ಯಾವುದೇ ಪಥ್ಯ ಬೇಡ! ಬರೀ ತುಪ್ಪ ತಿಂದ್ರೆ ಸಾಕು ಶುಗರ್ ಹೆಚ್ಚಾಗಲ್ಲ, ಯಾಕ್ ಗೊತ್ತಾ?
ತುಪ್ಪದಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ಹಲವು ಪೋಷಕಾಂಶಗಳು ಅಡಕವಾಗಿವೆ. ಹಾಗಾಗಿಯೇ ದಿನ ತುಪ್ಪ ತಿನ್ನುವುದರಿಂದ ಮಧುಮೇಹಿಗಳಲ್ಲಿ ಬ್ಲಡ್ ಶುಗರ್ ಲೆವೆಲ್ ಹೆಚ್ಚಾಗುವುದಿಲ್ಲ.
ತುಪ್ಪದಲ್ಲಿರುವ ಆರೋಗ್ಯಕರ ಕೊಬ್ಬುಗಳು ಮಧುಮೇಹಿಗಳಲ್ಲಿ ಇನ್ಸುಲಿನ್ ಸುಧಾರಿಸಿ, ಶುಗರ್ ಸ್ಪೈಕ್ ಕಡಿಮೆ ಮಾಡಲು ಸಹಾಯಕವಾಗಿದೆ.
ತುಪ್ಪವು ದೇಹಕ್ಕೆ ಅಗತ್ಯ ಶಕ್ತಿ ಒದಗಿಸುವುದರಿಂದ ಬ್ಲಡ್ ಶುಗರ್ ಲೆವೆಲ್ ಭಾರೀ ಏರಿಳಿತವನ್ನು ತಪ್ಪಿಸಬಹುದು.
ತುಪ್ಪದಲ್ಲಿ ಕಂಡು ಬರುವ ಸಿಎಲ್‌ಎ ಕೊಬ್ಬಿನಾಮ್ಲಗಳು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುವ ಮೂಲಕ ಶುಗರ್ ಕಂಟ್ರೋಲ್ ಮಾಡಲು ಸಹಾಯಕವಾಗಿದೆ.
ತುಪ್ಪ ಕಡಿಮೆ ಗ್ಲೈಸೆಮಿಕ್ ಇಂಪ್ಯಾಕ್ಟ್ ಆಗಿರುವುದರಿಂದ ಆಹಾರದಲ್ಲಿ ಇದನ್ನು ಸೇರಿಸುವುದರಿಂದ ಬ್ಲಡ್ ಶುಗರ್ ತಕ್ಷಣ ಏರುಪೇರಾಗುವುದಿಲ್ಲ.
ತುಪ್ಪದಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿದೆ. ಇದು ಇನ್ಸುಲಿನ್ ಉತ್ಪಾದನೆಗೆ ಕಾರಣವಾದ ಮೇದೋಜ್ಜೀರಕ ಗ್ರಂಥಿಯ ಕೋಶಗಳನ್ನು ರಕ್ಷಿಸುತ್ತದೆ.
ತುಪ್ಪದಲ್ಲಿರುವ ಉರಿಯೂತದ ಸಂಯುಕ್ತಗಳು ದೇಹದಲ್ಲಿ ಉರಿಯೂತವನ್ನು ನಿಯಂತ್ರಿಸಿ, ಇನ್ಸುಲಿನ್ ಕಾರ್ಯವನ್ನು ಸುಧಾರಿಸಲು ಸಹಾಯಕವಾಗಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.