ದೀಪಿಕಾ-ರಣವೀರ್ ಮಗಳ ಫೋಟೋ ವೈರಲ್! ಅಬ್ಬಬ್ಬಾ...ಎಷ್ಟು ಕ್ಯೂಟ್ ಇದ್ದಾಳೆ ಗೊತ್ತಾ ಮಿನಿ ದಿಪ್ಪಿ?
ಬಾಲಿವುಡ್‌ನ ಪವರ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮುದ್ದಾದ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ. ಸೆಪ್ಟೆಂಬರ್ 08ರಂದು ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ಸುದ್ದಿ ಹೊರಬಿದ್ದಾಗಿನಿಂದ ಅಭಿಮಾನಿಗಳು ಮಗುವಿನ ಮುಖ ನೋಡಲು ಹೆಣಗಾಡುತ್ತಿದ್ದಾರೆ. ಹೀಗಿರುವಾಗ ನಟಿ ತನ್ನ ಪುಟ್ಟ ಮಗಳೊಂದಿಗೆ ಇರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆಗುತ್ತಿರುವ ಚಿತ್ರದಲ್ಲಿ, ದೀಪಿಕಾ ಆಸ್ಪತ್ರೆಯ ಗೌನ್ ಧರಿಸಿ ಮಗುವನ್ನು ಮಡಿಲಲ್ಲಿಟ್ಟುಕೊಂಡಿದ್ದಾರೆ. ಇದರಿಂದಾಗಿ ಅನೇಕರು ಇದು ನಟಿ ಮತ್ತು ಅವರ ಮಗಳ ಚಿತ್ರ ಎಂದು ಭಾವಿಸಿದ್ದರು. ಆದರೆ, ಈ ವೈರಲ್ ಚಿತ್ರಗಳ ಹಿಂದಿನ ಸತ್ಯ ಇದೀಗ ಹೊರಬಿದ್ದಿದೆ.
ಈ ಚಿತ್ರಗಳು ಇತ್ತೀಚಿನವುಗಳಲ್ಲ, ಈ ಚಿತ್ರದಲ್ಲಿನ ಫೋಟೋ ದೀಪಿಕಾ ಅವರದ್ದೆ ಆದರೂ, ವಾಸ್ತವವಾಗಿ ಈ ಚಿತ್ರವನ್ನು ಮುಂಚೆ ಒಂದು ಚಿತ್ರಕ್ಕಾಗಿ ಚಿತ್ರೀಕರಣ ಮಾಡಿದ ವೇಳೆ ತೆಗೆಯಲಾಗಿದೆ. ಆಕೆಯ ಮಡಿಲಲ್ಲಿರುವ ಮಗು ಚಿತ್ರದ ಒಂದು ದೃಶ್ಯದ ಭಾಗವಾಗಿದೆ. ನಟಿಯ ಆಪ್ತ ಮೂಲವೊಂದು ಈ ಮಾಹಿತಿಯನ್ನು ಹಂಚಿಕೊಂಡಿದೆ.
ಮಗುವಿನೊಂದಿಗೆ ಕಾಣಿಸಿಕೊಂಡಿರುವ ದೀಪಿಕಾ ಪಡುಕೋಣೆಯ ಈ ಚಿತ್ರಗಳನ್ನು ಎಐ ರಚಿಸಿದೆ ಎಂದು ಹೇಳಲಾಗುತ್ತಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಎಲ್ಲಾ ಫೋಟೋಗಳು ಎಐ ರಚನೆಯ ಫೋಟೋಗಳಾಗಿದ್ದು, ದೀಪಿಕಾ ರಣವೀರ್ ಜೋಡಿ ಅಧಿಕೃತವಾಗಿ ಯಾವುದೇ ಫೋಟೋಗಳನ್ನು ಇನ್ನೂ ಹಂಚಿಕೊಂಡಿಲ್ಲ.
ಚಿತ್ರಗಳನ್ನು ನೋಡಿದಾಗ, ನಟಿ ತನ್ನ ಪ್ರೀತಿಯ ಮಗಳ ಮೊದಲ ನೋಟವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಎಂದು ಅಭಿಮಾನಿಗಳಲ್ಲಿ ಉತ್ಸಾಹ ಮತ್ತು ಸಂತೋಷದಿಂದ ಕುಣಿದಾಡಿದ್ದರು. ಈ ಫೋಟೋ ನೋಡಿದ ಅಭಿಮಾನಿಗಳು ದೀಪಿಕಾ ಅವರನ್ನು ಅಭಿನಂದಿಸಲು ಆರಂಭಿಸಿದರು, ಆದರೆ ಇದೀಗ ಈ ವೈರಲ್ ಫೋಟೋದ ಹಿಂದಿನ ಸತ್ಯಾಂಶ ಹೊರಬಿದ್ದಿದ್ದು ಫ್ಯಾನ್ಸ್ ನಿರಾಶರಾಗಿದ್ದಾರೆ
ಈ ಲೇಖನವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ವದಂತಿಗಳ ಆಧಾರದ ಮೇಲೆ ಬರೆಯಲಾಗಿದೆ. ಜೀ ಕನ್ನಡ ನ್ಯೂಸ್ ಇದಕ್ಕೆ ಹೊಣೆಯಾಗಿಲ್ಲ.