ದೀಪಿಕಾ ಪಡುಕೋಣೆಗೆ ಗಂಡು ಮಗು ಜನನ.. ವೈರಲ್ ಆಗ್ತಿದೆ ತಾಯಿ ಮಗುವಿನ ಫೋಟೋ !?
ದೀಪಿಕಾ ಪಡುಕೋಣೆ ಸೆಪ್ಟೆಂಬರ್‌ನಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ಈ ಹಿಂದೆ ತಿಳಿಸಿದ್ದರು. ಈ ಬಗ್ಗೆ ಖುದ್ದು ದೀಪಿಕಾ ಮತ್ತು ರಣವೀರ್ ದಂಪತಿ ಪೋಸ್ಟ್ ಮೂಲಕ ತಿಳಿಸಿದ್ದರು.
ಆದರೆ ಈಗ ದೀಪಿಕಾ ಪಡುಕೋಣೆ ಮಗುವಿನೊಂದಿಗೆ ಆಸ್ಪತ್ರೆಯಲ್ಲಿರುವ ಫೋಟೋ ವೈರಲ್ ಆಗಿದ್ದು ಜನರಲ್ಲಿ ಆಶ್ಚರ್ಯ ಮೂಡಿಸಿದೆ.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರಿಗೆ ಗಂಡು ಮಗು ಜನಿಸಿದೆ ಎಂದು ಹೇಳಲಾಗುತ್ತಿದೆ. ದೀಪಿಕಾ ಮತ್ತು ರಣವೀರ್ ತಮ್ಮ ಮಗುವಿನೊಂದಿಗೆ ಪೋಸ್ ನೀಡಿದಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೀಪಿಕಾ ಮತ್ತು ರಣವೀರ್ ಮಗುವಿನ ಜೊತೆಗಿರುವ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ದೀಪಿಕಾ ಮತ್ತು ರಣವೀರ್ ತಮ್ಮ ಪುಟ್ಟ ಮಗುವಿನೊಂದಿಗೆ ಇರುವ ಫೋಟೋ ನೋಡಿದ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ವೈರಲ್ ಆದ ಈ ಫೋಟೋದಲ್ಲಿ ದೀಪಿಕಾ ಪಡುಕೋಣೆ ಹಾಸಿಗೆ ಮೇಲೆ ಮಲಗಿದ್ದು ಅವರ ಪಕ್ಕದಲ್ಲಿ ರಣವೀರ್ ಮಗು ಹಿಡಿದು ನಿಂತಿದ್ದಾರೆ. ಆದರೆ ಈ ಫೋಟೋದ ಅಸಲಿಯತ್ತು ಬೇರೆಯೇ ಇದೆ.
ಇದು ನಕಲಿ ಫೋಟೋ ಆಗಿದ್ದು, ಅದನ್ನು ಚೆನ್ನಾಗಿ ಎಡಿಟ್ ಮಾಡಲಾಗಿದೆ. ದೀಪಿಕಾ ಪಡುಕೋಣೆ ಮಗುವಿಗೆ ಜನ್ಮ ನೀಡಿಲ್ಲ. ದೀಪಿಕಾ ಸೆಪ್ಟೆಂಬರ್ 2024 ರಲ್ಲಿ ತಮ್ಮ ಪುಟ್ಟ ಮಗುವನ್ನು ಸ್ವಾಗತಿಸಲಿದ್ದಾರೆ.