ಮುಖ್ಯಮಂತ್ರಿಗಳಿಂದ 448.78 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಕೆ.ಕೆ.ಆರ್.ಟಿ.ಸಿ. ಸಂಸ್ಥೆಯ 1800.35 ಲಕ್ಷ ರೂ. ಮೊತ್ತದ ಒಂದು ಕಾಮಗಾರಿ ಸೇರಿ ಒಟ್ಟಾರೆ ಜಿಲ್ಲೆಯ 242.21 ಕೋಟಿ ರೂ. ಬೃಹತ್ ಮೊತ್ತದ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ದೂರದೃಷ್ಠಿ ಯೋಜನೆಯ ಫಲವಾಗಿ 5 ಕೋಟಿ ರೂ. ಸಿ.ಎಸ್.ಆರ್ ನಿಧಿಯಡಿ ಕಲಬುರಗಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಹೆಚ್ಚಿನ ಆರೋಗ್ಯ ಸೌಕರ್ಯ ಇಲ್ಲದ 10 ಪ್ರಾಥಮಿಕ ಅರೋಗ್ಯ ಕೇಂದ್ರ, 8 ವೆಲ್‍ನೆಸ್ ಸೆಂಟರ್, ಹೆಚ್ಚಿನ ಜನಬಿಡಿತ ಪ್ರದೇಶಗಳಾದ ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ಪಾಲಿಕೆ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ, ನಮ್ಮ ಕ್ಲೀನಿಕ್ ಹಾಗೂ ಇನ್ನಿತರ ಸ್ಥಳದಲ್ಲಿ ಒಟ್ಟಾರೆ 25 ಕಡೆ ಈ "ಹೆಲ್ತ್ ಎ.ಟಿ.ಎಂ" ಸ್ಥಾಪಿಸಲಾಗುತ್ತಿದೆ. ಸ್ಥಳದಲ್ಲಿ ಲ್ಯಾಬ್ ಟೆಕ್ನಿಷಿಯನ್ ಇರಲಿದ್ದಾರೆ. ಇಲ್ಲಿ ಸಾರ್ವಜನಿಕರು ಟೆಲಿ ಮೆಡಿಸಿನ್ ಸೇವೆ ಪಡೆಯಲು ಸಹ ಅವಕಾಶ ಕಲ್ಪಿಸಿದೆ.
ಹೃದ್ರೋಗ, ಎಚ್.ಐ.ವಿ., ಸ್ಯಾತುರೇಚನ್, ಇ.ಸಿ.ಜಿ, ಡೆಂಗ್ಯೂ, ಮಲೇರಿಯಾ ಹೀಗೆ 50ಕ್ಕೂ ಹೆಚ್ಚು ರಕ್ತ ತಪಾಸಣೆಗಳ ವರದಿಯನ್ನು 10 ನಿಮಿಷದಲ್ಲಿಯೇ ಒದಗಿಸುವ “ಹೆಲ್ತ್ ಎ.ಟಿ.ಎಂ.” ಗಳಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡಿದರು.
ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವಮತ್ತು 371(ಜೆ) ಕಾಯ್ದೆ ಜಾರಿಗೆ ಬಂದು 10 ವರ್ಷ ಪೂರೈಸಿರುವ ಕಾರಣ ಕೆ.ಕೆಆರ್.ಡಿ.ಬಿ. ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹೊರತರಲಾದ “ಅಮೃತ ಮಹೋತ್ಸವ ಸ್ಮರಣ ಸಂಚಿಕೆ ಕಲ್ಯಾಣ ಕರ್ನಾಟಕ” ಪ್ರಗತಿ ಸಾಧನೆಯ ಪುಸ್ತಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಪರಿಯಾಂಕ್ ಖರ್ಗೆ, ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್ ಆದಿಯಾಗಿ ಗಣ್ಯರು ಬಿಡುಗಡೆಗೊಳಿಸಿದರು. 60 ಪುಟಗಳನ್ನು ಹೊಂದಿರುವ ಈ ಪುಸ್ತಕವು ಕಳೆದ 10 ವರ್ಷದಲ್ಲಿ ಪ್ರದೇಶದಲ್ಲಿ ಉದ್ಯೋಗ, ಆರೋಗ್ಯ, ಶಿಕ್ಷಣ, ಕೈಗಾರಿಕೆ, ಪ್ರವಾಸೋದ್ಯಮ, ಮೂಲಸೌಕರ್ಯದಲ್ಲಾದ ಪ್ರಗತಿ ಮತ್ತು ಪ್ರದೇಶದಲ್ಲಿ ಆರ್ಥಿಕ ಚೇತರಿಕೆಯ ಪ್ರಗತಿಯ ಕುರಿತು ಬೆಳಕು ಚೆಲ್ಲಲಾಗಿದೆ.
