Diabetes: ಮಧುಮೇಹ ರೋಗಿಗಳಿಗೆ ತುಂಬಾ ಅಪಾಯಕಾರಿ ಈ ಹಣ್ಣುಗಳು
ಮಧುಮೇಹ/ಡಯಾಬಿಟಿಸ್: ನಮ್ಮಲ್ಲಿ ಸಿಹಿ ತಿಂಡಿಗಳೆಂದರೆ ಕೆಲವರಿಗೆ ಪಂಚಪ್ರಾಣ. ನಿಮಗೆಲ್ಲ ತಿಳಿದಿರುವಂತೆ ಸಿಹಿ ತಿಂಡಿಗಳು ಮಧುಮೇಹ/ಡಯಾಬಿಟಿಸ್ ಅಪಾಯವನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ, ಕೆಲವು ಹಣ್ಣುಗಳ ಸೇವನೆಯಿಂದಲೂ ಕೂಡ ಮಧುಮೇಹದ ಅಪಾಯ ಹೆಚ್ಚಾಗುತ್ತದೆ. ಮಧುಮೇಹಿಗಳು ಸಕ್ಕರೆ ಅಂಶ ಹೆಚ್ಚಿರುವ ಆಹಾರದಿಂದ ದೂರವಿರಬೇಕು. ಇದಕ್ಕೆ ಹಣ್ಣುಗಳು ಕೂಡ ಹೊರತಾಗಿಲ್ಲ. ಹಾಗಾಗಿ, ಮಧುಮೇಹ ಸಮಸ್ಯೆ ಇರುವವರು ಯಾವ ಹಣ್ಣುಗಳಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ನೋಡುವುದಾದರೆ...
ಮಾವಿನ ಹಣ್ಣು: ಹಣ್ಣುಗಳ ರಾಜ ಮಾವಿನ ಹಣ್ಣಿನ ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರೂರುತ್ತದೆ. ಅನೇಕರು ಮಾವಿನ ಹಣ್ಣನ್ನು ತುಂಬಾ ಇಷ್ಟಪಡುತ್ತಾರೆ. ಆದರೆ, ಮಧುಮೆಹಿಗಳಿಗೆ ಮಾವಿನ ಹಣ್ಣಿನ ಸೇವನೆ ಅಪಾಯಕಾರಿ ಎಂದು ಸಾಬೀತುಪಡಿಸಬಹುದು.
ದ್ರಾಕ್ಷಿ: ದ್ರಾಕ್ಷಿ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆಯ ಅಂಶ ಹೆಚ್ಚಾಗಿತ್ತದೆ. ಹಾಗಾಗಿ, ಅತಿಯಾದ ದ್ರಾಕ್ಷಿ ಹಣ್ಣಿನ ಸೇವನೆ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ವೇಗವಾಗಿ ಹೆಚ್ಚಿಸಬಹುದು.
ಲಿಚಿ: ತಿನ್ನಲು ಬಲು ರುಚಿಕರವಾದ ಲಿಚಿ ಹಣ್ಣಿನಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿರುವುದರಿಂದ ಈ ಹಣ್ಣು ಕೂಡ ಮಧುಮೆಹಿಗಳಿಗೆ ಆರೋಗ್ಯ ಸ್ನೇಹಿ ಹಣ್ಣಲ್ಲ ಎಂದು ಹೇಳಲಾಗುತ್ತದೆ.
ಕಲ್ಲಂಗಡಿ: ಕಲ್ಲಂಗಡಿ ಹಣ್ಣಿನ ಸೇವನೆಯಿಂದ ದೇಹದಲ್ಲಿ ನೀರಿನ ಕೊರತೆಯನ್ನು ನೀಗಿಸಬಹುದು. ಆದರೆ, ಸಕ್ಕರೆ ರೋಗಿಗಳಿಗೆ ಈ ಹಣ್ಣನ್ನು ಅಪಾಯಕಾರಿ ಹಣ್ಣು ಎಂದು ಪರಿಗಣಿಸಲಾಗುತ್ತದೆ.
ಅನಾನಸ್: ಅನಾನಸ್ ಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಅಷ್ಟೇ ಅಲ್ಲದೆ, ಇದರಲ್ಲಿ ಸಕ್ಕರೆಯ ಪ್ರಮಾಣವೂ ತುಂಬಾ ಅಧಿಕವಾಗಿರುವುದರಿಂದ ಮಧುಮೇಹಿಗಳು ಅನಾನಸ್ ಸೇವನೆಯನ್ನು ತಪ್ಪಿಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.