59 ವರ್ಷ ಬಳಿಕ ಧನ ತ್ರಯೋದಶಿ ದಿನ ಅಪರೂಪದ ಯೋಗ.. 5 ಜನ್ಮರಾಶಿಯರಿಗೆ ಹಣದ ಹೊಳೆ, ಅಷ್ಟೈಶ್ವರ್ಯ ಪ್ರಾಪ್ತಿ... ಇನ್ನೂ ನಿಮ್ಮ ಗೆಲುವನ್ನು ತಡೆಯೋರಿಲ್ಲ!
dhanteras 2024 shubh yoga: ಮೇಷದಯಲ್ಲಿಯ ಗುರು, ಕನ್ಯಾ ರಾಶಿಯಲ್ಲಿನ ಶುಕ್ರ, ಕುಂಭದಲ್ಲಿರುವ ಶನಿ, ತುಲಾ ರಾಶಿಯಲ್ಲಿರುವ ಸೂರ್ಯನಿಂದಾಗಿ ಅಪರೂಪದ ಯೋಗ ಸಂಭವಿಸಲಿದೆ. 59 ವರ್ಷಗಳ ನಂತರ ಈ ಅಪರೂಪದ ಯೋಗ ಧನ ತ್ರಯೋದಶಿಯಂದು ಸಂಭವಿಸಲಿದೆ. ಈ ಸಮಯದಲ್ಲಿ ಐದು ರಾಶಿಗಳ ಜನರ ಅದೃಷ್ಟದ ಬಾಗಿಲು ತೆರೆದು ಸಕಲ ಸುಖವೂ ಪ್ರಾಪ್ತಿಯಾಗಲಿದೆ.
ಧನ ತ್ರಯೋದಶಿಯ ದಿನದಂದು ಬರುವ ಈ ಅಪರೂಪದ ಯೋಗ ಸಿಂಹ ರಾಶಿಯವರಿಗೆ ಮಂಗಳಕರವಾಗಿದೆ. ಅವಿವಾಹಿತರಿಗೆ ಈ ಅವಧಿಯಲ್ಲಿ ವಿವಾಹ ಯೋಗ ದೊರೆಯುತ್ತದೆ. ಯೋಜಿತ ಕಾರ್ಯಗಳು ಪೂರ್ಣಗೊಳ್ಳಲಿವೆ. ಹೊಸ ಉದ್ಯಮವನ್ನೂ ಆರಂಭಿಸಬಹುದು.
ಮಿಥುನ ರಾಶಿಯವರಿಗೆ ಈ ಯೋಗದಿಂದ ಅನೇಕ ಲಾಭಗಳಿವೆ. ಬಹುದಿನದ ಕಷ್ಟಗಳಿಗೆಲ್ಲ ಪರಿಹಾರ ಸಿಗಲಿದೆ. ಆರೋಗ್ಯವೂ ಸುಧಾರಿಸುತ್ತದೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಲಿದೆ. ಉದ್ಯೋಗಿಗಳಿಗೆ ಉತ್ತಮ ಸಮಯ ಇದಾಗಿದೆ. ಕುಟುಂಬದಲ್ಲಿ ಸಾಮರಸ್ಯ ಹೆಚ್ಚುತ್ತದೆ.
ಮಕರ ರಾಶಿಯವರಿಗೆ ಶುಭಕಾಲ ಶುರುವಾಗಲಿದೆ. ಕೆಲಸದ ಸ್ಥಳದಲ್ಲಿ ಮೆಚ್ಚುಗೆಗೆ ಪಾತ್ರರಾಗುವಿರಿ. ಅಂದುಕೊಂಡ ಕೆಲಸದಲ್ಲಿ ಜಯ ಸಿಗುವುದು. ಕುಟುಂಬದಿಂದ ಬೆಂಬಲವನ್ನು ಪಡೆಯುವಿರಿ. ಪ್ರತಿ ಹೆಜ್ಜೆಗೂ ಯಶಸ್ಸು ನಿಮ್ಮ ಜೊತೆ ಇರುತ್ತದೆ. ಅದೃಷ್ಟದ ದಿನಗಳು ಶುರುವಾಗಲಿವೆ.
ಈ ಅಪರೂಪದ ಯೋಗವು ಮೇಷ ರಾಶಿಯವರಿಗೆ ಸಾಕಷ್ಟು ಲಾಭವನ್ನು ತರಲಿದೆ. ನೀವು ಪ್ರಾರಂಭಿಸುವ ಪ್ರತಿಯೊಂದು ಕೆಲಸದಲ್ಲಿ ಯಶಸ್ವಿಯಾಗುತ್ತೀರಿ. ವೃತ್ತಿಜೀವನದಲ್ಲಿ ಅದ್ಭುತ ಅವಕಾಶಗಳು ನಿಮ್ಮನ್ನು ಹುಡುಕಿ ಬರುತ್ತವೆ. ಆರ್ಥಿಕ ಮುಗ್ಗಟ್ಟಿನಿಂದ ಹೊರಬರುವಿರಿ.
ಧನ ತ್ರಯೋದಶಿಯ ದಿನ ಸೃಷ್ಟಿಯಾಗುವ ಯೋಗದಿಂದಾಗಿ ಕುಂಭ ರಾಶಿಯವರಿಗೆ ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯುತ್ತದೆ. ವಿಶೇಷವಾಗಿ ಪ್ರಾರಂಭಿಸುವ ಯಾವುದೇ ಕೆಲಸದಲ್ಲಿ ಜಯ ಸಿಗುವುದು. ಹಣಕಾಸಿನ ತೊಂದರೆಗಳಿಂದ ಮುಕ್ತಿ ಪಡೆಯುವಿರಿ. ಆದಾಯದ ಮೂಲಗಳು ಹುಟ್ಟಿಕೊಳ್ಳುತ್ತವೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದಕ್ಕೆ ಹೊಣೆಯಲ್ಲ.)