ಪತಿಯ ಸ್ನೇಹಿತನ ಜೊತೆಯೇ ಡೇಟಿಂಗ್!!‌ ಹಾರ್ದಿಕ್‌ ವಿಚ್ಛೇದನ ಬೆನ್ನಲ್ಲೇ ಟೀಂ ಇಂಡಿಯಾದ ಮತ್ತೋರ್ವ ಕ್ರಿಕೆಟಿಗನ ಬದುಕಲ್ಲಿ ಎದ್ದಿತೇ ಬಿರುಗಾಳಿ?

Thu, 15 Aug 2024-4:35 pm,

ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟರ್‌ ಹಾರ್ದಿಕ್‌ ಪಾಂಡ್ಯ ಮತ್ತು ನಟಿ ನತಾಶಾ ಸ್ಟಾಂಕೋವಿಕ್‌ ಇತ್ತೀಚೆಗೆ ವಿಚ್ಛೇದನ ಪಡೆದಿದ್ದರು. ಇದಾದ ಬಳಿಕ ನತಾಶ ತನ್ನ ದೇಶ ಸರ್ಬಿಯಾಗೆ ಮರಳಿದ್ದಾರೆ. ಇನ್ನು ಇದೇ ವಿಚ್ಛೇದನದ ಸಂದರ್ಭದಲ್ಲಿ ಮತ್ತೋರ್ವ ಕ್ರಿಕೆಟಿಗನ ಪತ್ನಿಯ ವೈಯಕ್ತಿಕ ವಿಚಾರ ವೈರಲ್‌ ಆಗಿದ್ದಲ್ಲದೆ, ಆಕೆ ಸೋಶಿಯಲ್‌ ಮೀಡಿಯಾದಲ್ಲಿ ಅಸಮಾಧಾನ ಹೊರ ಹಾಕಿದ್ದರು.

ಸದ್ಯ ಟೀಂ ಇಂಡಿಯಾದಲ್ಲಿ ಅವಕಾಶ ವಂಚಿತರಾಗಿರುವ ಯುಜ್ವೇಂದ್ರ ಚಹಾಲ್‌ ನಮಗೆಲ್ಲರಿಗೂ ತಿಳಿದೇ ಇದೆ. ಇನ್ನು ಇವರ ಪತ್ನಿ ಧನಶ್ರೀ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್‌ ಆಗಿದ್ದಾರೆ. ಡ್ಯಾನ್ಸರ್‌ ಆಗಿರುವ ಧನಶ್ರೀ ಇತ್ತೀಚೆಗೆ ರಿಯಾಲಿಟಿ ಶೋನಲ್ಲೂ ಭಾಗವಹಿಸಿ ಸದ್ದು ಮಾಡಿದ್ದರು.

 

ಆದರೆ ಧನಶ್ರೀ ಬಗ್ಗೆ ಈಗಲೂ ಸೋಶಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಚಿತ್ರವಿಚಿತ್ರ ಕಮೆಂಟ್ʼಗಳನ್ನು ಮಾಡುತ್ತಿದ್ದಾರೆ. ಆಕೆಗೆ ಭಾರತೀಯ ಬ್ಯಾಟರ್ ಶ್ರೇಯಸ್ ಅಯ್ಯರ್ ಜೊತೆ ಸಂಬಂಧ ಇತ್ತು ಎಂಬೆಲ್ಲಾ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಇದು ವದಂತಿ ಅಷ್ಟೇ ಎಂಬುದು ಕೆಲವರ ವಾದ.

 

ಧನಶ್ರೀ ವೃತ್ತಿಯಲ್ಲಿ ದಂತವೈದ್ಯೆ. ಇದೀಗ ಡ್ಯಾನ್ಸರ್‌ ಆಗಿ ಮಿಂಚುತ್ತಿರುವ ಧನ, ಭಾರತದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರ ಪತ್ನಿ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಈಕೆಯ ಹೆಸರನ್ನು ಶ್ರೇಯಸ್‌ ಅಯ್ಯರ್‌ ಜೊತೆ ಲಿಂಕ್‌ ಮಾಡಲಾಗುತ್ತಿದೆ. ಇಷ್ಟೆಲ್ಲಾ ವದಂತಿ ಶುರುವಾಗಲು ಕಾರಣವಾಗಿದ್ದು ಒಂದು ಪೋಸ್ಟ್.‌ ಇದರಲ್ಲಿ ಶ್ರೇಯಸ್‌ ಜೊತೆ ಧನ ತುಂಬಾ ಕ್ಲೋಸ್‌ ಆಗಿ ಫೋಟೋಗೆ ಪೋಸ್ಟ್‌ ಕೊಟ್ಟಿದ್ದರು.

 

ಇನ್ನು ಈ ವದಂತಿಗಳೆಲ್ಲಾ ಎಲ್ಲೆ ಮೀರಿದಾಗ ಮೌನಮುರಿದ ಧನಶ್ರೀ, ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಶೇರ್‌ ಮಾಡಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.

 

"ನನ್ನ ಜೀವನದಲ್ಲಿ ನಾನು ಎಂದಿಗೂ ಟ್ರೋಲ್‌ʼಗಳು ಅಥವಾ ಮೀಮ್‌ʼಗಳಿಂದ ಪ್ರಭಾವಿತವಾಗಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಮುನ್ನೆಲೆಗೆ ಬರುತ್ತಿರುವ ವಿಚಾರಗಳನ್ನು ಗಮನಿಸಿದಾಗ, ಇದು ನನ್ನ ಕುಟುಂಬ ಮತ್ತು ನನ್ನ ಆತ್ಮೀಯರ ಮೇಲೆ ಪರಿಣಾಮ ಬೀರುತ್ತಿದೆ ಎಂದನಿಸುತ್ತಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಿಮ್ಮೆಲ್ಲರಿಗೂ ಮಾತನಾಡಲು ಸ್ವಾತಂತ್ರ್ಯವಿದೆ. ಆದರೆ ಮಾತನಾಡುವ ಭರದಲ್ಲಿ ಬೇರೆಯವರ ಭಾವನೆಗಳನ್ನು ಮರೆತುಬಿಡುತ್ತೀರಿ ಮತ್ತು ನಿರ್ಲಕ್ಷಿಸುತ್ತೀರಿ" ಎಂದು ಹೇಳಿಕೆ ನೀಡಿದ್ದರು.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link