500 ವರ್ಷಗಳ ನಂತರ ದೀಪಾವಳಿಯಂದೇ ಧನಯೋಗ !ಸಂಪತ್ತಿನ ಸುಧೆಯಲ್ಲಿ ಮಿಂದೇಳುವರು ಈ ರಾಶಿಯವರು !ಕಾರು, ಮನೆ, ಆಸ್ತಿ ಖರೀದಿ !ಕೈ ತುಂಬಾ ನಲಿದಾಡುವಳು ಧನ ಲಕ್ಷ್ಮೀ
ಈ ಬಾರಿಯ ದೀಪಾವಳಿ ವಿಶೇಷವಾಗಿರಲಿದೆ.ಇದಕ್ಕೆ ಕಾರಣ ಶನಿ-ಗುರು ಗ್ರಹಗಳು.ಇವರಿಬ್ಬರ ಚಲನೆಯಲ್ಲಿನ ಬದಲಾವಣೆಯಿಂದ ಧನಯೋಗ ರೂಪುಗೊಳ್ಳುತ್ತಿದೆ. ಇದು ಕೆಲವು ರಾಶಿಯವರಿಗೆ ವಿಶೇಷ ರಾಜಯೋಗವನ್ನು ಕರುಣಿಸುತ್ತದೆ.
ಶನಿಯು ತನ್ನ ಮೂಲ ರಾಶಿಯಾದ ಕುಂಭದಲ್ಲಿ ಹಿಮ್ಮುಖವಾಗಿ ಚಲಿಸಿದರೆ ಗುರು, ವೃಷಭ ರಾಶಿಯಲ್ಲಿ ಹಿಮ್ಮುಖ ನಡೆ ಆರಂಭಿಸುತ್ತಾನೆ.ದೀಪಾವಳಿಯ ಸಂದರ್ಭದಲ್ಲಿ ಈ 2 ಪ್ರಮುಖ ಗ್ರಹಗಳ ನಡೆಯಲ್ಲಿನ ಬದಲಾವಣೆ ಮೂರು ರಾಶಿಯವರಿಗೆ ಅದೃಷ್ಟವಾಗಿ ಪರಿಣಮಿಸುತ್ತದೆ.
ಸಿಂಹ ರಾಶಿ :ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ.ಕೈ ತುಂಬಾ ಹಣ ನಿಲ್ಲಲಿದೆ.ಆರ್ಥಿಕ ಸ್ಥಿತಿ ಭದ್ರವಾಗಿ ಬಿಡುವುದು.ನಿರುದ್ಯೋಗಿಗಳು ಉದ್ಯೋಗ ಪಡೆಯಬಹುದು.ಅವಿವಾಹಿತರ ವಿವಾಹ ನಿಶ್ಚಯವಾಗಬಹುದು
ಜೀವನದಲ್ಲಿ ಸೌಕರ್ಯಗಳು ಮತ್ತು ಐಷಾರಾಮಿಗಳು ಹೆಚ್ಚಾಗುತ್ತವೆ.ಹೊಸ ಕಾರು, ಮನೆ, ಆಸ್ತಿ ಖರೀದಿಸಬಹುದು.ಕುಟುಂಬದಲ್ಲಿ ಸಂತೋಷ ನೆಲೆಯಾಗುವುದು. ಪಾಲುದಾರಿಕೆ ವ್ಯವಹಾರದಿಂದ ಲಾಭವಾಗುವುದು.
ಎರಡೂ ಗ್ರಹಗಳ ಹಿಮ್ಮುಖ ಚಲನೆಯು ಮಕರ ರಾಶಿಯವರಿಗೆ ಧನಯೋಗವನ್ನು ಉಂಟುಮಾಡುತ್ತಿದೆ.ಹಾಗಾಗಿ ಅನಿರೀಕ್ಷಿತ ಹಣವನ್ನು ಪಡೆಯುತ್ತೀರಿ. ಕೀರ್ತಿ ಹೆಚ್ಚಾಗಲಿದೆ. ಉದ್ಯೋಗದಲ್ಲಿ ಇರುವವರಿಗೆ ಬಡ್ತಿ ಸಿಗುವುದು
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ.ZEE NEWS ಇದನ್ನು ಖಚಿತಪಡಿಸುವುದಿಲ್ಲ.