Deepika Padukone : ದೀಪಿಕಾ ಬೇಬಿ ಬಂಪ್ ಫೋಟೋಶೂಟ್‌..! ಮೊದಲ ಮಗುವಿನ ನಿರೀಕ್ಷೆಯಲ್ಲಿ ದೀಪ್‌ವೀರ್

Mon, 02 Sep 2024-7:18 pm,

ಬಾಲಿವುಡ್‌ ಕ್ಯೂಟ್‌ ಜೋಡಿಗಳಲ್ಲಿ ಒಂದಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ತಿಂಗಳ ಕೊನೆಯಲ್ಲಿ ಮಗುವಿನ ಆಗಮನಕ್ಕಾಗಿ ದಂಪತಿ ಕಾಯುತ್ತಿದ್ದಾರೆ. ಇದರ ನಡುವೆ ಬೇಬಿ ಬಂಪ್‌ ಫೋಟೋ ಶೂಟ್‌ಗೆ ದೀಪಿಕಾ-ರಣವೀರ್‌ ಪೋಸ್‌ ನೀಡಿದ್ದಾರೆ..  

ಫೋಟೋಗಳಲ್ಲಿ ತಾಯಿಯಾಗಲಿರುವ ದೀಪಿಕಾ ತನ್ನ ಮಗುವಿನ ಬಂಪ್ ಅನ್ನು ತೋರಿಸುತ್ತಿರುವುದನ್ನು ಕಾಣಬಹುದು.. ಕಳೆದ ಕೆಲವು ದಿನಗಳ ಹಿಂದೆ ದೀಪಿಕಾ ಆಗಲೇ ಮಗುವಿಗೆ ಜನ್ಮ ನೀಡಿದ್ದಾಗಿ ಸುದ್ದಿಯಾಗಿತ್ತು.. ಆದರೆ ಅದೇಲ್ಲಾ ಸುಳ್ಳು ಎನ್ನುವುದು ಈ ಫೊಟೋಸ್‌ ಮೂಲಕ ಜೋಡಿ ಕ್ಲಾರೀಟಿ ನೀಡಿದೆ.  

ದೀಪಿಕಾ ಪಡುಕೋಣೆ ಮೆಟರ್ನಿಟಿ ಫೋಟೋಶೂಟ್‌ನಲ್ಲಿ ಅವರು ಕಪ್ಪು ಸೂಟ್‌ ಧರಿಸಿದ್ದಾರೆ. ಸ್ಪಷ್ಟವಾಗಿ ಮಗುವಿನ ಬಂಪ್ ಅನ್ನು ಪ್ರದರ್ಶಿಸಿದ್ದಾರೆ. ಡಿಂಪಲ್ ಸ್ಮೈಲ್ ನೋಡಿದ್ರೆ ದೀಪಿಕಾ ಖುಷಿ ಎಷ್ಟಿದೆ ಅಂತ ಗೊತ್ತಾಗುತ್ತದೆ.. ಅಲ್ಲದೆ ರಣವೀರ್‌ ಸಹ ಅಪ್ಪನಾಗಲಿದ್ದು, ಆ ನಗು ಅವರ ಮುಖದಲ್ಲಿ ಸ್ಪಷ್ಟವಾಗಿದೆ.  

ಅನೇಕ ಊಹಾಪೋಹಗಳ ನಂತರ, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅಂತಿಮವಾಗಿ ಈ ವರ್ಷದ ಫೆಬ್ರವರಿಯಲ್ಲಿ ತಮ್ಮ ಗರ್ಭಧಾರಣೆಯನ್ನು ಘೋಷಿಸಿದರು. ಅಲ್ಲದೆ, ದಂಪತಿ ತಮ್ಮ ಮಗು ಸೆಪ್ಟೆಂಬರ್ 2024 ರಲ್ಲಿ ಬರಲಿದೆ ಎಂದು ಹಂಚಿಕೊಂಡಿದ್ದರು.   

