3 ತಿಂಗಳ ಬಳಿಕ ಮಗಳ ಮುಖ ರಿವೀಲ್ ಮಾಡಿದ ದೀಪಿಕಾ-ರಣವೀರ್ ದಂಪತಿ! ಎಷ್ಟೊಂದು ಮುದ್ದಾಗಿದ್ದಾಳೆ ನೋಡಿ ದುಂಡು ಮುಖದ ರಾಜಕುಮಾರಿ!
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮೂರು ತಿಂಗಳ ಬಳಿಕ ತಮ್ಮ ಮುದ್ದಿನ ಮಗಳು ದುವಾ ಮುಖವನ್ನು ತೋರಿಸಿದ್ದಾರೆ.
ಮೂರು ತಿಂಗಳ ಬಳಿಕ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಮಗಳನ್ನು ಪಾಪರಾಜಿಗಳಿಗೆ ಪರಿಚಯಿಸಿದ್ದಾರೆ. ಪಾಪರಾಜಿಗಳಿಗಾಗಿಯೇ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದ ಬಾಲಿವುಡ್ ಕಪಲ್ ಮಗಳನ್ನು ಪರಿಚಯಿಸಿದ್ದಾರೆ.
ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮಗಳು ದುವಾ ಪಡುಕೋಣೆ ಸಿಂಗ್ ಸೆಪ್ಟೆಂಬರ್ 8, 2024 ರಂದು ಜನಿಸಿದರು. ಮೊಮ್ಮಗಳು ದುವಾಗೆ ಮೂರು ತಿಂಗಳು ತುಂಬಿದ ಹಿನ್ನೆಲೆ ಅಜ್ಜಿ ಅಂಜು ಭವ್ನಾನಿ ಕೂದಲನ್ನು ದಾನ ಮಾಡಿದ್ದಾರೆ.
ಇತ್ತೀಚೆಗೆ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮಗಳ ಒಂದಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮಗಳೊಟ್ಟಿಗೆ ಕ್ರಿಸ್‌ಮಸ್ ಉಡುಪಿನಲ್ಲಿರುವ ಫೋಟೋಗಳು ವೈರಲ್ ಆಗಿವೆ. ಆದರೆ ಈ ಫೋಟೋಗಳು ನಿಜವಾದ ಮಗುವಿನದ್ದಲ್ಲ. ಇದು AI ನಿರ್ಮಿತ ಫೋಟೋಗಳಾಗಿವೆ.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಪಾಪರಾಜಗಳಿಗೆ ತಮ್ಮ ಮಗಳನ್ನು ಪರಿಚಯಿಸಿದ್ದು, ಫೋಟೋ ತೆಗೆಯದಂತೆ ವಿನಂತಿಸಿಕೊಂಡಿದ್ದಾರೆ.
ಜೊತೆಗೆ ಇದು ವರೆಗೆ ಎಲ್ಲಿಯೂ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮಗಳ ಮುಖವನ್ನ ರಿವೀಲ್ ಮಾಡಿಲ್ಲ.