Diabetes in Kids: ಪೋಷಕರು ಗಮನಹರಿಸಬೇಕಾದ ಪ್ರಮುಖ 5 ಲಕ್ಷಣಗಳು
ಕುಟುಂಬದಲ್ಲಿ ಮಧುಮೇಹದ ಇತಿಹಾಸ ಹೊಂದಿರುವವರ ಮಕ್ಕಳಲ್ಲಿ ಮಧುಮೇಹ ಕಾಯಿಲೆ ಸಾಮಾನ್ಯವಾಗಿದೆ. ಆದರೆ, ನಿಮ್ಮ ಮಗುವಿಗೆ ಮಧುಮೇಹವಿದೆಯೇ ಎಂದು ಗುರುತಿಸುವುದು ಹೇಗೆ? ಮಕ್ಕಳಲ್ಲಿ ಮಧುಮೇಹದ ಲಕ್ಷಣಗಳು ವಯಸ್ಕರಿಗೆ ಹೋಲುತ್ತವೆಯೇ? ಮಕ್ಕಳಲ್ಲಿ ಮಧುಮೇಹವನ್ನು ಸಂಪೂರ್ಣವಾಗಿ ಗುಣಪಡಿಸಬಹುದೇ? ನೀವು ತಿಳಿದುಕೊಳ್ಳಬೇಕಾದ ಉಪಯುಕ್ತ ಮಾಹಿತಿ ಇಲ್ಲಿದೆ.
ಒಂದೇ ಒಂದು ದಿನದಲ್ಲಿ ಅನೇಕ ಬಾರಿ ನೀರು ಕುಡಿದರೂ ಬಾಯಾರಿಕೆ ತಣಿಯುತ್ತಿಲ್ಲವೆಂದಾದರೆ ಅಥವಾ ನೀರು ಕುಡಿಯುವ ವಿಚಾರವಾಗಿ ನಿಮ್ಮ ಮಗು ಚಡಪಡಿಕೆ ಅನುಭವಿಸುತ್ತಿದ್ದರೆ ಇದು ಎಚ್ಚರಿಕೆಯ ಸಂಕೇತವಾಗಿದೆ.
ನಿಮ್ಮ ಮಗುವಿಗೆ ಸ್ಪಷ್ಟವಾಗಿ ನೋಡಲು ಕಷ್ಟವಾಗಿದ್ದರೆ, ಅದು ಮಧುಮೇಹದ ಸಂಕೇತವಾಗಿರಬಹುದು ಮತ್ತು ಸಾಕಷ್ಟು ಟಿವಿ ನೋಡುವ ಅಥವಾ ಹೆಚ್ಚು ಅಧ್ಯಯನ ಮಾಡುವ ಫಲಿತಾಂಶವಲ್ಲ.
ಯಾವುದೇ ವಯಸ್ಸಿನ ರೋಗಿಗಳಲ್ಲಿ ಮಧುಮೇಹದ ದೊಡ್ಡ ಲಕ್ಷಣಗಳಲ್ಲಿ ಇದು ಒಂದಾಗಿದೆ. ನಿಮ್ಮ ಮಗು ಆಗಾಗ್ಗೆ ಶೌಚಾಲಯಕ್ಕೆ ಓಡುತ್ತಿದ್ದರೆ, ಅದು ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಳದ ದೊಡ್ಡ ಸಂಕೇತವಾಗಿದೆ.
ಮಕ್ಕಳು ಸಾಮಾನ್ಯವಾಗಿ ಇಂತಿಷ್ಟೇ ಆಹಾರ ಸೇವಿಸಬೇಕು ಅನ್ನೋದನ್ನು ರೂಢಿಸಿಕೊಂಡಿರುವುದಿಲ್ಲ. ಆದರೆ ನಿಮ್ಮ ಮಗುವಿನಲ್ಲಿ ಸಾಮಾನ್ಯ ಚಟುವಟಿಕೆಗಳೊಂದಿಗೆ ಹಠಾತ್ ಹಸಿವು ಹೆಚ್ಚಳವಾಗಿರುವುದನ್ನು ಗಮನಿಸಿದರೆ ಎಚ್ಚರವಹಿಸಬೇಕು. ಆಗ ನಿಮ್ಮ ಮಗುವಿಗೆ ನೀವು ಮಧುಮೇಹದ ಪರೀಕ್ಷೆಯನ್ನು ಮಾಡುವುದರ ಬಗ್ಗೆ ಯೋಚಿಸಬೇಕು.
ನಿಮ್ಮ ಮಗುವಿಗೆ ಚರ್ಮದ ಮೇಲೆ ದದ್ದು ಅಥವಾ ತುರಿಕೆ ಉಂಟಾಗಿದ್ದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ ಪರಿಶೀಲನೆ ನಡೆಸಬೇಕು. ವಿವರಿಸಲಾಗದ ರೋಗ ಲಕ್ಷಣ ಅಥವಾ ಮನೆಮದ್ದು ನೀಡಿದರೂ ವಾಸಿಯಾದ ಚರ್ಮ ರೋಗ ಲಕ್ಷಣ ಕಂಡು ಬಂದರೆ ಮಗುವಿನ ಸಂಪೂರ್ಣ ಆರೋಗ್ಯ ಪರಿಶೀಲನೆ ನಡೆಸಬೇಕು.