ದೀಪಿಕಾ ಪಡುಕೋಣೆ ಮತ್ತು ರಣವೀರ್ ಫೆಬ್ರವರಿ 29 ರಂದು, ಜಾಮ್‌ನಗರದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭಕ್ಕೆ ಹೋಗುವ ಮುಂಚೆ ತಮ್ಮ ಪ್ರಗ್ನೆನ್ಸಿ ಸುದ್ದಿಯನ್ನು ಹಂಚಿಕೊಂಡಿದ್ದರು.    

ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ ಜೊನಾಸ್, ವಿಕ್ರಾಂತ್ ಮಾಸ್ಸೆ, ಆಯುಷ್ಮಾನ್ ಖುರಾನಾ ಮತ್ತು ಸೋನಮ್ ಕಪೂರ್ ಅಹುಜಾ ಸೇರಿದಂತೆ ಹಲವು ಸೆಲೆಬ್ರಿಟಿಗಳು ದೀಪಿಕಾ ರಣವೀರ್‌ಗೆ ಶುಭಕೋರಿದ್ದರು. ಪೋಷಕರ ಕೂಟಕ್ಕೆ ಸ್ವಾಗತ ಕೋರಿದ್ದರು..   

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ 2018 ರಲ್ಲಿ ಇಟಲಿಯಲ್ಲಿ ಆತ್ಮೀಯ ಮತ್ತು ಅದ್ಧೂರಿ ಸಮಾರಂಭದಲ್ಲಿ ವಿವಾಹವಾದರು. ಸಧ್ಯ ಈ ತಿಂಗಳ ಕೊನೆಯಲ್ಲಿ ದಂಪತಿ ಮೊದಲ ಮಗುವನ್ನು ಸ್ವಾಗತಿಸುವ ನಿರೀಕ್ಷೆಯಲ್ಲಿದ್ದಾರೆ. ಅಭಿಮಾನಿಗಳು ದೀಪ್‌ವೀರ್‌ಗೆ ಶುಭಕೋರುತ್ತಿದ್ದಾರೆ.  

ಸೆಪ್ಟೆಂಬರ್ 28 ರಂದು ಮುಂಬೈನ ಆಸ್ಪತ್ರೆಯಲ್ಲಿ ದೀಪಿಕಾ ಮಗುವಿಗೆ ಜನ್ಮ ನೀಡಲಿದ್ದಾರೆ. ಶೀಘ್ರದಲ್ಲೇ ತಾಯಿಯಾಗಲಿರುವ ನಟಿ ಕೆಲಸದಿಂದ ವಿರಾಮ ತೆಗೆದುಕೊಂಡಿದ್ದು, ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಇತ್ತೀಚಿಗೆ ದೀಪಿಕಾ ಕಲ್ಕಿ 2898 ಎಡಿ ಮೂಲಕ ತೆರೆ ಮೇಲೆ ಕಾಣಿಸಿಕೊಂಡಿದ್ದರು..  

ದೀಪಿಕಾ ಪಡುಕೋಣೆ ಬೇಬಿ ಬಂಪ್ ಫೋಟೋಶೂಟ್‌  

ದೀಪಿಕಾ ಪಡುಕೋಣೆ ಬೇಬಿ ಬಂಪ್ ಫೋಟೋಶೂಟ್‌  

ದೀಪಿಕಾ ಪಡುಕೋಣೆ ಬೇಬಿ ಬಂಪ್ ಫೋಟೋಶೂಟ್‌  

ದೀಪಿಕಾ ಪಡುಕೋಣೆ ಬೇಬಿ ಬಂಪ್ ಫೋಟೋಶೂಟ್‌  

ದೀಪಿಕಾ ಪಡುಕೋಣೆ ಬೇಬಿ ಬಂಪ್ ಫೋಟೋಶೂಟ್‌  

ZEENEWS TRENDING STORIES

By continuing to use the site, you agree to the use of cookies. You can find out more by Tapping this link