ಶೀಘ್ರದಲ್ಲಿಯೇ ಮೀನ ರಾಶಿಯಲ್ಲಿ ಬೃಹಸ್ಪತಿ ಅಸ್ತ, 4 ರಾಶಿಗಳ ಜನರಿಗೆ 30 ದಿನಗಳಲ್ಲಿ ಧನಹಾನಿ ಸಾಧ್ಯತೆ... ಎಚ್ಚರ!
ಮಿಥುನ ರಾಶಿ: ಮೀನ ರಾಶಿಯಲ್ಲಿ ಗುರುವಿನ ಅಸ್ತ ಮಿಥುನ ರಾಶಿಯ ಜೀವನದಲ್ಲಿ ಕೆಲ ಕಷ್ಟಗಳನ್ನು ತಂದೊಡ್ಡಲಿದೆ. ನೌಕರಿ ಸೇರಿದಂತೆ ಬಿಸ್ನೆಸ್ ನಲ್ಲಿಯೂ ಕೂಡ ಕೆಲ ಸವಾಲುಗಳು ಎದುರಾಗಳಿವೆ. ಪತಿ-ಪತ್ನಿಯರ ನಡುವೆಯೂ ಕೂಡ ಕೆಲ ಸಮಸ್ಯೆಗಳು ಬರಲಿವೆ.
ಧನು ರಾಶಿ: ಗುರು ಅಸ್ತನಾಗುವುದು ಧನು ರಾಶಿಯ ಜಾತಕದವರಿಗೆ ಶಾರೀರಿಕ ಹಾಗೂ ಮಾನಸಿಕ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಈ ರಾಶಿಯ ಜನರು ತಮ್ಮ ಆರೋಗ್ಯದ ವಿಶೇಷ ಕಾಳಜಿವಹಿಸಬೇಕಾದ ಅವಶ್ಯಕತೆ ಇದೆ. ಇದಲ್ಲದೆ ಕುಟುಂಬದಲ್ಲಿ ತಾಯಿ ಅಥವಾ ತಂದೆಯ ಆರೋಗ್ಯದ ಮೇಲೆ ಇದು ವಿಪರೀತ ಪ್ರಭಾವ ಬೀರುವ ಸಾಧ್ಯತೆ ಇದೆ.
ಕನ್ಯಾ ರಾಶಿ: ಗುರು ಅಸ್ತನಾಗುವ ಕಾರಣ ಕನ್ಯಾ ರಾಶಿಗೆ ಸೇರಿದ ಜನರ ಜೀವನದಲ್ಲಿ ಹಲವು ಸಮಸ್ಯೆಗಳು ಎದುರಾಗಲಿವೆ. ಕಾರ್ಯಸ್ಥಳದಲ್ಲಿ ಸಹೋದ್ಯೋಗಿಗಳಿಂದ ಎಚ್ಚರದಿಂದ ಇರಬೇಕಾದ ಅವಶ್ಯಕತೆ ಇದೆ. ಏಕೆಂದರೆ ಅವರು ನಿಮ್ಮ ಪಾಲಿಗೆ ಅಪಾಯದ ಕರೆಗಂಟೆಯಾಗುವ ಸಾಧ್ಯತೆ ಇದೆ. ಇದಲ್ಲದೆ ವೈವಾಹಿಕ ಜೀವನದಲ್ಲಿಯೂ ಕೂಡ ಕೆಲ ಅಡಚನೆಗಳು ಎದುರಾಗಬಹುದು. ಹೀಗಾಗಿ ಯಾವುದೇ ವಿಷಯವನ್ನು ಸುಲಭವಾಗಿ ಕೋಪಿಸಿಕೊಳ್ಳದೆ ನಿರ್ವಹಿಸಲು ಯತ್ನಿಸಿ, ಇಲ್ಲವಾದರೆ ಸಂಬಂಧದಲ್ಲಿ ಹುಳಿ ಬೀಳುವ ಸಾಧ್ಯತೆ ಇದೆ.
ಕುಂಭ ರಾಶಿ: ಗುರುವಿನ ಅಸ್ತ ಕುಂಭ ರಾಶಿಯ ಜನರ ಪಾಲಿಗೆ ಶುಭ ಸಾಬೀತಾಗುವುದಿಲ್ಲ. ಕುಟುಂಬ ಅಥವಾ ಬಂಧು ಮಿತ್ರರ ನಡುವಿನ ಸಂಬಂಧ ಹಾಳಾಗುವ ಸಾಧ್ಯತೆ ಇದೆ. ಮಾತಿನ ಮೇಲೆ ನಿಯಂತ್ರಣವಿರಲಿ. ಯಾವುದೇ ಸಂಗತಿಯನ್ನು ಹೇಳುವಾಗ ಸಾಕಷ್ಟು ಯೋಚಿಸಿ ನಂತರ ಮಾತನಾಡುವುದು ಒಳಿತು. ದಾಂಪತ್ಯ ಜೀವನದಲ್ಲಿ ಸಂಕಷ್ಟಗಳು ತಲೆದೂರುವ ಸಾಧ್ಯತೆ ಇದೆ. ಹೇಗಿರುವಾಗ ಪತಿ-ಪತ್ನಿ ಸೇರಿಕೊಂಡು ಅದರಿಂದ ಹೊರಬರಲು ಯೋಚಿಸುವುದು ಫಲಕಾರಿ ಸಾಬೀತಾಗಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)