ರಾಜ್ಯದಾದ್ಯಂತ 4,000 ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ ಮಕ್ಕಳ ಪಾಲನೆಗೆ ತೆರೆಯಲಾಗುತ್ತಿರುವ “ಕೂಸಿನ ಮನೆ' ಶಿಶುಪಾಲನಾ ಕೇಂದ್ರಗಳ ಲೋಗೋವನ್ನು ಇಂದಿಲ್ಲಿ ಬಿಡುಗಡೆಗೊಳಿಸಲಾಯಿತು. ಈ ಕೇಂದ್ರದಲ್ಲಿ ಮಕ್ಕಳನ್ನು ನೋಡಿಕೊಳ್ಳಲು ತರಬೇತಿ ಪಡೆದ “ಕೇರ್ ಟೇಕರ್ಸ್” ಸಹ ನಿಯೋಜಿಸಲಾಗುತ್ತಿದೆ. ಇದೂವರೆಗೆ ಪ್ರದೇಶದಲ್ಲಿ 881 ಕೇಂದ್ರ ಸ್ಥಾಪನೆಗೆ ಸ್ಥಳ ಗುರುತಿಸಲಾಗಿದೆ.
ಕೆ.ಕೆ.ಆರ್.ಟಿ.ಸಿ. ಸಂಸ್ಥೆಯು 1800.35 ಲಕ್ಷ ರೂ. ಮೊತ್ತದಲ್ಲಿ ಖರೀದಿಸಲಾದ ಅಮೋಘವರ್ಷ ಬ್ರ್ಯಾಂಡಿನ 36 (ನಾನ್ ಎ.ಸಿ) ಸ್ಲೀಪರ್ ಹಾಗೂ 4 ಎ.ಸಿ. ಸ್ಲೀಪರ್ ಬಸ್‍ಗಳನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದಿಲ್ಲಿ ಹಸಿರು ನಿಶಾನೆ ತೋರಿದರು. 30 ಆಸನಗಳ ಸಾಮಥ್ರ್ಯ ಹೊಂದಿರುವ ಈ ಬಸ್ ಸ್ವಯಂ ಚಾಲಿತ ಅಗ್ನಿ ನಂದಕ ಉಪಕರಣ, ಪ್ರತಿ ಸೀಟಿಗೆ ಕಿರು ಲಗೇಜ್, ಮೋಬೈಲ್-ಲ್ಯಾಪಟಾಪ್ ಚಾರ್ಜಿಂಗ್ ಪಾಯಿಂಟ್, ರೀಡಿಂಗ್ ಲ್ಯಾಂಪ್ ವ್ಯವಸ್ಥೆ, ಏರ್ ಸಸ್ಪೆನ್ಸನ್ ಸಿಸ್ಟಮ್, ಪಬ್ಲಿಕ್ ಇನ್‍ಫಾರ್ಮೇಷನ್ ಸಿಸ್ಟಂ, ರಿವರ್ಸ್ ಪಾರ್ಕಿಂಗ್ ಅಲಾರ್ಮ್ ಸೌಲಭ್ಯ ಒಳಗೊಂಡಿದೆ. ಕನ್ನಡದ ಮೊಟ್ಟ ಮೊದಲ ಉಪಲಬ್ಧ ಗ್ರಂಥ “ಕವಿರಾಜ ಮಾರ್ಗ” ಕೃತಿ ರಚಿಸಿದ ಕವಿ ಅಮೋಘವರ್ಷ ಹೆಸರಿನ ಈ ಬಸ್ಸುಗಳು ನಾಡಿನುದ್ದಕ್ಕೂ ಸಂಚರಿಸುತ್ತಾ, ಕರುನಾಡಿನ ಜನರಿಗೆ ರಾಷ್ಟ್ರಕೂಟರ ಇತಿಹಾಸ ಸಾರುವುದರಲ್ಲಿ ಸಂದೇಹವಿಲ್ಲ.
ಇದಲ್ಲದೆ ಕಲಬುರಗಿ ಜಿಲ್ಲೆಯಲ್ಲಿ ಜೆಸ್ಕಾಂ ನಿಗಮದ 57.41 ಲಕ್ಷ ರೂ. ವೆಚ್ಚದ 1 ಕಾಮಗಾರಿ ಉದ್ಘಾಟನೆ, ಕೆ.ಪಿ.ಟಿ.ಸಿ.ಎಲ್. ನಿಗಮದ 182.93 ಕೋಟಿ ರೂ. ವೆಚ್ಚದ 2 ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು 8.78 ಕೋಟಿ ರೂ. ವೆಚ್ಚದ 1 ಕಾಮಗಾರಿ ಉದ್ಘಾಟನೆ ಸೇರಿ ಒಟ್ಟು 191.72 ಕೋಟಿ ರೂ., ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ 8.50 ಕೋಟಿ ರೂ. ವೆಚ್ಚದ 1 ಕಾಮಗಾರಿ ಉದ್ಘಾಟನೆ, ಜಿಲ್ಲಾ ಕೈಗಾರಿಕೆ ಕೇಂದ್ರದ 4.07 ಕೋಟಿ ರೂ. 1 ಕಾಮಗಾರಿ ಉದ್ಘಾಟನೆ, ಸಮಾಜ ಕಲ್ಯಾಣ ಇಲಾಖೆಯ 18.50 ಕೋಟಿ ರೂ. ವೆಚ್ಚದ 2 ಕಾಮಗಾರಿಗಳ ಉದ್ಘಾಟನೆ, ಪಶುಸಂಗೋಪನೆ ಇಲಾಖೆಯ 84.32 ಲಕ್ಷ ರೂ. ವೆಚ್ಚದ 1 ಕಾಮಗಾರಿ ಉದ್ಘಾಟನೆ