ದೀಪಿಕಾ ಪಡುಕೋಣೆಗೆ ಅವಳಿ ಮಕ್ಕಳು.. ವೈರಲ್‌ ಆಗ್ತಿದೆ ಫೋಟೋ !?

Thu, 05 Sep 2024-12:24 pm,

ದೀಪಿಕಾ ಪಡುಕೋಣೆ ಬಾಲಿವುಡ್‌ನ ಸ್ಟಾರ್‌ ನಟಿ. ತುಂಬು ಗರ್ಭಿಣಿಯಾಗಿರುವ ದೀಪಿಕಾ ಬಗ್ಗೆ ಒಂದು ಸುದ್ದಿ ವೈರಲ್‌ ಆಗಿದೆ. 

ಇತ್ತೀಚೆಗಷ್ಟೇ ದೀಪಿಕಾ ಪಡುಕೋಣೆ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ ಸಿಕ್ಕಾಪಟ್ಟೆ ಸುಂದರವಾಗಿ ಕಾಣುತ್ತಿದ್ದಾರೆ. 

ಬಾಲಿವುಡ್‌ನ ಬೆಸ್ಟ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣಬೀರ್ ಸಿಂಗ್ ಶೀಘ್ರದಲ್ಲೇ ತಮ್ಮ ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ.

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ನವೆಂಬರ್ 14, 2018 ರಂದು ಕೊಂಕಣಿ ಮತ್ತು ಸಿಂಧಿ ಸಂಪ್ರದಾಯದಂತೆ ವಿವಾಹವಾದರು. ಸುಮಾರು ಐದೂವರೆ ವರ್ಷಗಳ ನಂತರ ಅವರು ಪೋಷಕರಾಗಲಿದ್ದಾರೆ.

ದೀಪಿಕಾ ಪಡುಕೋಣೆ ತಮ್ಮ ಬೇಬಿ ಬಂಪ್‌ನ ಅದ್ಭುತ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. 

ದೀಪಿಕಾ ಬೇಬಿ ಬಂಪ್‌ ಕಂಡ ಅನೇಕ ನೆಟ್ಟಿಗರು ಅವಳಿ ಜವಳಿ ಮಕ್ಕಳಾಗಬಹುದೆಂದು ಊಹಿಸುತ್ತಿದ್ದಾರೆ. 

ಕೆಲವರು ದೀಪಿಕಾಗೆ ಮಗಳು ಜನಿಸಬಹುದು ಎಂದು ಊಹೆ ಮಾಡಿದರೆ ಇನ್ನು ಕೆಲವರು ಆಕೆಗೆ ಗಂಡು ಮಗು ಜನಿಸುವುದು ಎಂದು ಹೇಳುತ್ತಿದ್ದಾರೆ. 

ಇದಕ್ಕೆ ವಿರುದ್ಧವಾಗಿ ಕೆಲವು ನೆಟ್ಟಿಗರು, "ಅವಳಿ ಮಕ್ಕಳು ಜನಿಸಬಹುದು ಅನಿಸುತ್ತಿದೆ" ಎಂದು ಹೇಳಿದ್ದಾರೆ.  

ದೀಪಿಕಾ ಅವರ ಹೊಟ್ಟೆ ತುಂಬಾ ದೊಡ್ಡದಾಗಿ ಕಾಣುತ್ತಿರುವ ಕಾರಣಕ್ಕೆ ಅವಳಿ ಮಕ್ಕಳು ಜನಿಸಬಹುದೆಂದು ಜನರು ಭಾವಿಸುತ್ತಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link