ರಿಕಿ ಪಾಂಟಿಂಗ್ ನಂತರ ಡೆಲ್ಲಿ ಕ್ಯಾಪಿಟಲ್ಸ್ ತಂಡ ತೊರೆಯುತ್ತಾರಾ ರಿಷಬ್ ಪಂತ್..? ಮೆಗಾ ಹರಾಜಿಗೂ ಮುನ್ನ ಹೊರಬಿತ್ತು ಶಾಕಿಂಗ್‌ ಸುದ್ದಿ..!

Tue, 16 Jul 2024-11:19 am,

ಟೀಮ್ ಇಂಡಿಯಾ 17 ವರ್ಷಗಳ ನಂತರ ಟಿ20 ವಿಶ್ವಕಪ್ 2024 ರಲ್ಲಿ ಚಾಂಪಿಯಸ್‌ ಪಟ್ಟ ಗೆದ್ದ ಕುಷಿಯಲ್ಲಿದೆ. ಟಿ20 ವಿಶ್ವಕಪ್ ಬಳಿಕ ಇದೀಗ ಎಲ್ಲರ ಕಣ್ಣು ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಹಾಗೂ ಐಪಿಎಲ್ ಮೇಲೆ ನೆಟ್ಟಿದೆ. ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್ ಋತುವಿನ ಮೊದಲು ಮೆಗಾ ಹರಾಜು ಶೀಘ್ರದಲ್ಲೆ ನಡೆಯಲಿದೆ. ಅದರ ನಂತರ ಅನೇಕ ತಂಡಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಕಾಣಬಹುದಾಗಿದೆ.

ಇದೀಗ ಹಾರಜಿಗೆ ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಬಹು ದೊಡ್ಡ ಬದಲಾವಣೆಗಳು ಆಗುತ್ತಿವೆ, ಏಳು  ಸೀಸನ್‌ಗಳಲ್ಲಿ ತಂಡದ ಕೋಚ್ ಆಗಿದ್ದ ರಿಕಿ ಪಾಂಟಿಂಗ್ ಅವರ ನಿರ್ಗಮನವನ್ನು ಡೆಲ್ಲಿ ಕ್ಯಾಪಿಟಲ್ಸ್ ಇತ್ತೀಚೆಗೆ ಪ್ರಕಟಿಸಿದೆ. ಈ ನಡೆಯೊಂದಿಗೆ, ಫ್ರಾಂಚೈಸಿಯೊಂದಿಗೆ ರಿಷಬ್ ಪಂತ್ ಅವರ ಭವಿಷ್ಯದ ಬಗ್ಗೆ ಚರ್ಚೆಗಳು ಪ್ರಾರಂಭವಾಗಿವೆ. ಕಾರು ಅಪಘಾತದಿಂದಾಗಿ ಒಂದು ವರ್ಷದ ನಂತರ ಐಪಿಎಲ್ 2024 ರಲ್ಲಿ ಕ್ರಿಕೆಟ್‌ಗೆ ಮರಳಿದ ಪಂತ್, ಐಪಿಎಲ್ 2024 ರಲ್ಲಿ ನಾಯಕನಾಗಿ ತಂಡಕ್ಕೆ ಮರಳಿದ್ದರು.  

ರಿಕಿ ಪಾಂಟಿಂಗ್ ನಿರ್ಗಮನದ ನಂತರ, ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತೊರೆಯುತ್ತಾರೆ ಎಂಬ ವದಂತಿಗಳು 'X' ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಚರ್ಚೆಗೆ ಗ್ರಾಸವಾಗುವಂತೆ ಮಾಡಿದೆ. ಪಂತ್ ಚೆನ್ನೈ ಸೂಪರ್ ಕಿಂಗ್ಸ್ ಸೇರಬಹುದು ಎಂದು ಕೆಲವು ಅಭಿಮಾನಿಗಳು ಹೇಳಿಕೊಂಡಿದ್ದಾರೆ.   

ಆದಾಗ್ಯೂ, ಪಂತ್ ಅಥವಾ ಯಾವುದೇ ಅಧಿಕೃತ ಮೂಲಗಳು ಈ ಸುದ್ದಿಯನ್ನು ದೃಢಪಡಿಸಿಲ್ಲ. ಮೆಗಾ ಹರಾಜಿನ ಮುಂಚೆಯೇ ರಿಷಬ್ ಪಂತ್ ದೆಹಲಿ ಕ್ಯಾಪಿಟಲ್ಸ್ ತೊರೆಯಬಹುದು ಎಂದು  'X' ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ. ಈ ಟ್ವೇಟ್‌ನ ಹಿಂದೆ ಊಹಾಪೋಹಗಳು ಇದೀಗ ಸಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.   

ಡೆಲ್ಲಿ ಕ್ಯಾಪಿಟಲ್ಸ್ ಇತಿಹಾಸವು ಇದೇ ರೀತಿಯದ್ದಾಗಿದೆ, ಫ್ರಾಂಚೈಸ್ ಅನೇಕ ಅತ್ಯುತ್ತಮ ಆಟಗಾರರನ್ನು ಈ ಮುಂಚೆ ಕೈಬಿಟ್ಟಿದೆ. ಪಂತ್ ಮೊದಲು ನಾಯಕರಾಗಿದ್ದ ಶ್ರೇಯಸ್ ಅಯ್ಯರ್ ಇದಕ್ಕೆ ಉದಾಹರಣೆ. ಇತರ ಹೆಸರುಗಳಲ್ಲಿ ಆಂಡ್ರೆ ರಸೆಲ್, ಎಬಿ ಡಿವಿಲಿಯರ್ಸ್, ಡೇವಿಡ್ ವಾರ್ನರ್ ಮತ್ತು ಸಂಜು ಸ್ಯಾಮ್ಸನ್ ಕೂಡ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಕೈ ಬಿಟ್ಟವರ ಪಟ್ಟಿಯಲ್ಲಿ ಸೇರಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link