ದೀಪಿಕಾ ಪಡುಕೋಣೆ ತಂಗಿಯನ್ನ ನೋಡಿದ್ದೀರಾ, ಈಕೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ! ಅಕ್ಕನನ್ನೂ ಮೀರಿಸುವ ಅತಿಲೋಕ ಸುಂದರಿ
Deepika Padukone Sister Anisha Padukone: ನಟಿ ದೀಪಿಕಾ ಪಡುಕೋಣೆ ಅವರಿಗೆ ಓರ್ವ ಸಹಹೋದರಿ ಇದ್ದಾರೆ ಎಂಬ ವಿಚಾರ ಅನೇಕರಿಗೆ ತಿಳಿದಿಲ್ಲ.
ನಟಿ ದೀಪಿಕಾ ಪಡುಕೋಣೆ ತಂಗಿ ಯಾರು, ಏನ್ಮಾಡ್ತಾರೆ, ಎಲ್ಲಿರೋದು ಎಂಬ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ..
ದೀಪಿಕಾ ಪಡುಕೋಣೆ ತಂಗಿ ಅನಿಶಾ ಪಡುಕೋಣೆ. ಇವರ ಸೌಂದರ್ಯಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಅನಿಶಾ ಪಡುಕೋಣೆ ಬೆಂಗಳೂರಿನಲ್ಲಿ 02 ಫೆಬ್ರವರಿ 1991 ರಂದು ಜನಿಸಿದರು
ಅನಿಶಾ ಪಡುಕೋಣೆ ಮಾಜಿ ಗಾಲ್ಫ್ ಆಟಗಾರ್ತಿ ಆಗಿದ್ದಾರೆ. ಹನ್ನೆರಡು ವರ್ಷದವಳಿದ್ದಾಗಲೇ ಗಾಲ್ಫ್ ಕ್ರೀಡೆಯಲ್ಲಿ ಮಿಂಚಿದವರು ಅನಿಶಾ.
ಇವರ ತಂದೆ ಪ್ರಕಾಶ್ ಪಡುಕೋಣೆ ಭಾರತದ ಲೆಜೆಂಡರಿ ಬ್ಯಾಡ್ಮಿಂಟನ್ ಆಟಗಾರರಾಗಿದ್ದಾರೆ.
ಅನಿಶಾ ಪಡುಕೋಣೆ ದಿ ಲೈವ್ ಲವ್ ಲಾಫ್ ಫೌಂಡೇಶನ್‌ನ ಸಿಇಒ ಆಗಿದ್ದಾರೆ. ಇದನ್ನು ದೀಪಿಕಾ ಪಡುಕೋಣೆ ಆರಂಭಿಸಿದ್ದರು.
ದೀಪಿಕಾರಂತೆಯೇ ಅನಿಶಾ ಪಡುಕೋಣೆ ಸಹ ಸೌಂದರ್ಯಕ್ಕೆ ಒಡತಿ. ಇನ್‌ಸ್ಟಾಗ್ರಾಮ್‌ನಲ್ಲಿ ಅನಿಶಾ ಪಡುಕೋಣೆ ಎರಡು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.
ದೀಪಿಕಾ ಪಡುಕೋಣೆ ಸಹೋದರಿ ಅನಿಶಾ ಪಡುಕೋಣೆ ಕಳೆದ ವರ್ಷ ಪ್ರತಿಷ್ಠಿತ ʻಶೀಸ್ಪಾರ್ಕ್ಸ್ʼ (She Sparks) ಪ್ರಶಸ್ತಿಯನ್ನು ಗೆದ್ದರು. ಆ ಬಳಿಕ ಇವರ ಬಗ್ಗೆ ಚರ್ಚೆ ಹೆಚ್ಚಾಯಿತು.