರಂತೆ.

ದೀಪಿಕಾ ಪಡುಕೋಣೆ ಮತ್ತು ಉಪೇನ್ ಪಟೇಲ್ ಅವರ ಮಾಡೆಲಿಂಗ್ ದಿನಗಳಿಂದಲೂ ಪರಸ್ಪರ ಪರಿಚಯವಿದ್ದರು. ಈ ಸಮಯದಲ್ಲಿ ಇಬ್ಬರೂ ಡೇಟಿಂಗ್ ಮಾಡಲು ನಿರ್ಧರಿಸಿದ್ದರು. ದೀಪಿಕಾ ಪಡುಕೋಣೆ ಮತ್ತು ಉಪೇನ್ ಪಟೇಲ್ ತಮ್ಮ ಸಂಬಂಧದ ಬಗ್ಗೆ ಎಲ್ಲಿಯೂ ಮಾತನಾಡಲಿಲ್ಲ. 

ದೀಪಿಕಾ ಪಡುಕೋಣೆ ಮಾಡೆಲಿಂಗ್ ಮಾಡುವಾಗ ಮುಝಮ್ಮಿಲ್ ಇಬ್ರಾಹಿಂ ಅವರನ್ನು ಭೇಟಿಯಾದರು. ಇಬ್ಬರೂ ಕೆಲಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಆದರೆ, ಮುಝಮ್ಮಿಲ್ ಇಬ್ರಾಹಿಂ ಜೊತೆಗಿನ ದೀಪಿಕಾ ಪಡುಕೋಣೆ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. 

ಟಿ20 ವಿಶ್ವಕಪ್ ನಂತರ ಯುವರಾಜ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಭೇಟಿಯಾದರು. ಅವರ ನಡುವೆ ಸ್ನೇಹ ಬೆಳೆಯಿತು. ಉತ್ತಮ ಸ್ನೇಹಿತರಾದರು. ಯುವರಾಜ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಆಗಾಗ್ಗೆ ಡೇಟ್‌ಗೆ ಹೋಗುತ್ತಿದ್ದರು.

ಒಮ್ಮೆ ದೀಪಿಕಾ ಪಡುಕೋಣೆ ಯುವರಾಜ್ ಸಿಂಗ್‌ಗೆ ದೊಡ್ಡ ಪಾರ್ಟಿಯನ್ನು ಆಯೋಜಿಸಿದ್ದರು. ಯುವರಾಜ್ ಸಿಂಗ್ ಅವರ ಪಂದ್ಯಗಳನ್ನು ವೀಕ್ಷಿಸಲು ದೀಪಿಕಾ ಹೋಗುತ್ತಿದ್ದರು. ಯುವರಾಜ್ ಸಿಂಗ್ ಅವರ ಪೊಸೆಸಿವ್ ಸ್ವಭಾವದಿಂದಾಗಿ ದೀಪಿಕಾ ಪಡುಕೋಣೆ ಬ್ರೇಕ್ ಅಪ್ ಮಾಡಿಕೊಳ್ಳಲು ನಿರ್ಧರಿಸಿದ್ದರು ಎನ್ನಲಾಗಿದೆ.

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ಉದ್ಯಮಿ ವಿಜಯ್ ಮಲ್ಯ ಅವರ ಪುತ್ರ ಸಿದ್ಧಾರ್ಥ್ ಮಲ್ಯ ಪರಸ್ಪರ ಸಂಬಂಧ ಹೊಂದಿದ್ದರು ಎನ್ನಲಾಗುತ್ತದೆ. ಇವರಿಬ್ಬರ ಅಫೇರ್ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಆದರೆ ಈ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. 

ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ನಟಿ ದೀಪಿಕಾ ಪಡುಕೋಣೆ ಅವರ ಅಫೇರ್ ಈಗಲೂ ಆಗಾಗ ಮುನ್ನೆಲೆಗೆ ಬರುವ ವದಂತಿ. ನಟ ರಣಬೀರ್ ಕಪೂರ್ ಜೊತೆ ದೀಪಿಕಾ ಪಡುಕೋಣೆ ಪ್ರೀತಿಯಲ್ಲಿದ್ದರು ಎನ್ನಲಾಗಿದೆ. ರಣಬೀರ್ ಕಪೂರ್ ಹೆಸರನ್ನು ದೀಪಿಕಾ ತನ್ನ ದೇಹದ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದರು. ಆದರೆ ಈ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ

ZEENEWS TRENDING STORIES

By continuing to use the site, you agree to the use of cookies. You can find out more by Tapping this link