ಮಗಳ ಜೊತೆ ಕ್ಯೂಟ್ ಫ್ಯಾಮಿಲಿ ಫೋಟೋ ಹಂಚಿಕೊಂಡ ದೀಪಿಕಾ ಪಡುಕೋಣೆ-ರಣವೀರ್ ಸಿಂಗ್! ಫೋಟೋ ನೋಡಿ ಫ್ಯಾನ್ಸ್ ಫುಲ್ ಖುಷ್
Deepika Padukone: ನಟಿ ದೀಪಿಕಾ ಪಡುಕೋಣೆ ಮೂಲತಃ ಕರ್ನಾಟಕದವರಾಗಿದ್ದರೂ ಬಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದವರು. ತಮ್ಮ ನಟನೆ ಹಾಗೂ ಸೌಂದರ್ಯದ ಮೂಲಕ ಛಾಪು ಮೂಡಿಸಿದವರು.
ನಟಿ ದೀಪಿಕಾ ಅವರು ತಮ್ಮ ಸಿನಿಮಾಗಳ ಮೂಲಕ ಅಷ್ಟೆ ಅಲ್ಲ, ತಮ್ಮ ವೈಯಕ್ತಿಕ ಕಾರಣದಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ.
ಕೆಲವು ತಿಂಗಳ ಹಿಂದೆಯಷ್ಟೆ ನಟಿ ದೀಪಿಕಾ ಪಡುಕೋಣೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ವಿಷಯವನ್ನು ತಾವೇ ಸ್ವತಃ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.
ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ತಮ್ಮ ಮಗುವಿನ ಜನನದ ನಂತರ 100 ಕೋಟಿ ರೂ. ಕೊಟ್ಟು ಹೊಸ ಮನೆ ಖರೀದಿಸಿ ಅದಕ್ಕೆ ಶಿಫ್ಟ್ ಆಗಿದ್ದಾರೆ.
ಹೊಸ ಮನೆಗೆ ಹೋದ ನಂತರ ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ತಮ್ಮ ಮಗಳಿಗೆ ದೀಪಾವಳಿಯಂದು ದುವಾ ಎಂದು ಹೆಸರಿಟ್ಟಿದ್ದರು. ಇದನ್ನು ಅವರೇ ತಮ್ಮ ಅಭಿಮಾನಿಗಳ ಬಳಿ ಹಂಚಿಕೊಂಡಿದ್ದರು.
ಆದರೆ, ದುವಾ ಎಂಬ ಹೆಸರು ಕೆಲವು ದಿನಗಳ ಕಾಲ ವಿವಾಧಕ್ಕೀಡಾಗಿತ್ತು.ಈ ಹೆಸರು ಇಟ್ಟಿದ್ದಕ್ಕಾಗಿ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.
ಮಗುವಿನ ಜನನ ಆದಾಗಿನಿಂದಲೂ ಕೂಡ ದೀಪಿಕಾ ಅಥವಾ ರಣವೀರ್ ಸಿಂಗ್ ಯಾರೂ ಕೂಡ ತಮ್ಮ ಮಗುವಿನ ಫೋಟೋ ರಿವೀಲ್ ಮಾಡಲೇ ಇಲ್ಲ. ಆದರೆ, ಇದೀಗ ಇವರ ಮುದ್ದಾದ ಮಗುವಿಗೆ ಸಂಬಂಧ ಪಟ್ಟ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆಗುತ್ತಿರುವ ಫೋಟೋಗಳಲ್ಲಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅವರು ತಮ್ಮ ಮಗಳನ್ನು ಕೈಯಲ್ಲಿ ನಿಂತಂತೆ ಕಾಣುತ್ತಿದೆ, ಈ ಮುದ್ದಾದ ಫ್ಯಾಮಿಲಿ ಫೋಟೋ ನೋಡಲು ಎರಡು ಕಣ್ಣು ಕೂಡ ಸಾಲದು ಬಿಡಿ.
ಆದರೆ, ವೈರಲ್ ಆಗುತ್ತಿರುವ ಈ ಫೋಟೋಗಳು ಅಸಲಿಯಲ್ಲ ನಕಲಿ. ಈ ಫೋಟೋಗಳನ್ನು ಎಐ ಟೆಕ್ನಾಲಜಿಯಿಂದ ರೂಪಿಸಲಾಗಿದ್ದು, ನಿಜವಾದ ಫೋಟೋಗಳಂತೆ ಕಾಣಿಸುತ್ತಿದೆ.