Dhoni Birthday: ಕೂಲ್ ಕ್ಯಾಪ್ಟನ್‌ಗೆ ಜನ್ಮದಿನದ ಸಂಭ್ರಮ.. ಇವು ಅವರ ಶ್ರೇಷ್ಠ 5 ದಾಖಲೆಗಳು
ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್, ಐಸಿಸಿ ಟಿ-20 ಕ್ರಿಕೆಟ್ ವಿಶ್ವಕಪ್ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ವಿಶ್ವದ ಮೊದಲ ಕ್ಯಾಪ್ಟನ್ ಎಂಬ ಖ್ಯಾತಿ ಎಂ.ಎಸ್.ಧೋನಿ ಅವರಿಗೆ ಸಲ್ಲುತ್ತದೆ. 2007ರಲ್ಲಿ ಮೊದಲ T20, 2011ರಲ್ಲಿ ವಿಶ್ವಕಪ್, 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿ ಕೊಟ್ಟಿದ್ದಾರೆ.
ಸದಾ ತಮ್ಮ ಶಾಂತ ಸ್ವಭಾವ, ಚಾಣಾಕ್ಷತೆಯಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ ಕೂಲ್ ಕ್ಯಾಪ್ಟನ್ ಧೋನಿ. ಇವರು ಕೇವಲ ಒಬ್ಬ ಅತ್ಯುಮ ನಾಯಕ ಮಾತ್ರವಲ್ಲ ಅತ್ಯುತ್ತಮ ಫಿನಿಷರ್ ಎಂದು ಸಹ ಪ್ರಸಿದ್ಧಿ ಪಡೆದಿದ್ದಾರೆ. ಇದೆಲ್ಲದರ ಜೊತೆಗೆ ಧೋನಿ ಅತ್ಯುತ್ತಮ ಸ್ಟಂಪರ್ ಸಹ ಹೌದು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸ್ಟಂಪಿಂಗ್ ಮಾಡಿದ ವಿಶ್ವದಾಖಲೆ ಧೋನಿ ಹೆಸರಿನಲ್ಲಿದೆ. 195 ಸ್ಟಂಪಿಂಗ್ಸ್ ಮಾಡಿದ್ದಾರೆ ಧೋನಿ. ಶ್ರೀಲಂಕಾದ ಕುಮಾರ ಸಂಗಕ್ಕಾರ, 139 ಸ್ಟಂಪಿಂಗ್ಸ್ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ಐದು ಮತ್ತು ಐದಕ್ಕಿಂತ ಕೆಳ ಕ್ರಮಾಂಕದಲ್ಲಿ ಆಟವಾಡಿ ಅತಿ ಹೆಚ್ಚು ರನ್‌ಗಳಿಸಿದ ಖ್ಯಾತಿ ಧೋನಿ ಅವರದ್ದು. ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರುವ ಧೋನಿ, 10,268 ರನ್ ಕಲೆ ಹಾಕಿದ್ದಾರೆ. ಸೌತ್ ಆಫ್ರಿಕಾದ ಮಾರ್ಕ್ ಬೌಚರ್ 9365 ರನ್ ಗಳಿಸಿದ್ದು, ಎರಡನೇ ಸ್ಥಾನದಲ್ಲಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕನಾಗಿ 331 ಪಂದ್ಯಗಳನ್ನು ಆಡಿದ್ದಾರೆ. ಟಿ20 ಪಂದ್ಯಗಳಲ್ಲಿಯೂ ಅತಿ ಹೆಚ್ಚು ಬಾರಿ ನಾಯಕನಾದ ದಾಖಲೆ ಧೋನಿ ಅವರದ್ದೇ. 324 ಪಂದ್ಯಗಳನ್ನಾಡಿದ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಎರಡನೇ ಸ್ಥಾನದಲ್ಲಿದ್ದಾರೆ.
ಏಕದಿನ ಪಂದ್ಯಗಳಲ್ಲಿ ಧೋನಿ 84 ಬಾರಿ ಅಜೇಯರಾಗಿ ಉಳಿದಿದ್ದಾರೆ. ಹೀಗೆ ಅಜೇಯರಾಗಿ ಉಳಿದ 84 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳನ್ನಷ್ಟೇ ಭಾರತ ಸೋತಿದೆ.