ಪತ್ನಿ ಜೊತೆ ಇರಲು ಕಟ್ಟಿಸಿದ ಐಷಾರಾಮಿ ಮನೆಯನ್ನು ಪೋಷಕರಿಗೆ ಗಿಫ್ಟ್‌ ನೀಡಿದ ಧನುಷ್‌.. ಏಕೆ ಗೋತ್ತಾ..!

Mon, 20 Feb 2023-8:01 pm,

ಕಾಲಿವುಡ್‌ ಸ್ಟಾರ್‌ ನಟ ಧನುಷ್ ತನ್ನ ಪೋಷಕರಿಗಾಗಿ ಚೆನ್ನೈನಲ್ಲಿ ಐಷಾರಾಮಿ ಬಂಗಲೆಯನ್ನು ನಿರ್ಮಿಸಿದ್ದಾರೆ.  

ಧನುಷ್ ಅವರ ಹೊಸ ಮನೆ ಚೆನ್ನೈ ಪೋಯಸ್ ಗಾರ್ಡನ್‌ನಲ್ಲಿದೆ. ಈ ಮನೆಯಲ್ಲಿ ಧನುಷ್ ತನ್ನ ತಂದೆ ತಾಯಿಯೊಂದಿಗೆ ವಾಸಿಸಲಿದ್ದಾರೆ.  

ಪೋಯಸ್ ಗಾರ್ಡನ್‌ನಲ್ಲಿರುವ ರಜನಿಕಾಂತ್ ಅವರ ಮನೆಯ ಪಕ್ಕದಲ್ಲಿ ಧನುಷ್ ಅವರ ಹೊಸ ಮನೆ ಕಟ್ಟಲಾಗಿದೆ.  

ಸೂಪರ್‌ಸ್ಟಾರ್‌ ರಜನಿಕಾಂತ್ ಪುತ್ರಿ ಸೌಂದರ್ಯಾ ಅವರಿಂದ ಧನುಷ್ ದೂರವಾಗುವ ಮುನ್ನ ಇಬ್ಬರೂ ಒಟ್ಟಿಗೆ ಇದ್ದಾಗ ಈ ಮನೆ ನಿರ್ಮಾಣ ಶುರುವಾಗಿತ್ತು.  

150 ಕೋಟಿ ರೂ. ವೆಚ್ಚದಲ್ಲಿ ಧನುಷ್ಯ ಈ ಬಂಗಲೆ ಎರಡು ವರ್ಷಗಳಲ್ಲಿ ನಿರ್ಮಾಣವಾಗಿದೆ.  

ಇದೀಗ ಧನುಷ್ಯ ತಮ್ಮ ಪೋಷಕರ ಜೊತೆ ಹೊಸ ಮನೆಯಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿವೆ.  

ಸದ್ಯ ಧನುಷ್‌ ನಟನೆಯ ʼವಾತಿʼ ಸಿನಿಮಾ ಕಳೆದ ಶುಕ್ರವಾರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು. ಚಿತ್ರದಲ್ಲಿ ಧನುಷ್‌ಗೆ ಜೊತೆಯಾಗಿ ನಟಿ ಸಂಯುಕ್ತಾ, ಜಬರ್ದಸ್ತ್ ಆದಿ ನಟಿಸಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link