Dhanteras 2022: ಕುಬೇರನ ಕೃಪೆಗೆ ಪಾತ್ರರಾಗಲು ಧಂತೇರಸ್‌ನಲ್ಲಿ ಈ ವಸ್ತುಗಳನ್ನು ದಾನ ಮಾಡಿ
ಕಬ್ಬಿಣದ ವಸ್ತುಗಳು: ಧಂತೇರಸ್ ದಿನದಂದು ಕಬ್ಬಿಣವನ್ನು ದಾನ ಮಾಡುವುದು ಸಹ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನದಂದು ಕಬ್ಬಿಣವನ್ನು ದಾನ ಮಾಡಿದರೆ, ವ್ಯಕ್ತಿಯ ಜೀವನದಲ್ಲಿ ತಲೆದೋರಿರುವ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಇದರೊಂದಿಗೆ ಯಾವುದೇ ಕೆಲಸದಲ್ಲಿ ಬರುವ ಅಡೆತಡೆಗಳೂ ದೂರವಾಗುತ್ತವೆ ಎಂಬ ನಂಬಿಕೆಯೂ ಇದೆ.
ಪೊರಕೆ ದಾನ : ಹಿಂದೂ ಧರ್ಮದಲ್ಲಿ, ಪೊರಕೆಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಧಂತೇರಸ್ ದಿನದಂದು ಪೊರಕೆಯನ್ನು ದಾನ ಮಾಡುವುದು ಕೂಡ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನದಂದು ದೇವಸ್ಥಾನಕ್ಕೆ ಅಥವಾ ಯಾವುದೇ ಬಡವರಿಗೆ ಪೊರಕೆಯನ್ನು ದಾನ ಮಾಡುವುದರಿಂದ ಜೀವನದಲ್ಲಿ ಹಣದ ಕೊರತೆ ಇರುವುದಿಲ್ಲ. ಈ ದಿನ ಪೊರಕೆ ದಾನ ಮಾಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗುತ್ತದೆ.
ಧಾನ್ಯ ದಾನ: ಜ್ಯೋತಿಷ್ಯದಲ್ಲಿ ಧಾನ್ಯಗಳ ದಾನದ ವಿಶೇಷ ಮಹತ್ವವನ್ನು ಹೇಳಲಾಗಿದೆ. ಧಂತೇರಸ್‌ನಲ್ಲಿ ಧಾನ್ಯಗಳನ್ನು ದಾನ ಮಾಡುವುದರಿಂದ ಶುಭ ಫಲ ಸಿಗುತ್ತದೆ. ಧಂತೇರಸ್ ದಿನದಂದು ಆಹಾರ ಧಾನ್ಯಗಳನ್ನು ದಾನ ಮಾಡುವುದರಿಂದ ಮನೆಯ ಕಣಜಗಳು ಖಾಲಿಯಾಗುವುದಿಲ್ಲ ಎಂಬ ನಂಬಿಕೆ ಇದೆ.
ಬಟ್ಟೆ ದಾನ: ಧಂತೇರಸ್ ದಿನದಂದು ಬಡವರಿಗೆ ಅಥವಾ ಅಗತ್ಯ ಇರುವವರಿಗೆ ಬಟ್ಟೆಗಳನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬಡವರಿಗೆ ವಸ್ತ್ರದಾನ ಮಾಡುವುದರಿಂದ ಯಾವತ್ತೂ ಧನ ಮತ್ತು ಧಾನ್ಯಗಳ ಕೊರತೆಯಾಗುವುದಿಲ್ಲ. ಇದಲ್ಲದೆ, ವ್ಯಕ್ತಿಯು ಸಾಲದಿಂದ ಮುಕ್ತನಾಗುತ್ತಾನೆ ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.