ದೀಪಿಕಾ-ರಣವೀರ್ ವೆಡ್ಡಿಂಗ್ ಆಲ್ಬಂನ 10 ಬೆಸ್ಟ್ ಫೋಟೋಗಳು....!
ವಿವಾಹಕ್ಕೂ ಮುನ್ನ ಮುಂಬೈನಲ್ಲಿರುವ ದೀಪಿಕಾ ಪಡುಕೋಣೆ ಮನೆಯಲ್ಲಿ ನಂದಿ ಪೂಜೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಿತ್ತಳೆ ಬಣ್ಣದ ಉಡುಗೆಯಲ್ಲಿ ದೀಪಿಕಾ ಕಂಗೊಳಿಸಿದರು.
ದೀಪಿಕಾ ಪಡುಕೋಣೆಯ ಈ ಲುಕ್ ಅನ್ನು ಸಬ್ಯಸಾಚಿ ಮುಖರ್ಜಿ ತಮ್ಮ ಇನ್ಸ್ಟಾಗ್ರಾಂ ಅಕೌಂಟ್'ನಲ್ಲಿ ಶೇರ್ ಮಾಡಿದ್ದಾರೆ. ಈ ಲುಕ್ ನಲ್ಲಿ ದೀಪಿಕಾ ತಮ್ಮ ಉಡುಗೆಗೆ ಮ್ಯಾಚ್ ಆಗುವಂತಹ ಭಾರೀ ಆಭರಣಗಳನ್ನು ಧರಿಸಿದ್ದಾರೆ.
ದೀಪಿಕಾ ಅವರ ಸ್ಟೈಲಿಸ್ಟ್ ಶಾಲಿನಾ ನಟಾನಿ ನಂದಿ ಪೂಜೆ ಚಿತ್ರಗಳನ್ನು ಶೇರ್ ಮಾಡಿದ್ದಾರೆ.
ಮುಂಬೈ ನಿವಾಸದಲ್ಲಿ ನಡೆದ ನಂದಿ ಪೂಜೆ ಸಂದರ್ಭದಲ್ಲಿ ತಂದೆ, ತಾಯಿ ಮತ್ತು ತಂಗಿಯೊಂದಿಗೆ ದೀಪಿಕಾ ಪಡುಕೋಣೆ ಕುಳಿತಿರುವುದು.
ಇಟಲಿಗೆ ತೆರಳುವ ಮುನ್ನ ವರ ರಣವೀರ್ ಸಿಂಗ್ ಮನೆಯಲ್ಲಿ ಹಳದಿ ಶಾಸ್ತ್ರ ನೆರವೇರಿತು. ಈ ಸಂದರ್ಭದಲ್ಲಿ ಯಸ್ ರಾಜ್ ಕಂಪನಿಯ ಕಾಸ್ಟಿಂಗ್ ಡೈರೆಕ್ಟರ್ ಶಾನೋ ಶರ್ಮಾ ಜೊತೆ ಆತ್ಮೀಯವಾಗಿರುವುದು.
ದೀಪ್ ವೀರ್ ವಿವಾಹದಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಪಂಜಾಬಿ ಸಿಂಗರ್ ಹರ್ಷ್ ದೀಪ್ ಕೌರ್ ಸಹ ಆಗಮಿಸಿದ್ದರು.
ಇಟಲಿಯ ಇಂಟರ್ನೆಟ್ ಫ್ರೀ ಜೋನ್ ನಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಮೊಬೈಲ್ ಗೊಂ ಆಗಲೀ, ಫೋಟೊ ಕ್ಲಿಕ್ಕಿಸುವುದಾಗಲೀ ನಿಷೇಧಿಸಲಾಗಿತ್ತು.
ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆದ ಫೋಟೋಗಳಲ್ಲಿ ಕೆಲವು ತಾರೆಯರ ಫ್ಯಾಮಿಲಿ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದನ್ನು ಕಾಣಬಹುದು.
ದೀಪಿಕಾ ಪಡುಕೋಣೆ ಮತ್ತು ರಣ್‍ವೀರ್ ಸಿಂಗ್ ಅವರು ಕೊಂಕಣಿ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಸಿಂಧಿ ಶೈಲಿಯ ಮದುಮಕ್ಕಳಾಗಿ ಮಿಂಚಿದ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗಿವೆ.
ಇಟಲಿಯಲ್ಲಿ ವಿವಾಹವಾದ ಬಳಿಕ ಇದೀಗ ಬೆಂಗಳೂರು ಮತ್ತು ಮುಂಬೈನಲ್ಲಿ ರಿಸೆಪ್ಷನ್ ನಡೆಯಲಿದೆ. ಮುಂಬೈನಲ್ಲಿ ನವೆಂಬರ್ 28ರಂದು ಮತ್ತು ಬೆಂಗಳೂರಿನಲ್ಲಿ ನವೆಂಬರ್ 21ರಂದು ರಿಸೆಪ್ಷನ್ ನಡೆಯಲಿದೆ.