ಈ ಹಣ್ಣುಗಳು ಆರೋಗ್ಯ ಸಿರಿಯಾಗಿದ್ದರೂ ಮಧುಮೇಹಿಗಳು ಮಾತ್ರ ಮುಟ್ಟಿಯೂ ನೋಡುವಂತಿಲ್ಲ
ಕೆಲವರಿಗೆ ಅನಾನಸ್ ಎಂದರೆ ತುಂಬಾ ಇಷ್ಟ. ಹಾಗಂತ ನೀವು ಮಧುಮೇಹದಿಂದ ಬಳಲುತ್ತಿದ್ದರೆ ಈ ಹಣ್ಣನ್ನು ತಿನ್ನುವಂತಿಲ್ಲ. ರಕ್ತದಲ್ಲಿನ ಸಕ್ಕರೆ ಹೆಚ್ಚಾಗಿದ್ದು, ನಿಯಂತ್ರಣದಲ್ಲಿಲ್ಲದಿದ್ದರೆ ಅನಾನಸ್ ಸೇವಿಸಲೇ ಬಾರದು.
ಬೇಸಿಗೆಯಲ್ಲಿ ಹೆಚ್ಚು ಇಷ್ಟಪಡುವ ಹಣ್ಣು, ಮಾವು. ರುಚಿಕರ ರಸಭರಿತ ಹಣ್ಣಿಗೆ ಮನಸೋಲದವರುಂಟೆ. ಆದರೆ ಇದು ಮಧುಮೇಹಿಗಳಿಗೆ ಒಳ್ಳೆಯದಲ್ಲ. ಮಾವಿನ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಅಂಶ ಹೆಚ್ಚಿದ್ದು, ವೈದ್ಯರ ಸಲಹೆಯಿಲ್ಲದೆ ಮಧುಮೇಹಿಗಳು ಸೇವಿಸಬಾರದು.
ಮಧುಮೇಹ ರೋಗಿಗಳಿಗೆ ಬಾಳೆಹಣ್ಣು ಕೂಡಾ ಉತ್ತಮ ಆಯ್ಕೆಯಲ್ಲ, ಅವರ ರಕ್ತದಲ್ಲಿನ ಸಕ್ಕರೆಯ ಮಟ್ಟವು ಅಧಿಕವಾಗಿರುತ್ತದೆ. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಸೇರಿದಂತೆ ಅನೇಕ ವಿಶೇಷ ಪೋಷಕಾಂಶಗಳು ಸಮೃದ್ಧವಾಗಿದ್ದರೂ, ಅದರ ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್‌ನಿಂದಾಗಿ, ಇದು ಮಧುಮೇಹದಲ್ಲಿ ಒಳ್ಳೆಯದಲ್ಲ.
ಕೆಲವರು ಸಪೋಟ ಹಣ್ಣನ್ನು ಅತಿಯಾಗಿ ಇಷ್ಟಪಡುತ್ತಾರೆ. ಆದರೆ ಮಧುಮೇಹ ರೋಗಿಗಳಿಗೆ ಇದು ಉತ್ತಮ ಹಣ್ಣು ಅಲ್ಲವೇ ಅಲ್ಲ. ಈ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ನೈಸರ್ಗಿಕ ಸಕ್ಕರೆ ಕಂಡು ಬರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.
ದ್ರಾಕ್ಷಿ ಹಣ್ಣಿನಲ್ಲಿ ಕೂಡಾ ವಿವಿಧ ರೀತಿಯ ಪೋಷಕಾಂಶಗಳಿರುತ್ತವೆ. ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಉಪಯುಕ್ತವೆಂದು ಪರಿಗಣಿಸಲಾಗಿದೆ. ಆದರೆ ದ್ರಾಕ್ಷಿಯು ಮಧುಮೇಹ ರೋಗಿಗಳಿಗೆ ಮಾತ್ರ ಉತ್ತಮ ಆಯ್ಕೆಯಲ್ಲ. ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಹೆಚ್ಚಾಗುತ್ತದೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)