Fruits For Diabetics: ಮಧುಮೇಹಿಗಳೂ ತಿನ್ನಬಹುದಾದ ಹಣ್ಣುಗಳಿವು
ಹಣ್ಣುಗಳು ಆರೋಗ್ಯಕ್ಕೆ ಉತ್ತಮವಾದರೂ ಡಯಾಬಿಟಿಸ್ ಸಮಸ್ಯೆ ಇರುವವರಿಗೆ ಕೆಲವು ಹಣ್ಣುಗಳನ್ನು ಸೇವಿಸದಂತೆ ಸಲಹೆ ನೀಡಲಾಗುತ್ತದೆ. ಹಣ್ಣುಗಳಲ್ಲಿ ನೈಸರ್ಗಿಕ ಸಕ್ಕರೆ ಪ್ರಮಾಣ ಹೆಚ್ಚಾಗಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಆದಾಗ್ಯೂ, ಮಧುಮೇಹಿಗಳೂ ಕೂಡ ನಿರ್ಭೀತರಾಗಿ ತಿನ್ನಬಹುದಾದ ಕೆಲವು ಹಣ್ಣುಗಳಿವೆ. ಅವುಗಳೆಂದರೆ...
ಸಾಮಾನ್ಯವಾಗಿ ಜಾಮೂನ್ ಎಂದೇ ಖ್ಯಾತಿ ಪಡೆದಿರುವ ನೇರಳೆ ಹಣ್ಣುಗಳನ್ನು ಮಧುಮೆಹಿಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ಸೀಬೆ ಅಥವಾ ಪೇರಲ ಹಣ್ಣುಗಳನ್ನು ಕೂಡ ಡಯಾಬಿಟಿಸ್ ರೋಗಿಗಳಿಗೆ ಪ್ರಯೋಜನಕಾರಿ ಎಂದು ನಂಬಲಾಗಿದೆ. ಕ್ಯಾಲೋರಿಗಳು ಮತ್ತು ಫೈಬರ್ ಪೇರಲ ಹಣ್ಣುಗಳಲ್ಲಿ ಕಡಿಮೆ ಇದ್ದು ಇದು ಬ್ಲಡ್ ಶುಗರ್ ಅನ್ನು ಕಡಿಮೆ ಮಾಡುವಲ್ಲಿಯೂ ತುಂಬಾ ಪ್ರಯೋಜನಕಾರಿ ಆಗಿದೆ.
ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿರುವ ಪರಂಗಿ ಹಣ್ಣು ಶುಗರ್ ಲೆವೆಲ್ ಅನ್ನು ನಿಯಂತ್ರಿಸುವಲ್ಲಿಯೂ ಪ್ರಯೋಜನಕಾರಿ ಆಗಿದ್ದು, ಇದನ್ನು ಮಧುಮೇಹಿಗಳಿಗೆ ಅತ್ಯುತ್ತಮ ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.