Dharmaśāstra: ನಾವು ಯಾವ ದಿಕ್ಕಿಗೆ ಮಲಗಬೇಕು ಗೊತ್ತಾ..?

Wed, 21 Aug 2024-10:58 pm,

ಸಾಮಾನ್ಯವಾಗಿ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಎಂದು ಶಾಸ್ತ್ರಗಳು ಹೇಳುತ್ತವೆ. ಇದು ವೈಜ್ಞಾನಿಕವಾಗಿಯೂ ಸತ್ಯ. ಭೂಮಿ ಪ್ರದಕ್ಷಿಣವಾಗಿ ಸುತ್ತುತ್ತದೆ. ಆದರೆ ನಾವು ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗುವುದರಿಂದ ಅದರ ವಿರುದ್ಧ ದಿಕ್ಕಿಗೆ ತಲೆಹಾಕಿ ಮಲಗಿದಂತಾಗುತ್ತದೆ. ಧಾರ್ಮಿಕವಾಗಿ ಉತ್ತರ ದಿಕ್ಕಿಗೆ ತಲೆ ಹಾಕುವುದು ಶ್ರೇಯಸ್ಕರವಲ್ಲವೆಂದು ನಂಬಲಾಗುತ್ತದೆ.

ಬಾಗಿಲು ಇರುವ ಕಡೆಗೆ ತಲೆ ಅಥವಾ ಕಾಲು ಹಾಕಿ ಮಲಗುವುದೂ ಶ್ರೇಯಸ್ಕರವಲ್ಲ. ನಮ್ಮ ಧರ್ಮಶಾಸ್ತ್ರದ ಪ್ರಕಾರ ಬಾಗಿಲು ದೇವರ ಸಾನಿಧ್ಯವನ್ನು ಹೊಂದಿರುತ್ತದೆ. 

ಹೀಗಾಗಿ ಈ ದಿಕ್ಕಿಗೆ ತಲೆ ಅಥವಾ ಕಾಲು ಹಾಕಿ ಮಲಗುವುದು ಶುಭವಲ್ಲವೆಂಬ ನಂಬಿಕೆಯಿದೆ. ವಾಸ್ತು ಪ್ರಕಾರವೂ ಈ ರೀತಿ ಮಲಗುವುದರಿಂದ ನಕಾರಾತ್ಮಕ ಶಕ್ತಿ ಮನೆ ಪ್ರವೇಶಿಸುತ್ತದೆ.

ನಮ್ಮ ಪೂರ್ವಜರು ಮತ್ತು ದೇವರು ಬಾಗಿಲಿನ ಮೂಲಕ ಮನೆ ಪ್ರವೇಶ ಮಾಡುತ್ತಾರೆ. ಹೀಗಾಗಿ ಈ ದಿಕ್ಕಿಗೆ ತಲೆ ಅಥವಾ ಕಾಲು ಹಾಕಿ ಮಲಗವುದರಿಂದ ನೆಗೆಟಿವ್ ಎನರ್ಜಿ ಪ್ರವೇಶವಾಗಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಈ ದಿಕ್ಕಿಗೆ ಮಲಗಬಾರದು ಅಂತಾ ಶಾಸ್ತ್ರಗಳು ಹೇಳಿವೆ. 

ಹಾಗಾದ್ರೆ ನಾವು ಯಾವ ದಿಕ್ಕಿಗೆ ಮಲಗುವುದು ಒಳ್ಳೆಯದು. ಹಿಂದೂ ಧರ್ಮದ ಪ್ರಕಾರ ನಾವು ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಮಲಗಬೇಕು. ಪೂರ್ವ ದಿಕ್ಕಿಗೆ ತಲೆ ಇಟ್ಟು ಮಲಗುವುದರಿಂದ ಜ್ಞಾಪಕಶಕ್ತಿ, ಏಕಾಗ್ರತೆ, ಉತ್ತಮ ಆರೋಗ್ಯ, ಆಧ್ಯಾತ್ಮಿಕತೆಯತ್ತ ಒಲವು ವೃದ್ಧಿಸುತ್ತದಂತೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link