ಸರ್ಕಾರದ ಯೋಜನೆಗೆ lOGO ಡಿಸೈನ್ ಮಾಡಿ 50 ಸಾವಿರ ನಗದು ಗೆಲ್ಲಿ

Thu, 20 May 2021-11:41 am,

ಈ ಕೇಂದ್ರ ಸರ್ಕಾರದ ಸ್ಪರ್ಧೆಯಡಿಯಲ್ಲಿ, ಒನ್ ನೇಷನ್ ಒನ್ ರೇಷನ್ ಕಾರ್ಡ್ (One Nation One Ration Card) ಯೋಜನೆಗಾಗಿ ಲೋಗೋವನ್ನು ವಿನ್ಯಾಸಗೊಳಿಸಬೇಕಾಗಿದೆ. ಸರ್ಕಾರದ ಸಿಟಿಜನ್ ಪ್ಲಾಟ್‌ಫಾರ್ಮ್  MyGov  ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನುಹಂಚಿಕೊಂಡಿದೆ.   

ಈ ಸ್ಪರ್ಧೆಯಲ್ಲಿ ಜಯಗಳಿಸಿದ ಸ್ಪರ್ಧಿಗೆ 50,000 ರೂ.ಗಳ ನಗದು ಬಹುಮಾನ ನೀಡಲಾಗುವುದು ಎಂದು ನನ್ನ ಸರ್ಕಾರ ಟ್ವೀಟ್‌ನಲ್ಲಿ ತಿಳಿಸಿದೆ. ಇದರೊಂದಿಗೆ ವಿಜೇತರಿಗೆ ಇ-ಪ್ರಮಾಣಪತ್ರವೂ ಸಿಗುತ್ತದೆ.  ಇದಲ್ಲದೆ ಸ್ಪರ್ಧೆಯಲ್ಲಿ ಭಾಗವಹಿಸುವ ಮೂವರಿಗೆ ಸಮಾಧಾನಕರ ಬಹುಮಾನವಾಗಿ, ಇ-ಪ್ರಮಾಣಪತ್ರವನ್ನು ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಲು ಮೇ 31 ಮೇ 2021 ರ ಒಳಗೆ ಅರ್ಜಿ ಸಲ್ಲಿಸಬಹುದು.  

ಸರ್ಕಾರದ ಈ ಸ್ಪರ್ಧೆಯಲ್ಲಿ ಭಾಗವಹಿಸಲು, ಮೊದಲು  myGov.in ಪೋರ್ಟಲ್‌ಗೆ ಭೇಟಿ ನೀಡಬೇಕಾಗುತ್ತದೆ. ಇಲ್ಲಿ, ಅವರು ಲಾಗಿನ್ ಟು ಪಾರ್ಟಿಸಿಪೇಟ್ ಟ್ಯಾಬ್ ಅನ್ನು ಕ್ಲಿಕ್ ಮಾಡಿ.  ಇದರ ನಂತರ, ನೋಂದಣಿ ವಿವರಗಳನ್ನು ಭರ್ತಿ ಮಾಡಿ. ನೋಂದಣಿ ಆದ ನಂತರ ನಿಮ್ಮ ಎಂಟ್ರಿಯನ್ನು ಸಲ್ಲಿಸಿ.   

ಈ ಸರ್ಕಾರಿ ಲೋಗೋ ವಿನ್ಯಾಸ ಸ್ಪರ್ಧೆಯಲ್ಲಿ ಭಾಗವಹಿಸಲು ವಯಸ್ಸಿನ ಮಿತಿಯಿಲ್ಲ. ಸ್ಪರ್ಧಿಗಳು ಮೂರು ಬಾಋಇ ಎಂಟ್ರಿನ್ನು ದಾಖಲಿಸಬಹುದು. ಲೋಗೋ jpg, bmp ಅಥವಾ  tiff ನ ಹೈರೆಸೆಲ್ಯುಶನ್ (600 ಡಿಪಿಐ)  ಚಿತ್ರವಾಗಿರಬೇಕು. ಲೋಗೀ ಹಿಂದಿ ಅಥವಾ ಇಂಗ್ಲಿಷ್ ಯಾವ ಭಾಷೆಯಲ್ಲಾದರೂ ಇರಬಹುದು. ಲೋಗೋದ ಬಗ್ಗೆ 100 ಪದಗಳಲ್ಲಿ ಮಾಹಿತಿಯನ್ನು ಕೂಡಾ ನೀಡುವುದು ಅವಶ್ಯಕವಾಗಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link