ನಟಿ ದೀಪಿಕಾ ಪಡುಕೋಣೆ ತಂಗಿ ಯಾರು ಗೊತ್ತಾ? ಅಕ್ಕನನ್ನೂ ಮೀರಿಸುವಷ್ಟು ಅತಿಲೋಕ ಸುಂದರಿ; ಈಕೆ ಟೀಂ ಇಂಡಿಯಾದ ಸ್ಟಾರ್ ಪ್ಲೇಯರ್ ಕೂಡ...
ಬಾಲಿವುಡ್ ಸೂಪರ್ ಸ್ಟಾರ್ ದೀಪಿಕಾ ಪಡುಕೋಣೆ ಸೆಪ್ಟೆಂಬರ್ 8ರಂದು ಮುದ್ದಾದ ಹೆಣ್ಣುಮಗುವಿಗೆ ಜನ್ಮನೀಡಿದ್ದಾರೆ. ಲಕ್ಷ್ಮೀ ಆಗಮನದಿಂದ ಪಡುಕೋಣೆ ಮತ್ತು ಸಿಂಗ್ ಕುಟುಂಬದಲ್ಲಿ ಸಂತಸ ಮನೆಮಾಡಿದೆ
ಅಂದಹಾಗೆ ನಾವಿಂದು ಈ ವರದಿಯಲ್ಲಿ ದೀಪಿಕಾ ಪಡುಕೋಣೆ ತಂಗಿಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇವರ ಹಿನ್ನೆಲೆಯೇನು? ಏನು ಮಾಡುತ್ತಿದ್ದಾರೆ? ವಿದ್ಯಾಭ್ಯಾಸವೇನು? ಎಂಬೆಲ್ಲದರ ಬಗ್ಗೆ ತಿಳಿದುಕೊಳ್ಳೋಣ.
ದೀಪಿಕಾ ಪಡುಕೋಣೆ ತಂಗಿ ಹೆಸರು ಅನಿಶಾ ಪಡುಕೋಣೆ. ಇವರು ಹುಟ್ಟಿದ್ದು 2 ಫೆಬ್ರವರಿ 1991 ರಂದು ಬೆಂಗಳೂರಿನಲ್ಲಿ. ಈಗ ಇವರಿಗೆ 33 ವರ್ಷ ವಯಸ್ಸು.
ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಅನಿಶಾ ವೃತ್ತಿಪರ ಗಾಲ್ಫ್ ಆಟಗಾರ್ತಿಯಾಗಿದ್ದು, ತಾನು ಹನ್ನೆರಡು ವರ್ಷದವಳಿದ್ದಾಗಲೇ ಈ ಕ್ರೀಡೆಯಲ್ಲಿ ಮಿಂಚಲು ಶುರು ಮಾಡಿದ್ದಾರೆ. ಅಷ್ಟೇ ಅಲ್ಲದೆ, ಟಾಪ್ 10 ರ್ಯಾಂಕಿಂಗ್ʼನಲ್ಲೂ ಇದ್ದರು.
ಅನಿಶಾ ಮತ್ತು ದೀಪಿಕಾ ಐದು ವರ್ಷಗಳ ವಯಸ್ಸಿನ ಅಂತರವನ್ನು ಹೊಂದಿದ್ದು, ಬಹಳಷ್ಟು ಅನ್ಯೋನ್ಯವಾಗಿದ್ದಾರೆ. ಇನ್ನು ಇವರ ತಂದೆ ಭಾರತದ ಲೆಜೆಂಡಡಿ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಎಂಬುದು ತಿಳಿದ ವಿಚಾರವೇ.
ಪ್ರಕಾಶ್ ಪಡುಕೋಣೆ ಭಾರತದ ಯಶಸ್ವಿ ಕ್ರೀಡಾ ಪಟು. 1980 ರಲ್ಲಿ ವಿಶ್ವ ನಂ.1 ಶ್ರೇಯಾಂಕವನ್ನು ಪಡೆದ ಈ ದಿಗ್ಗಜ, ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ʼಗಳನ್ನು ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇನ್ನೊಂದೆಡೆ ಅನಿಶಾ ಅವರು ಅಕ್ಕ ದೀಪಿಕಾ ಜೊತೆಗೂಡಿ 2015 ರಲ್ಲಿ ಚಾರಿಟಬಲ್ ಟ್ರಸ್ಟ್ ಲೈವ್ ಲಾಫ್ ಲವ್ ಪ್ರಾರಂಭಿಸಿದ್ದಾರೆ.