ಮೂರು ICC ಪ್ರಶಸ್ತಿ ಗೆದ್ದ ಏಕೈಕ ನಾಯಕನಾದ್ರೂ ಧೋನಿಗೆ ಸಿಕ್ಕಿಲ್ಲ ಅರ್ಜುನ ಪ್ರಶಸ್ತಿ: ಕಾರಣವೇನು ಗೊತ್ತಾ?
ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ತೋರಿದ ಉತ್ತಮ ಪ್ರದರ್ಶನ, ನಾಯಕತ್ವ, ಕ್ರೀಡಾ ಮನೋಭಾವ ಮತ್ತು ಶಿಸ್ತನ್ನು ಗಮನದಲ್ಲಿಟ್ಟುಕೊಂಡು ಭಾರತದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಅಂದಹಾಗೆ ಮಂಗಳವಾರದಂದು ಅಂದರೆ ಜನವರಿ 9ರಂದು ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಆದರೆ, ಎಂಎಸ್ ಧೋನಿ ಅವರು ಭಾರತದ ಪರ ಎರಡು ಬಾರಿ ವಿಶ್ವಕಪ್ ಮತ್ತು ಒಂದು ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದಾರೆ. ಅಷ್ಟೇ ಅಲ್ಲದೆ, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅವರನ್ನು ಅತ್ಯಂತ ಯಶಸ್ವಿ ನಾಯಕ ಎಂದು ಪರಿಗಣಿಸಲಾಗುತ್ತದೆ.
ಇಷ್ಟೆಲ್ಲಾ ಕೀರ್ತಿ ಪಡೆದಿದ್ದರೂ ಸಹ ಧೋನಿಗೆ ಅರ್ಜುನ ಪ್ರಶಸ್ತಿಯನ್ನು ನೀಡಲಾಗಿಲ್ಲ. ಇದರ ಹಿಂದೆ ಒಂದು ಕಾರಣವಿದೆ. ಅದೇನೆಂದು ತಿಳಿದುಕೊಳ್ಳೋಣ.
ಅರ್ಜುನ ಪ್ರಶಸ್ತಿಗಿಂತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಂದಹಾಗೆ ಈ ಪ್ರಶಸ್ತಿ ಪಡೆದಿರುವುದು ಧೋನಿ ಮಾತ್ರ ಎಂಬುದು ಸತ್ಯ. ಭಾರತದ ಅತ್ಯುನ್ನತ ಕ್ರೀಡಾ ಗೌರವವಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು 2007 ರಲ್ಲಿ ನೀಡಿ ಗೌರವಿಸಲಾಗಿತ್ತು.
ಕಳೆದ ವರ್ಷ ಭಾರತದಲ್ಲಿ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್’ನಲ್ಲಿ ಶಮಿ 24 ಪ್ರಮುಖ ವಿಕೆಟ್ ಪಡೆದು ವಿಶೇಷ ದಾಖಲೆಗಳನ್ನು ತಮ್ಮ ಬತ್ತಳಿಕೆಗೆ ಸೇರಿಸಿಕೊಂಡಿದ್ದರು. ಆ ಮೂಲಕ ಭಾರತ ಫೈನಲ್ ತಲುಪುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.