Delhi Floods: ಉಕ್ಕಿ ಹರಿದ ಯಮುನೆ, ರಾಷ್ಟ್ರ ರಾಜಧಾನಿಯ ಹಲವು ಪ್ರದೇಶಗಳು ಜಲಾವೃತ
ಉತ್ತರ ಭಾರತದ ಜೀವನದಿಯಾಗಿರುವ ಯಮುನಾ ನದಿ ಉಕ್ಕಿ ಹರಿಯುತ್ತಿದ್ದು ಇಂದು (ಜುಲೈ 14, 2023) ನದಿ ಪ್ರವಾಹವು ಮಧ್ಯ ದೆಹಲಿಯಲ್ಲಿ ಸುಪ್ರೀಂ ಕೋರ್ಟ್‌ನ ಪ್ರವೇಶದ್ವಾರವನ್ನು ಸಮೀಪಿಸಿತು. ದೆಹಲಿಯ ಈಶಾನ್ಯ ಪ್ರದೇಶದಲ್ಲಿ ಪ್ರವಾಹಕ್ಕೆ ಸಿಲುಕಿದ ಗರ್ಹಿ ಮೆಂಡು ಗ್ರಾಮದ ಮತ್ತು ಉಕ್ಕಿ ಹರಿಯುತ್ತಿರುವ ಯಮುನಾ ನದಿಯ ವೈಮಾನಿಕ ಚಿತ್ರಣ ಇದು.
ಹೊಸ ದೆಹಲಿಯ ಯಮುನಾ ಬಜಾರ್ ಪ್ರದೇಶದ ಮೂಲಕ ಹಸು ಮತ್ತು ಇತರ ಪ್ರಾಣಿಗಳನ್ನು ಸುರಕ್ಷಿತ ಪ್ರದೇಶದೆಡೆಗೆ ಸಾಗಿಸುತ್ತಿರುವ ಸ್ವಯಂ ಸೇವಕರು.
ನಿರಂತರ ಮಳೆಯಿಂದಾಗಿ ಯಮುನಾ ನದಿಯ ನೀರಿನ ಮಟ್ಟವು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು ಪ್ರವಾಹಕ್ಕೆ ತುತ್ತಾದ ರಿಂಗ್ ರಸ್ತೆಯ ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸುವ ಚಿತ್ರ.
ಭಾರೀ ಮಳೆಯಿಂದಾಗಿ ಅಲಿಪುರ್ದೂರ್ ಜಿಲ್ಲೆಯ ತೊರ್ಸಾ ಮತ್ತು ಕಲ್ಜಾನಿ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ಈ ಪ್ರದೇಶದಲ್ಲಿ ಭಾರತೀಯ ಸೇನೆಯ ಪಾರುಗಾಣಿಕಾ ತಂಡ ಪ್ರವಾಹ ಪೀಡಿತರನ್ನು ಬೇರೆಡೆ ಸಾಗಿಸುತ್ತಿರುವ ದೃಶ್ಯ.
ಯಮುನಾ ಖದರ್‌ನಲ್ಲಿ ನೀರು ತುಂಬಿರುವ ಪ್ರವಾಹದ ನೀರಿನಲ್ಲಿ ಆಟವಾಡುತ್ತಿರುವ ಮಕ್ಕಳು.
ನವದೆಹಲಿಯ ಯಮುನಾ ಬಜಾರ್ ನೆರೆ ಪೀಡಿತ ಪ್ರದೇಶದಲ್ಲಿ ಜನರ ಪರದಾಟ.
ದೆಹಲಿಯ ಮಯೂರ್ ವಿಹಾರ್ ಬಳಿಯ ಯಮುನಾ ನದಿಯ ದಡದಲ್ಲಿ ಪ್ರವಾಹದ ನೀರು ಹೆಚ್ಚಾಗುತ್ತಿದ್ದಂತೆ ಜನರು ತಾತ್ಕಾಲಿಕ ಡೇರೆಗಳನ್ನು ಸ್ಥಾಪಿಸಿದ್ದಾರೆ.
ಹೊಸ ದೆಹಲಿಯ ಮಯೂರ್ ವಿಹಾರ್ ಬಳಿ ಯಮುನಾ ನದಿಯ ಉದ್ದಕ್ಕೂ ಪ್ರವಾಹದ ನೀರು ಹೆಚ್ಛಾಗುತ್ತಿದ್ದಂತೆ ಎತ್ತರದ ಪ್ರದೇಶಗಳಿಗೆ ಗುಳೆ ಹೋಗುತ್ತಿರುವ ಜನರು.
ಐಟಿಓ ಬಳಿ ಜಲಾವೃತಗೊಂಡಿರುವ ರಸ್ತೆಗಳು
ಜೈತ್ಪುರ್ ಬಳಿ ಪಾರುಗಾಣಿಕೆಗಾಗಿ ಸಜ್ಜಾಗಿರುವ ಎನ್‌ಡಿಆರ್‌ಎಫ್ ತಂಡ.