0 ಬ್ಯಾಂಕ್ ಬ್ಯಾಲೆನ್ಸ್, ಕೈ ತಪ್ಪುವ ಹಂತದಲ್ಲಿ ಮನೆ, ಅಕ್ಷರಶಃ ಬೀದಿಗೆ ಬಂದಿದ್ದ ಈ ಸೂಪರ್ ಸ್ಟಾರ್ ನೆರವಿಗೆ ಮುಂದಾಗಿದ್ದು ಬಿಸಿನೆಸ್ ಐಕಾನ್ ಅಂಬಾನಿ!ಈಗ ಆ ನಟ ಸಾವಿರ ಸಾವಿರ ಕೋಟಿಗಳ ಒಡೆಯ

Mon, 07 Oct 2024-10:00 am,

ಚಿತ್ರರಂಗದ ದಿಗ್ಗಜ ಬಾಲಿವುಡ್ ನ ಬಿಗ್ ಬಿ ಎಂದೇ ಕರೆಸಿಕೊಳ್ಳುತ್ತಿರುವ ಅಮಿತಾಬ್ ಬಚ್ಚನ್ ಇಂದು ಸಾಕಷ್ಟು ಸಂಪತ್ತನ್ನು ಹೊಂದಿರಬಹುದು.ಆದರೆ ಎಲ್ಲವನ್ನು ಕಳಕೊಂಡು  ದಿವಾಳಿಯಾಗಿದ್ದ ಸಮಯ ಕೂಡಾ ಇತ್ತು.ಬ್ಯಾಂಕ್ ಬ್ಯಾಲೆನ್ಸ್ ಶೂನ್ಯವಾಗಿತ್ತು. ಅಮಿತಾಬ್ ಬಚ್ಚನ್ ಕಾರ್ಪೊರೇಷನ್ ಲಿಮಿಟೆಡ್ ನಷ್ಟದಲ್ಲಿತ್ತು. 

90 ರ ದಶಕದ ಹೊತ್ತಿಗೆ, ಅಮಿತಾಬ್ ತಮ್ಮದೇ ಆದ ಕಂಪನಿಯನ್ನು ಪ್ರಾರಂಭಿಸಿದರು.  ಚಲನಚಿತ್ರ ನಿರ್ಮಾಣದ ಜೊತೆಗೆ ಈವೆಂಟ್‌ಗಳನ್ನು ಸಹ ಈ ಕಂಪನಿ ನಿರ್ವಹಿಸುತ್ತದೆ.ಮೊದಲ ವರ್ಷದಲ್ಲಿ ಎಲ್ಲವೂ ಸರಿಯಾಗಿತ್ತು. ಆದರೆ ಎರಡನೇ ವರ್ಷದಲ್ಲಿ ಅದರ ಲಾಭ ಕುಸಿಯಲಾರಂಭಿಸಿತು.

ಎಬಿಸಿಎಲ್ 1996 ರಲ್ಲಿ ನಡೆದ ವಿಶ್ವ ಸುಂದರಿ ಕಾರ್ಯಕ್ರಮವನ್ನು ಕೂಡಾ ಆಯೋಜಿಸಿತ್ತು.  ಇದರ ಅಡಿಯಲ್ಲಿ ಅನೇಕ ದಕ್ಷಿಣ ಚಲನಚಿತ್ರಗಳನ್ನು ನಿರ್ಮಿಸಲಾಯಿತು. ಬಂಗಾಳಿಯಿಂದ ಗುಜರಾತಿ ಮತ್ತು ಮರಾಠಿ ಚಲನಚಿತ್ರಗಳ ನಿರ್ಮಾಣ ಮಾಡಲಾಗಿತ್ತು.ಕ್ರಮೇಣ ಕಂಪನಿಯು ನಷ್ಟ ಅನುಭವಿಸಲು ಆರಂಭಿಸಿತು.   

ಒಂದು ಘಟನೆಯಿಂದ ಅಮಿತಾಬ್ ಬಚ್ಚನ್ ಅವರ ಕಂಪನಿಗೆ 4 ಕೋಟಿ ರೂಪಾಯಿ ನಷ್ಟವಾಗಿದೆ. ನಂತರ ಮೃದುದಾತ, ಫ್ಯಾಮಿಲಿ, ಸಾತ್ ರಂಗ್ ಕೆ ಸಪ್ನಾ,ಅಕ್ಸ್ ಟು ಮೇಜರ್ ಸಾಹಬ್ ಚಿತ್ರಗಳೂ ಸೋತವು. 

1999 ಅಮಿತಾಬ್ ಬಚ್ಚನ್ ಅವರಿಗೆ ಬಹಳ ಕಷ್ಟದ ಸಮಯವಾಗಿತ್ತು.ಅವರು ದಿವಾಳಿಯಾದರು. ನೌಕರರಿಗೆ ಕೂಲಿ ಕೊಡಲೂ ಹಣವಿರಲಿಲ್ಲ.ಬಂಗಲೆಯನ್ನು ಅಡಮಾನ ಇಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ರಿಲಯನ್ಸ್ ಫೌಂಡೇಶನ್‌ನ ಕಾರ್ಯಕ್ರಮವೊಂದರಲ್ಲಿ,ತಮ್ಮ ಕೆಟ್ಟ ಸಮಯವನ್ನು ನೆನಪಿಸಿಕೊಂಡಿದ್ದಾರೆ. ನನ್ನ ಬ್ಯಾಂಕ್ ಬ್ಯಾಲೆನ್ಸ್ ಶೂನ್ಯವಾಗಿದ್ದ ಸಮಯದಲ್ಲಿ ಧೀರೂಭಾಯಿ ಅಂಬಾನಿ ತಮ್ಮ ಕಿರಿಯ ಮಗ ಅನಿಲ್ ಅವರನ್ನು ನನ್ನ ಬಳಿಗೆ ಕಳುಹಿಸಿ  ಸಹಾಯ ಹಸ್ತ ಚಾಚಿರುವುದನ್ನು ನೆನೆಸಿಕೊಂಡಿದ್ದಾರೆ.     

ಸಾಲವನ್ನು ತೀರಿಸಲು ಹಣಕಾಸಿನ ನೆರವು ನೀಡುವುದಾಗಿ ಅಂಬಾನಿ ಹೇಳಿದ್ದರಂತೆ. ಆದರೆ ಅಮಿತಾಬ್ ಹಣ ತೆಗೆದುಕೊಂಡಿರಲಿಲ್ಲ.ಆದರೆ ಇಂದಿಗೂ ಧೀರೂಭಾಯಿ ಅಂಬಾನಿಯವರ ಔದಾರ್ಯವನ್ನು ನೆನೆಸುತ್ತಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link