ದೇವಶಯನಿ ಏಕಾದಶಿಯಂದು ಈ ಕೆಲಸಗಳನ್ನು ಮಾಡಿದರೆ ವೃತ್ತಿ ಬದುಕಿನ ಸಮಸ್ಯೆಗಳಿಂದ ಪರಿಹಾರ, ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ
ದೇಶಾದ್ಯಂತ ಇಂದು (ಜುಲೈ 17) ದೇವಶಯನಿ ಏಕಾದಶಿಯನ್ನು ಆಚರಿಸಲಾಗುತ್ತಿದೆ. ವರ್ಷದ 24 ಏಕಾದಶಿಗಳಲ್ಲಿ ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ದೇವಶಯಾನಿ ಏಕಾದಶಿ ಎಂದು ಕರೆಯಲಾಗುತ್ತದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಭಗವಾನ್ ವಿಷ್ಣುವು ಈ ದೇವಶಯಾನಿ ಏಕಾದಶಿಯಿಂದ ನಾಲ್ಕು ತಿಂಗಳಕಾಲ ಯೋಗ ನಿದ್ರೆಗೆ ಜಾರುತ್ತಾನೆ. ಹಾಗಾಗಿ, ಈ ದಿನವನ್ನು ತುಂಬಾ ವಿಶೇಷ ಎಂದು ಹೇಳಲಾಗುತ್ತದೆ.
ದೇವಶಯಾನಿ ಏಕಾದಶಿಯ ದಿನ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಭಗವಾನ್ ವಿಷ್ಣು ಜೊತೆಗೆ ಮಾತೆ ಮಹಾಲಕ್ಷ್ಮಿಯ ಆಶೀರ್ವಾದವನ್ನು ಪಡೆಯಬಹುದು. ಇದರಿಂದ ಜೀವಂದಲ್ಲಿ ಎದುರಾಗಿರುವ ನಾನಾ ಬಗೆಯ ಸಂಕಷ್ಟಗಳಿಂದ ಮುಕ್ತಿ ಪಡೆಯಬಹುದು ಎನ್ನಲಾಗುತ್ತದೆ.
ದೇವಶಯನಿ ಏಕಾದಶಿಯ ದಿನ ಮುಂಜಾನೆ ಬೇಗ ಎದ್ದು ಪುಣ್ಯ ನದಿಯಲ್ಲಿ ಸ್ನಾನ ಮಾಡಿ, ಹಳದಿ ವಸ್ತ್ರವನ್ನು ಧರಿಸಿ ದೇವರ ಕೋಣೆಯಲ್ಲಿ ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿಯ ವಿಗ್ರಹವನ್ನು ಸ್ಥಾಪಿಸಿ. ಇದರಿಂದ ಕೆಲಸದಲ್ಲಿ ಎದುರಾಗಿರುವ ಅಡೆತಡೆಗಳು ಬೇಗ ನಿವಾರಣೆಯಾಗುತ್ತವೆ.
ನೀವು ನಿಮ್ಮ ವೃತ್ತಿ ಬದುಕಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಈ ದಿನ ಭಗವಾನ್ ವಿಷ್ಣುವಿಗೆ ಹಳದಿ ಹೂವುಗಳು ಮತ್ತು ಹಳದಿ ಬಟ್ಟೆಗಳನ್ನು ಅರ್ಪಿಸಿ. ಭಕ್ತಿಯಿಂದ ಕೈ ಮುಗಿಯುವುದರಿಂದ ಉದ್ಯೋಗ ಕ್ಷೇತ್ರದಲ್ಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ.
ದೇವಶಯನಿ ಏಕಾದಶಿಯ ಈ ದಿನ ಒಂದು ಹಳದಿ ಬಟ್ಟೆಯಲ್ಲಿ ಹಳದಿ ಬಣ್ಣದ ಹಣ್ಣುಗಳು ಹಾಗೂ ಸಿಹಿ ತಿನಿಸುಗಳನ್ನು ಕಟ್ಟಿ ಅವಶ್ಯಕತೆ ಇರುವವರಿಗೆ ದಾನ ಮಾಡಿ. ದೇವಸ್ಥಾನದಲ್ಲಿ ತುಪ್ಪದ ದೀಪ ಬೆಳಗಿಸುವುದರಿಂದ ಗ್ರಹ ದೋಷ ನಿವಾರಣೆಯಾಗುತ್ತದೆ.
ನೀವು ಹಣಕಾಸಿನ ಸಮಸ್ಯೆಗಳಿಂದ ತೊಂದರೆಗೊಳಗಾಗಿದ್ದರೆ ದೇವಶಯನಿ ಏಕಾದಶಿಯ ದಿನ ನಿಯಮಾನುಸಾರ ಭಗವಾನ್ ವಿಷ್ಣು, ತಾಯಿ ಲಕ್ಷ್ಮಿ ದೇವಿಯನ್ನು ಪೂಜಿಸಿ, ಮಖಾನ ಖೀರ್ ಅನ್ನು ನೇವೇದ್ಯವಾಗಿ ಅರ್ಪಿಸಿ. ಜೊತೆಗೆ ವಿಷ್ಣು ಸಹಸ್ತ್ರನಾಮದೊಂದಿಗೆ ಲಕ್ಷ್ಮೀ ಸ್ತೋತ್ರವನ್ನು ಪಠಿಸಿದರೆ ಎಲ್ಲವೂ ಒಳಿತಾಗಲಿದೆ.
ದೇವಶಯನಿ ಏಕಾದಶಿಯ ದಿನ ವಿಷ್ಣುವಿಗೆ ಪ್ರಿಯವಾದ ತುಳಸಿ ಪೂಜೆ ಮಾಡಿ ಬೆಳಿಗ್ಗೆ ಹಾಗೂ ಸಂಜೆ ಎರಡೂ ಸಮಯ ತುಪ್ಪದ ದೀಪ ಬೆಳಗಿಸಿ. ಉಪವಾಸ ಆಚರಿಸಿ ಕೇವಲ ಹಳದಿ ಫಲಗಳನ್ನಷ್ಟೇ ಸೇವಿಸಿ. ಇದರಿಂದ ಜೀವನದಲ್ಲಿ ಎದುರಾಗಿರುವ ನಾನಾ ಸಂಕಷ್ಟಗಳಿಂದ ಪರಿಹಾರ ಪಡೆಯಬಹುದು.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.