Bilvapatra Benefits: ಶಿವನಿಗೆ ಪ್ರಿಯವಾದ ಈ ಎಲೆಯಿಂದ ಫಟಾಫಟ್ ಕಂಟ್ರೋಲ್ ಆಗುತ್ತೆ ಶುಗರ್
ಭಗವಾನ್ ಶಿವನಿಗೆ ಬಲು ಪ್ರಿಯವಾದ ಬಿಲ್ವಪತ್ರೆ ಹಲವು ಔಷಧೀಯ ಗುಣಗಳನ್ನು ಒಳಗೊಂಡಿದ್ದು ಇದರ ಬಳಕೆಯಿಂದ ಶುಗರ್ ಕಂಟ್ರೋಲ್ ಮಾಡುವುದು ತುಂಬಾ ಸುಲಭ. ಅಷ್ಟೇ ಅಲ್ಲ, ಇದರಿಂದ ಹಲವು ಆರೋಗ್ಯ ಪ್ರಯೋಜನಗಳು ಕೂಡ ಇವೆ.
ಈ ಒತ್ತಡದ ಜೀವನ ಶೈಲಿಯಲ್ಲಿ ಡಯಾಬಿಟಿಸ್ ಸರ್ವೇ ಸಾಮಾನ್ಯ ಕಾಯಿಲೆಯಾಗಿದೆ. ಆದರೆ ಬಿಲ್ವಪತ್ರೆಯಿಂದ ಚಹಾ ತಯಾರಿಸಿ ಸೇವಿಸುವುದರಿಂದ ಇದು ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸಿ ಶುಗರ್ ಕಂಟ್ರೋಲ್ ಮಾಡಲು ಸಹಕಾರಿ ಆಗಿದೆ.
ಬಿಲ್ವಪತ್ರೆ ಎಲೆಗಳನ್ನು ಚೆನ್ನಾಗಿ ತೊಳೆದು ಕಲ್ಲಿನ ಮೇಲೆ ಅರೆದು ಇದನ್ನು ಕಣ್ಣುಗಳ ರೆಪ್ಪೆಯ ಮೇಲೆ ಹಚ್ಚುವುದರಿಂದ ಕಣ್ಣಿನ ಸಮಸ್ಯೆಗಳು ನಿವಾರಣೆಯಾಗಿ ದೃಷ್ಟಿ ವೃದ್ಧಿಯಾಗುತ್ತದೆ.
ಬಿಲ್ವಪತ್ರೆಯನ್ನು ನೀರಿನಲ್ಲಿ ನೆನೆಹಾಕಿ ಸ್ನಾನ ಮಾಡುವ ನೀರಿಗೆ ಅದನ್ನು ಬೆರೆಸಿ ಸ್ನಾನ ಮಾಡುವುದರಿಂದ ದೇಹದ ದುರ್ಗಂಧ ನಿವಾರಿಸಬಹುದು.
ನಿತ್ಯ ಒಂದೆರಡು ಚಮಚ ಬಿಲ್ವಪತ್ರೆ ರಸ ಸೇವಿಸುವುದರಿಂದ ದೇಹದಲ್ಲಿ ನಿಶ್ಚಕ್ತಿ ದೂರವಾಗಿ ನೆಮ್ಮದಿಯ ನಿದ್ರೆ ಪಡೆಯಬಹುದು.
ಬಿಲ್ವಪತ್ರೆ ಕಷಾಯ ತಯಾರಿಸಿ ಸೇವಿಸುವುದರಿಂದ ಮಾನಸಿಕ ಒತ್ತಡ ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.
ಬಿಲ್ವಪತ್ರೆಯಲ್ಲಿ ವಿಟಮಿನ್ ಎ, ಸಿ, ಉತ್ಕರ್ಷಣ ನಿರೋಧಕಗಳು ಹೇರಳವಾಗಿದ್ದು ಇದು ಹೈಬಿಪಿ, ಕೊಲೆಸ್ಟ್ರಾಲ್ ನಿಯಂತ್ರಿಸಿ ಹೃದಯದ ಆರೋಗ್ಯಕ್ಕೂ ಕೊಡುಗೆ ನೀಡುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.