ನಿತ್ಯ ಬೆಳಿಗ್ಗೆ ಈ 5 ಕೆಲಸ ಮಾಡುವುದರಿಂದ ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಬಹುದು
ಮಧುಮೇಹ ರೋಗಿಗಳು ವೈದ್ಯರ ಸಲಹೆ ಮೇರೆಗೆ ನಿತ್ಯ ಬೆಳಿಗ್ಗೆ ನಿಮ್ಮ ಶುಗರ್ ಟೆಸ್ಟ್ ಮಾಡುವುದು ಅಗತ್ಯ. ಈ ಮೂಲಕ ನೀವು ನಿಮ್ಮ ಬ್ಲಡ್ ಶುಗರ್ ಲೆವೆಲ್ ಮೇಲೆ ನಿಗಾ ಇಡುವುದರ ಜೊತೆಗೆ ಅದು ಹೆಚ್ಚಾಗದಂತೆಯೂ ಕಾಳಜಿವಹಿಸಬಹುದಾಗಿದೆ.
ಉತ್ತಮ ಆರೋಗ್ಯಕ್ಕೆ ಯೋಗ, ವಾಕಿಂಗ್, ಜಾಕಿಂಗ್, ವ್ಯಾಯಾಮ ತುಂಬಾ ಒಳ್ಳೆಯದು. ಅದರಲ್ಲೂ ಡಯಾಬಿಟಿಸ್ ಸಮಸ್ಯೆ ಇರುವವರಿಗೆ ನಿತ್ಯ ಮಾರ್ನಿಂಗ್ ವಾಕ್ ಮಾಡಲು ಸಲಹೆ ನೀಡಲಾಗುತ್ತದೆ.
ಡಯಾಬಿಟಿಸ್ ರೋಗಿಗಳಿಗೆ ನಿತ್ಯ ಬೆಳಿಗ್ಗೆ ಅವರ ಪಾದಗಳ ಮೇಲೆ ಕಣ್ಣಿಡಲು ಮುಖ್ಯ. ವಾಸ್ತವವಾಗಿ, ಮಧುಮೇಹ ರೋಗಿಗಳಿಗೆ ಪಾದದ ನರಗಳಲ್ಲಿ ಬಹಳ ಬೇಗ ಹಾನಿಯಾಗುವ ಸಾಧ್ಯತೆ ಇರುತ್ತದೆ. ನಿತ್ಯ ಪಾದವನ್ನು ಗಮನಿಸುವುದರಿಂದ ಯಾವುದೇ ಸಣ್ಣ ಬದಲಾವಣೆ ಕಂಡು ಬಂದರೂ ತಕ್ಷಣ ಚಿಕಿತ್ಸೆ ಪಡೆಯಬಹುದು.
ಮಧುಮೇಹ ರೋಗಿಗಳು ನಿತ್ಯ ಬೆಳಿಗ್ಗೆ ಎದ್ದ ಕೂಡಲೇ ತಪ್ಪದೇ ಒಂದು ಲೋಟ ನೀರು ಕುಡಿಯಿರಿ. ಈ ರೀರಿ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುವುದು ಸುಲಭವಾಗುತ್ತದೆ.
ಮಧುಮೇಹ ರೋಗಿಗಳು ಯಾವುದೇ ಕಾರಣಕ್ಕೂ ನಿಮ್ಮ ಬೆಳಗಿನ ಉಪಹಾರದ ವಿಷಯದಲ್ಲಿ ನಿರ್ಲಕ್ಷ್ಯವಹಿಸಬೇಡಿ ಅಥವಾ ಎಂದಿಗೂ ಕೂಡ ಉಪಹಾರವನ್ನು ಬಿಡುವ ತಪ್ಪನ್ನು ಮಾಡಬೇಡಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.