Diabetes: ಮಧುಮೇಹ ನಿಯಂತ್ರಣಕ್ಕೆ ಈ ಆಹಾರಗಳನ್ನು ಸೇವಿಸಿರಿ

Wed, 10 Jul 2024-10:10 am,

ಬಾಯಿಗೆ ಕಹಿ ಎನಿಸುವ ಹಾಗಲಕಾಯಿ ಉದರಕ್ಕೆ ಸಿಹಿ ಅಂತಲೇ ಹೇಳಬಹುದು. ಮಧುಮೇಹಿಗಳು ನಿತ್ಯ ಇದನ್ನು ಸೇವಿಸುವುದರಿಂದ ಸಕ್ಕರೆ ಕಾಯಿಲೆ ಬಹುತೇಕ ನಿಯಂತ್ರಣಕ್ಕೆ ಬರುತ್ತದೆ. ಇದು ಕೊಬ್ಬು ಕರಗಿಸುತ್ತದೆ ಮತ್ತು ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ. ಹೀಗಾಗಿ ನಿತ್ಯ ಆಹಾರ ಕ್ರಮದಲ್ಲಿ ಹಾಗಲಕಾಯಿ ಸೇವಿಸಿ.

ಪಾಲಕ್ ಸೊಪ್ಪು ಹಲವಾರು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಅತ್ಯುತ್ತಮ ಪ್ರಮಾಣದ ನಾರಿನಾಂಶವಿದ್ದು, ಇದು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.

ಹಸಿ ಎಳ್ಳು ಸೇವನೆಯಿಂದಲೂ ಮಧುಮೇಹ ನಿಯಂತ್ರಿಸಬಹುದು. ಬೆಲ್ಲ ಬೆರೆಸದೆ ಜ್ಯೂಸ್ ತಯಾರಿಸಿ ಕುಡಿಯುವ ಮೂಲಕ ಮತ್ತು ಆಹಾರದೊಂದಿಗೆ ಎಳ್ಳನ್ನು ಬಳಸುವ ಮೂಲಕ ಟೈಪ್ 2 ಮಧುಮೇಹವನ್ನು ಕಡಿಮೆ ಮಾಡಬಹುದು. ಎಳ್ಳಿನಲ್ಲಿರುವ ಪೋಷಕಾಂಶಗಳು ದೇಹದ ಇತರ ಆರೋಗ್ಯ ಸಮಸ್ಯೆಗಳನ್ನೂ ನಿವಾರಿಸುತ್ತದೆ.

ಮೆಂತ್ಯೆಕಾಳು ಕಹಿಯಾಗಿದ್ದರೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿದಿನ ರಾತ್ರಿ ನೀರಿನಲ್ಲಿ ಮೆಂತ್ಯೆ ಬೀಜಗಳನ್ನು ನೆನೆಸಿ ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದರಿಂದ ಮಧುಮೇಹ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುತ್ತದೆ. 

ಮಧುಮೇಹ ಹೊಂದಿರುವವರು ಹಣ್ಣು ಮತ್ತು ತರಕಾರಿಗಳನ್ನು ಪ್ರತಿದಿನ ಸೇವಿಸಬೇಕು. ಕೆಲವು ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ಮಧುಮೇಹ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ವೈದ್ಯರ ಸಲಹೆ ಮೇರೆಗೆ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದು ಉತ್ತಮ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link